ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 10 ಶ್ರಮಿಕ ರೈಲು; ತವರು ಸೇರಲಿರುವ 15 ಸಾವಿರ ವಲಸಿಗರು

ಹಾಗೆಯೇ ಚಿಕ್ಕಬಾಣವಾರದಿಂದ ಉತ್ತರಪ್ರದೇಶದ ಅಜಾಮ್​​ಗರ್​​ಗೆ ಸಂಜೆ 4 ಗಂಟೆಗೆ, ಉತ್ತರ ಪ್ರದೇಶದ ಬಸ್ತಿಗೆ ಸಂಜೆ 6 ಗಂಟೆಗೆ, ಜಾರ್ಖಾಂಡ್‌ನ ಡಲ್ಟಾನ್‌ಗಾಂಜ್‌ಗೆ ರಾತ್ರಿ 8 ಗಂಟೆಗೆ ರೈಲುಗಳು ಹೊರಟಿವೆ. ಪ್ರತಿ ರೈಲಿನಲ್ಲೂ ಸುಮಾರು 1500 ಪ್ರಯಾಣಿಕರು ತೆರಳಿದ್ದಾರೆ.

news18-kannada
Updated:May 23, 2020, 9:31 AM IST
ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 10 ಶ್ರಮಿಕ ರೈಲು; ತವರು ಸೇರಲಿರುವ 15 ಸಾವಿರ ವಲಸಿಗರು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮೇ.23): ಕೊರೋನಾ ವೈರಸ್​ ಲಾಕ್​ಡೌನ್​​ನಿಂದ ದೇಶದ ಪ್ರಮುಖ ನಗರಗಳಲ್ಲೇ ಸಿಲುಕಿಕೊಂಡಿದ್ದ ಲಕ್ಷಾಂತರ ವಲಸಿಗರು ಇಂದಿಗೂ ತವರಿಗೆ ವಾಪಸ್ಸಾಗುತ್ತಲೇ ಇದ್ದಾರೆ. ಕೇಂದ್ರ ರೈಲ್ವೆ ಇಲಾಖೆಯೂ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು, ಕಿರಿಯರು ಎನ್ನದೇ ಎಲ್ಲರಿಗೂ ತಮ್ಮ ರಾಜ್ಯಗಳಿಗೆ ವಾಪಸ್ಸಾಗಲು ರೈಲು ಮತ್ತು ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ. ಇನ್ನು, ರಾಜ್ಯ ಸರ್ಕಾರಗಳು ಕೂಡ ಕೇಂದ್ರದ ಆದೇಶದ ಮೇರೆಗೆ ತಮ್ಮಲ್ಲಿರುವ ವಲಸಿಗರನ್ನು ತವರಿಗೆ ವಿಶೇಷ ಶ್ರಮಿಕ್​​ ರೈಲಿನ ಮೂಲಕ ಕಳುಹಿಸುತ್ತಿದೆ. ಈಗಾಗಲೇ ಇಂತಹ ಹತ್ತಾರು ವಲಸಿಗರು ತಮ್ಮ ಊರಿಗಳಿಗೆ ವಾಪಸ್ಸಾಗಿದ್ದಾರೆ.

ಇಂದು ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ಹತ್ತು ವಿಶೇಷ ಶ್ರಮಿಕ್ ರೈಲು ಹೊರಟಿವೆ. ಸೇವಾ ಸಿಂಧು ಪೋರ್ಟಲ್ ಮೂಲಕ ನೊಂದಾಯಿಸಿಕೊಂಡ 15 ಸಾವಿರ ಮಂದಿ ಲಗೇಜ್​​​ ಸಮೇತ ತವರಿಗೆ ಈ ರೈಲುಗಳಲ್ಲಿ ಹೊರಟಿದ್ದಾರೆ.

ಬೆಂಗಳೂರಿನ ಕಂಟೋನ್ಮೆಂಟ್‌ನಿಂದ ನಾಲ್ಕು ಶ್ರಮಿಕ ರೈಲುಗಳು ಹೊರಟಿವೆ. ಬಿಹಾರದ ಬಾಗಲ್‌ಪುರಗೆ ಮಧ್ಯಾಹ್ನ 2ಕ್ಕೆ ಮತ್ತು ಇಲ್ಲಿನ ಕಟಿಹಾರ್‌ಗೆ ಸಂಜೆ 4ಕ್ಕೆ, ಮಣಿಪುರದ ಜಿರಿಬಮ್‌ಗೆ ಸಂಜೆ 6ಕ್ಕೆ, ಕೇರಳದ ತಿರುವಂತನಪುರಕ್ಕೆ ರಾತ್ರಿ 8ಕ್ಕೆ ರೈಲುಗಳು ಹೋಗಲು ಸಜ್ಜಾಗಿವೆ. ಇನ್ನು ಸಿಟಿ ರೈಲು ನಿಲ್ದಾಣದಿಂದ ಒಡಿಶಾದ ಕುರ್ದಾಗೆ ಸಂಜೆ 6 ಗಂಟೆಗೆ, ಜಾರ್ಖಾಂಡ್​​ನ ಬೋಕರೋಗೆ ರಾತ್ರಿ 8 ಗಂಟೆಗೆ, ದನ್‌ಬಾದ್‌ಗೆ ರಾತ್ರಿ 10 ಗಂಟೆಗೆ ಹೋಗುತ್ತಿವೆ.

ಇದನ್ನೂ ಓದಿ: ಭಾರತದಲ್ಲಿ ಕೋವಿಡ್​​-19 ಪ್ರಕರಣ: ಹೀಗಿದೆ ರಾಜ್ಯವಾರು ದಾಖಲಾದ ಸೋಂಕಿತರ ವಿವರ

ಹಾಗೆಯೇ ಚಿಕ್ಕಬಾಣವಾರದಿಂದ ಉತ್ತರಪ್ರದೇಶದ ಅಜಾಮ್​​ಗರ್​​ಗೆ ಸಂಜೆ 4 ಗಂಟೆಗೆ, ಉತ್ತರ ಪ್ರದೇಶದ ಬಸ್ತಿಗೆ ಸಂಜೆ 6 ಗಂಟೆಗೆ, ಜಾರ್ಖಾಂಡ್‌ನ ಡಲ್ಟಾನ್‌ಗಾಂಜ್‌ಗೆ ರಾತ್ರಿ 8 ಗಂಟೆಗೆ ರೈಲುಗಳು ಹೊರಟಿವೆ. ಪ್ರತಿ ರೈಲಿನಲ್ಲೂ ಸುಮಾರು 1500 ಪ್ರಯಾಣಿಕರು ತೆರಳಿದ್ದಾರೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಮೊದಲು ವಲಸಿಗರು ಹೆಸರು ನೋಂದಣಿ ಮಾಡಬೇಕು. ಅವರ ತವರು ರಾಜ್ಯದ ಅನುಮತಿ ಸಿಕ್ಕ ಬಳಿಕ ವಿಶೇಷ ರೈಲಿಗಾಗಿ ಸರ್ಕಾರ ಬೇಡಿಕೆ ಇಡುತ್ತದೆ. ವಲಸಿಗರಿಗೆ ಯಾವುದೇ ಟಿಕೆಟ್ ಇಲ್ಲ. ಸರ್ಕಾರ ಕೊಟ್ಟ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ತವರಿಗೆ ವಾಪಸ್ ಆಗಬಹುದಾಗಿದೆ.
First published: May 23, 2020, 9:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading