CoronaVirus: ದೆಹಲಿಯನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ; ಸೋಮವಾರವೂ 805 ಪ್ರಕರಣಗಳು ಪತ್ತೆ 17 ಮಂದಿ ಸಾವು!

ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಾ 18 ಲಕ್ಷ ದಾಟಿದೆ. ಆಗಸ್ಟ್ 2ರಂದು 52,972 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 18,03,695ಕ್ಕೆ ಏರಿಕೆಯಾಗಿದೆ.

news18-kannada
Updated:August 3, 2020, 7:57 PM IST
CoronaVirus: ದೆಹಲಿಯನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ; ಸೋಮವಾರವೂ 805 ಪ್ರಕರಣಗಳು ಪತ್ತೆ 17 ಮಂದಿ ಸಾವು!
ಪ್ರಾತಿನಿಧಿಕ ಚಿತ್ರ.
  • Share this:
ಜಗತ್ತಿನ ಜಂಘಾಬಲವನ್ನೇ ಅಡಗಿಸಿರುವ ಕೊರೋನಾ ಮಹಾಮಾರಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ದಿಗಿಲಿಗೀಡುಮಾಡಿದೆ. ದೆಹಲಿಯಲ್ಲಿ ಸೋಮವಾರ 805 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.


arvind-kejriwal
ಪ್ರತಿದಿನ ಸಂಜೆ ಕಳೆದ 24 ಗಂಟೆಯಲ್ಲಿ ಹೊಸದಾಗಿ ಕಂಡುಬರುವ ಕೊರೋನಾ ಪ್ರಕರಣಗಳನ್ನು ದೆಹಲಿ ಸರ್ಕಾರ ಬಿಡುಗಡೆ ಮಾಡುತ್ತಿದೆ‌.


ಅದೇ ರೀತಿ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಹೊಸದಾಗಿ 805 ಕೊರೊನಾ ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಇದರಿಂದ ದೆಹಲಿಯ ಕೊರೋನಾ ಪೀಡಿತರ ಸಂಖ್ಯೆ 1,38,482ಕ್ಕೆ ಏರಿಕೆಯಾದಂತಾಗಿದೆ.


PFI members doing last rites
ದೆಹಲಿಯಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ  17 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ದೆಹಲಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,021ಕ್ಕೆ ಏರಿಕೆಯಾದಂತಾಗಿದೆ.


coronavirus testing
ಜುಲೈ ತಿಂಗಳ ಆರಂಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಕಂಡುಬರುತ್ತಿದ್ದವು. ತಿಂಗಳಾಂತ್ಯದಲ್ಲಿ  ಸಾವಿರದ ಗಡಿ ಬಳಿ ಬಂದಿದ್ದವು. ಆಗಸ್ಟ್ ತಿಂಗಳಲ್ಲಿ ಪ್ರತಿದಿನ 1 ಸಾವಿರಕ್ಕೂ ಕಡಿಮೆ ಪ್ರಕರಣಗಳು ಪತ್ತೆಯಾಗತೊಡಗಿವೆ.


corona virus
ಸೋಮವಾರ 937 ಜನ ಸೇರಿದಂತೆ ಈವರೆಗೆ 1,24,254 ಜನರು ಗುಣಮುಖರಾಗಿದ್ದಾರೆ. 10,207 ಕೊರೊನಾ ಪ್ರಕರಣಗಳು ಆ್ಯಕ್ಟೀವ್ ಇವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.


ಇದಲ್ಲದೆ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಾ 18 ಲಕ್ಷ ದಾಟಿದೆ. ಆಗಸ್ಟ್ 2ರಂದು 52,972 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 18,03,695ಕ್ಕೆ ಏರಿಕೆಯಾಗಿದೆ.
corona virus india updates 14 lakh corona virus cases crosses in india
ಸೋಮವಾರ 771 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 38 ಸಾವಿರದ ಗಡಿ‌ ದಾಟಿದ್ದು 38,135ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 11,86,203‌ ಜನ ಮಾತ್ರ. ದೇಶದಲ್ಲಿ ಇನ್ನೂ 5,79,357 ಜನರಲ್ಲಿ ಕೊರೊನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.
Published by: MAshok Kumar
First published: August 3, 2020, 7:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading