ಬೀದರ್​​​​ನಲ್ಲಿ 5 ಮಂದಿ SSLC ವಿದ್ಯಾರ್ಥಿಗಳಿಗೆ ಕೊರೋನಾ; ಒಟ್ಟು 18 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ಈ ಸೋಂಕಿತರ ಸಂಪರ್ಕದಲ್ಲಿದ್ದ ಹುಮ್ನಾಬಾದ್ ತಾಲೂಕಿನ 09, ಬಸವಕಲ್ಯಾಣ ತಾಲೂಕಿನ ಒಬ್ಬ ವಿದ್ಯಾರ್ಥಿ ಸಹ ಪರೀಕ್ಷೆಯಿಂದ ಗೈರಾಗಿದ್ದಾರೆ. ಇನ್ನು ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಮೂವರು ವಿದ್ಯಾರ್ಥಿಗಳಿಗೂ ಸಹ ಸೋಂಕು ಧೃಡಪಟ್ಟಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೀದರ್(ಜೂ.25): ಗಡಿ ಜಿಲ್ಲೆ ಬೀದರ್​​ನಲ್ಲಿ ಐದು ಜನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ 10 ವಿದ್ಯಾರ್ಥಿಗಳು ಸಹ ಪರೀಕ್ಷೆಗೆ ಗೈರಾಗಿದ್ದಾರೆ.

ಈ ಬಗ್ಗೆ ನ್ಯೂಸ್ 18ನೊಂದಿಗೆ ಮಾತನಾಡಿದ ಬೀದರ್​ ಡಿಡಿಪಿಐ ಸಿ.ಚಂದ್ರಶೇಖರ್, ಜಿಲ್ಲೆಯಲ್ಲಿ ಒಟ್ಟು 18 ಜನ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸೋಂಕಿತ ಐವರು ವಿದ್ಯಾರ್ಥಿಗಳನ್ನು ಜಿಲ್ಲೆಯ ಚಿಟಗುಪ್ಪಾದ ಓರ್ವ ವಿದ್ಯಾರ್ಥಿ, ಬೀದರ್ ತಾಲೂಕಿನ 03, ಭಾಲ್ಕಿ ತಾಲೂಕಿನ ಒಬ್ಬ ಎಂದು ಗುರುತಿಸಲಾಗಿದೆ.

ಈ ಸೋಂಕಿತರ ಸಂಪರ್ಕದಲ್ಲಿದ್ದ ಹುಮ್ನಾಬಾದ್ ತಾಲೂಕಿನ 09, ಬಸವಕಲ್ಯಾಣ ತಾಲೂಕಿನ ಒಬ್ಬ ವಿದ್ಯಾರ್ಥಿ ಸಹ ಪರೀಕ್ಷೆಯಿಂದ ಗೈರಾಗಿದ್ದಾರೆ. ಇನ್ನು ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಮೂವರು ವಿದ್ಯಾರ್ಥಿಗಳಿಗೂ ಸಹ ಸೋಂಕು ಧೃಡಪಟ್ಟಿದೆ.

ಉತ್ತರ ಪ್ರದೇಶ, ಬಿಹಾರ ಮೂಲದವರಾದ ಇವರು ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. ಲಾಕ್​ಡೌನ್​​ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಿದ್ದ ಈ ಮೂವರು ಪರೀಕ್ಷೆ ಘೋಷಣೆಯಾಗುತ್ತಲೇ ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಬೀದರ್ ನಗರಕ್ಕೆ ವಾಪಸಾಗಿದ್ದರು.

ಈ ವೇಳೆ ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೋನಾ  ಪರೀಕ್ಷಾ ವರದಿ ಪಾಸಿಟಿವ್ ಬಂದದ್ದರಿಂದ ಈ ಮೂವರು ಅನ್ಯ ರಾಜ್ಯದ ವಿದ್ಯಾರ್ಥಿಗಳು ಸಹ ಪರೀಕ್ಷೆಯಿಂದ ಗೈರಾಗಿದ್ದಾರೆ.
First published: