news18-kannada Updated:December 24, 2020, 6:33 PM IST
ಪ್ರಾತಿನಿಧಿಕ ಚಿತ್ರ.
ನವ ದೆಹಲಿ (ಡಿಸೆಂಬರ್ 24); ಇಂಗ್ಲೆಂಡ್ನಲ್ಲಿ ಹೊಸ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು ಇಡೀ ವಿಶ್ವ ಮತ್ತೆ ಆತಂಕಕ್ಕೆ ಒಳಗಾಗಿದೆ. ಪರಿಣಾಮ ಭಾರತ ಸರ್ಕಾರ ಇಂಗ್ಲೆಂಡ್ನಿಂದ ಭಾರತಕ್ಕೆ ಆಗಮಿಸಲಿರುವ ಎಲ್ಲಾ ವಿಮಾನಗಳನ್ನೂ ರದ್ದುಗೊಳಿಸಿದೆ. ಆದರೆ, ಕೊನೆಯ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ 47 ವರ್ಷದ ಮಹಿಳೆ ಹಾಗೂ ಅವರ 22 ವರ್ಷ ಮಗನ ರಾಪಿಡ್ ಆಂಟಿಜೆನ್ ಟೆಸ್ಟ್ ಪರೀಕ್ಷಾ ವರದಿ ಪಾಸಿಟಿವ್ ಆಗಿದ್ದು, ಅವರನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಐಸೊಲೇಶನ್ ಮಾಡಲಾಗಿತ್ತು. ಈ ವೇಳೆ ಇಬ್ಬರೂ ಐಸೊಲೇಶನ್ ಕೇಂದ್ರಗಳಿಂದ ತಪ್ಪಿಸಿಕೊಂಡದ್ದ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೆ ಇವರನ್ನು ಆಂಧ್ರಪ್ರದೇಶದ ರಾಜಂಮಡ್ರಿಯಲ್ಲಿ ಮತ್ತೆ ಪತ್ತೆಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐಸೊಲೇಶನ್ ಕೇಂದ್ರದಿಂದ ರೈಲಿನ ಮೂಲಕ ತಾಯಿ ಮತ್ತು ಮಗ ರಾಜಮಂಡ್ರಿಗೆ ನಿನ್ನೆ ರಾತ್ರಿ ವಿಶೇಷ ರೈಲಿನಲ್ಲಿ ತೆರೆಳಿದ್ದಾರೆ. ಖಚಿತ ಮಾಹಿತಿ ಮೇರೆಗೆ ತೆರಳಿದ್ದ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ತಾಯಿ ಮತ್ತು ಮಗ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಅಲ್ಲದೆ,
ಅವರನ್ನು ಮತ್ತೆ ರೈಲ್ವೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಕೆವಿಎಸ್ ಗೌರಿಶ್ವರ ರಾವ್, "ನಾವು ತಾಯಿ ಮತ್ತು ಮಗನನ್ನು ಕ್ಷಿಪ್ರ ಆಂಟಿಜೆನ್ ಮತ್ತು ಆರ್ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಿದ್ದೇವೆ. ಜೀನೋಮ್ ಅನುಕ್ರಮಕ್ಕಾಗಿ ನಾವು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಮಾದರಿಗಳನ್ನು ಕಳುಹಿಸಿದ್ದೇವೆ. ಆದರೆ, ಇಬ್ಬರಲ್ಲೂ ಈವರೆಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : TamilNadu Politics: ತಮಿಳುನಾಡಿನಲ್ಲಿ ಮತ್ತೊಂದು ಹೊಸ ಪಕ್ಷದ ಉದಯ?; ಕರುಣಾನಿಧಿ ಹಿರಿಮಗ ಅಳಗಿರಿ ಘೋಷಣೆ
ವಶಕ್ಕೆ ಪಡೆದ ನಂತರ ಇಬ್ಬರೂ ಸೋಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, "ತನಗೆ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹೀಗಾಗಿಯೇ ನಾನು ಐಸೊಲೇಶನ್ ಕೇಂದ್ರದಿಂದ ತಪ್ಪಿಸಿಕೊಂಡೆ" ಎಂದು ಇಂಗ್ಲೆಂಡ್ನಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದ ಮಹಿಳೆ ತಿಳಿಸಿದ್ದಾರೆ.
ಮಹಿಳೆ ಪ್ರಥಮ ದರ್ಜೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ರೈಲಿನಲ್ಲಿ ಯಾರೊಂದಿಗೂ ಸಂವಹನ ನಡೆಸಿಲ್ಲ ಎಂದು ಆಂಧ್ರಪ್ರದೇಶ ಸರ್ಕಾರ ತಿಳಿಸಿದೆ. ಎರಡನೆಯ ಪ್ರಕರಣದಲ್ಲಿ, ಇತ್ತೀಚೆಗೆ ಯುಕೆಯಿಂದ ಆಗಮಿಸಿ COVID-19 ಪಾಸಿಟಿವ್ಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ದೆಹಲಿಯ ಪ್ರತ್ಯೇಕ ಕೇಂದ್ರದಿಂದ ತಪ್ಪಿಸಿಕೊಂಡು ಪಂಜಾಬ್ನ ಲುಧಿಯಾನವನ್ನು ತಲುಪಿದ್ದಾರೆ ಎನ್ನಲಾಗುತ್ತಿದೆ.
Published by:
MAshok Kumar
First published:
December 24, 2020, 6:33 PM IST