HOME » NEWS » Coronavirus-latest-news » 15 CORONA VIRUS SUSPECTED CASES PENDING IN BANGALORE LG

ಬೆಂಗಳೂರಿನಲ್ಲಿ ಕೊರೊನಾ ವೈರಸ್​ ಭೀತಿ; 15 ಶಂಕಿತ ಪ್ರಕರಣಗಳ ವರದಿ ಬಾಕಿ

 ಆರೋಗ್ಯ ಇಲಾಖೆಯು ಸಹಾಯವಾಣಿಯನ್ನು ಕೂಡ ತೆರೆದಿದೆ. ಕೊರೊನಾ ವೈರಸ್​ ಶಂಕಿತ ಪ್ರಕರಣ ಕಂಡು ಬಂದರೆ 104 ಸಂಖ್ಯೆಗೆ ಕರೆ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಜೊತೆಗೆ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

news18-kannada
Updated:February 3, 2020, 12:11 PM IST
ಬೆಂಗಳೂರಿನಲ್ಲಿ ಕೊರೊನಾ ವೈರಸ್​ ಭೀತಿ; 15 ಶಂಕಿತ ಪ್ರಕರಣಗಳ ವರದಿ ಬಾಕಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಫೆ.03): ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್​ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೆ ಕೊರೊನಾ ವೈರಸ್​​ಗೆ ತುತ್ತಾಗಿ 361 ಮಂದಿ ಸಾವನ್ನಪ್ಪಿದ್ದಾರೆ. ಚೀನಾ ಮಾತ್ರವಲ್ಲದೇ ವಿವಿಧ ದೇಶಗಳಲ್ಲೂ ಈ ಕೊರೊನಾ ಹರಡುತ್ತಿದೆ. ಭಾರತವೂ ಸಹ ಇದರಿಂದ ಹೊರತಾಗಿಲ್ಲ. ಇಂದು ಕೇರಳದಲ್ಲಿ ಕೊರೋನಾ ವೈರಸ್​​ನ 2ನೇ ಪ್ರಕರಣ ಪತ್ತೆಯಾಗಿದೆ.

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಕೊರೊನಾ ವೈರಸ್​ ಭೀತಿ ಮುಂದುವರೆದಿದೆ. ನಗರದಲ್ಲಿ ಒಟ್ಟು 44 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಅವುಗಳಲ್ಲಿ 29 ಶಂಕಿತ ಪ್ರಕರಣಗಳ ವರದಿ ನೆಗೆಟಿವ್​ ಬಂದಿದೆ.ಆದರೆ ಇನ್ನೂ ಸಹ 15 ಶಂಕಿತ ಪ್ರಕರಣಗಳ ವರದಿ ಬಾಕಿ ಇದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಕೇರಳದಲ್ಲಿ ಮತ್ತೊಂದು ಕೊರೋನಾ ವೈರಸ್ ಪ್ರಕರಣ ಪತ್ತೆ; ಚೀನಾದಲ್ಲಿ ಸಾವಿನ ಸಂಖ್ಯೆ 361ಕ್ಕೆ ಏರಿಕೆ

ಇನ್ನು, ಆರೋಗ್ಯ ಇಲಾಖೆಯು ಸಹಾಯವಾಣಿಯನ್ನು ಕೂಡ ತೆರೆದಿದೆ. ಕೊರೊನಾ ವೈರಸ್​ ಶಂಕಿತ ಪ್ರಕರಣ ಕಂಡು ಬಂದರೆ 104 ಸಂಖ್ಯೆಗೆ ಕರೆ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಜೊತೆಗೆ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಚೀನಾದಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಈಗಾಗಲೇ 324 ಜನರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ಇದೀಗ 2ನೇ ವಿಮಾನದ ಮೂಲಕ ಚೀನಾದಲ್ಲಿರುವ ಭಾರತೀಯರನ್ನು ದೆಹಲಿಗೆ ಕರೆತರಲಾಗಿದೆ.

ಕೊರೊನಾ ವೈರಸ್​​ ಭೀತಿ ಹಿನ್ನೆಲೆ, ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತದಿಂದ ಯಾರೂ ಚೀನಾಗೆ ತೆರಳದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಒಟ್ಟು 20 ದೇಶಗಳಿಗೆ ಹರಡಿದೆ ಎನ್ನಲಾದ ಕೊರೋನಾ ವೈರಸ್ ಇಡೀ ವಿಶ್ವದಲ್ಲಿ ಸಾವಿನ ಭೀತಿ ಸೃಷ್ಟಿಸಿದೆ.

ಕೊರೊನಾ ವೈರಸ್​​ ಭೀತಿ: ವಿಮಾನದ ಮೂಲಕ ಚೀನಾದಿಂದ 324 ಭಾರತೀಯರ ಸ್ಥಳಾಂತರ

 
First published: February 3, 2020, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories