CoronaVirus: ಕೇರಳದಲ್ಲಿ ಶೇ.17 ರಷ್ಟು ಕುಸಿದ ಕೊರೋನಾ ಪ್ರಕರಣಗಳ ಸಂಖ್ಯೆ​, ದೇಶದಾದ್ಯಂತ 2.5 ಲಕ್ಷ ಜನರಿಗೆ ಸೋಂಕು!

ಕೇರಳದಲ್ಲಿ ಕೊರೋನಾ ವೈರಸ್​ ಸಂಖ್ಯೆ ಶೇ.17 ರಷ್ಟು ಕುಸಿತ ಕಂಡಿದೆ. ಅಲ್ಲದೆ, ವಾರಕ್ಕೊಮ್ಮೆ ಶೇ.13 ರಷ್ಟು ಕಡಿಮೆಯಾಗುತ್ತಿದೆ. ಮುಂಬೈನಲ್ಲೂ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಕೊರೋನಾ ವೈರಸ್.

ಕೊರೋನಾ ವೈರಸ್.

 • Share this:
  ಕೊಚ್ಚಿ (ಸೆಪ್ಟೆಂಬರ್​ 13); ಹತ್ತು ದಿನಗಳ ಓನಂ (Onam) ಹಬ್ಬ ಮುಗಿಯುತ್ತಿದ್ದಂತೆ ನೆರೆಯ ಕೇರಳದಲ್ಲಿ ಕೊರೋನಾ ವೈರಸ್ (Kerala CoronaVirus)​ ಅಧಿಕವಾಗಿತ್ತು. ಪ್ರತಿದಿನ 50 ಸಾವಿರಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಮಹಾರಾಷ್ಟ್ರದಲ್ಲೂ (Maharashtra) ಸಹ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದವು. ಇದು ಸಾಮಾನ್ಯವಾಗಿ ಮೂರನೇ ಅಲೆಯ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೂ ಕೇರಳ ಮತ್ತು ಮಹಾರಾಷ್ಟ್ರ ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದವು. ಆದರೆ, ಇದೀಗ ದೊರಕಿರುವ ಮಾಹಿತಿಯ ಪ್ರಕಾರ ಕೇರಳದಲ್ಲಿ ಕೊರೋನಾ ವೈರಸ್​ ಸಂಖ್ಯೆ ಶೇ.17 ರಷ್ಟು ಕುಸಿತ ಕಂಡಿದೆ. ಅಲ್ಲದೆ, ವಾರಕ್ಕೊಮ್ಮೆ ಶೇ.13 ರಷ್ಟು ಕಡಿಮೆಯಾಗುತ್ತಿದೆ. ಮುಂಬೈನಲ್ಲೂ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

  ಈಗಾಗಲೇ ಭಾರತದಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದಲ್ಲಿ ಶೇ.13 ರಷ್ಟು ಕೋವಿಡ್​ ಸಂಖ್ಯೆ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ಮಾಡಿದೆ. ಮೂರು ವಾರಗಳಲ್ಲಿ ಸೋಂಕಿನ ಮೊದಲ ಗಣನೀಯ ಕುಸಿತ ಇದಾಗಿದ್ದು, ಕೇರಳವು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ.17 ರಷ್ಟು ಇಳಿಕೆಯನ್ನು ದಾಖಲಿಸಿದೆ. ಇದಲ್ಲದೆ, ಕೊರೋನಾ ವೈರಸ್‌ನಿಂದ ಸಾವುಗಳ ಸಂಖ್ಯೆ ಕಳೆದ 24 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿವೆ ಎಂದು ಅಂಕಿಅಂಶಗಳನ್ನೂ ಬಿಡುಗಡೆ ಮಾಡಲಾಗಿದೆ.

  ಕಳೆದ ಒಂದು ವಾರದಲ್ಲಿ ಭಾರತದಾದ್ಯಂತ 2,104 ಸಾವುನೋವುಗಳನ್ನು ವರದಿ ಮಾಡಲಾಗಿದೆ. ಇದು ಮಾರ್ಚ್ 22-28 ವಾರದ ನಂತರ ಅತಿ ಕಡಿಮೆ ಸಂಖ್ಯೆಯಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ ಕೇವಲ 2.5 ಲಕ್ಷ ಪ್ರಕರಣಗಳನ್ನು ಮಾತ್ರ ವರದಿ ಮಾಡಲಾಗಿದೆ. ಹಿಂದಿನ ವಾರದಲ್ಲಿ 2.8 ಲಕ್ಷಕ್ಕಿಂತ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿದ್ದವು. ಆದರೆ, ಕೇರಳದಲ್ಲಿ ಕೊರೋನಾ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಸಹ  ಭಾರತದ ಎಲ್ಲಾ ಪ್ರಕರಣಗಳಲ್ಲಿ ಕೇರಳದ ಪಾಲು ಮೂರನೇ ಎರಡರಷ್ಟು (66.6%) ಎಂದು ಹೇಳಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಏಳು ದಿನಗಳ ಅವಧಿಯಲ್ಲಿ ಕೇರಳದಲ್ಲಿ 1.6 ಲಕ್ಷ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

  ಇದನ್ನೂ ಓದಿ: Farmers Protest| ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಮತ್ತೆ ಬೀದಿಗಿಳಿದ ರಾಜ್ಯದ ರೈತರು; ಇಂದು ವಿಧಾನಸೌಧಕ್ಕೆ ಮುತ್ತಿಗೆ ಸಾಧ್ಯತೆ!  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: