ದೆಹಲಿಯಲ್ಲಿಂದು 1,404 ಕೊರೋನಾ ಪ್ರಕರಣಗಳು ಪತ್ತೆ; ಮೃತರ ಸಂಖ್ಯೆ 4,098ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಾ 20 ಲಕ್ಷ ದಾಟಿದೆ. ಆಗಸ್ಟ್ 7ರಂದು 61,537 ಪ್ರಕರಣಗಳು ಕಂಡುಬಂದಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 20,88,612ಕ್ಕೆ ಏರಿಕೆಯಾಗಿದೆ. ಇಂದು 933 ಮಂದಿ ಕೊರೋನಾದಿಂದ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 42 ಸಾವಿರದ ಗಡಿ‌ ದಾಟಿದ್ದು 42,518ಕ್ಕೆ ಏರಿಕೆಯಾಗಿದೆ.

news18-kannada
Updated:August 8, 2020, 8:09 PM IST
ದೆಹಲಿಯಲ್ಲಿಂದು 1,404 ಕೊರೋನಾ ಪ್ರಕರಣಗಳು ಪತ್ತೆ; ಮೃತರ ಸಂಖ್ಯೆ 4,098ಕ್ಕೆ ಏರಿಕೆ
Coronavirus India Update
  • Share this:
ನವದೆಹಲಿ: ಜಗತ್ತಿನ ಜಂಘಾಬಲವನ್ನೇ ಅಡಗಿಸಿರುವ ಕೊರೋನಾ ಮಹಾಮಾರಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ದಿಗಿಲಿಗೀಡುಮಾಡಿದೆ. ದೆಹಲಿಯಲ್ಲಿ ಶನಿವಾರ 1,404 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.

ಪ್ರತಿದಿನ ಸಂಜೆ ಕಳೆದ 24 ಗಂಟೆಯಲ್ಲಿ ಹೊಸದಾಗಿ ಕಂಡುಬರುವ ಕೊರೋನಾ ಪ್ರಕರಣಗಳನ್ನು ದೆಹಲಿ ಸರ್ಕಾರ ಬಿಡುಗಡೆ ಮಾಡುತ್ತಿದೆ‌. ಅದೇ ರೀತಿ ಶನಿವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಹೊಸದಾಗಿ 1,404 ಕೊರೋನಾ ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಇದರಿಂದ ದೆಹಲಿಯ ಕೊರೋನಾ ಪೀಡಿತರ ಸಂಖ್ಯೆ 1,44,127ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಶನಿವಾರ‌ 16 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ದೆಹಲಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,098ಕ್ಕೆ ಏರಿಕೆಯಾಗಿದೆ. ಜುಲೈ ತಿಂಗಳ ಆರಂಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಕಂಡು ಬರುತ್ತಿದ್ದವು. ಆಗಸ್ಟ್ ತಿಂಗಳಲ್ಲಿ ಪ್ರತಿದಿನ ಸುಮಾರು 1 ಸಾವಿರ ಪ್ರಕರಣಗಳು ಪತ್ತೆಯಾಗತೊಡಗಿವೆ. ಶನಿವಾರ 1130 ಜನ ಸೇರಿದಂತೆ ಈವರೆಗೆ 1,29,362 ಜನರು ಗುಣಮುಖರಾಗಿದ್ದಾರೆ. 10,667 ಕೊರೋನಾ ಪ್ರಕರಣಗಳು ಆ್ಯಕ್ಟೀವ್ ಇವೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ‌.

ಇದನ್ನು ಓದಿ: ಕೊರೋನಾ ಸಂಕಷ್ಟದಲ್ಲೂ ಭರ್ಜರಿ ಬೆಳವಣಿಗೆ ಸಾಧಿಸುತ್ತಿವೆ ಈ 4 ವಲಯಗಳು

ಇದಲ್ಲದೆ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಾ 20 ಲಕ್ಷ ದಾಟಿದೆ. ಆಗಸ್ಟ್ 7ರಂದು 61,537 ಪ್ರಕರಣಗಳು ಕಂಡುಬಂದಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 20,88,612ಕ್ಕೆ ಏರಿಕೆಯಾಗಿದೆ. ಇಂದು 933 ಮಂದಿ ಕೊರೋನಾದಿಂದ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 42 ಸಾವಿರದ ಗಡಿ‌ ದಾಟಿದ್ದು 42,518ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 14,27,006 ಜನ ಮಾತ್ರ. ದೇಶದಲ್ಲಿ ಇನ್ನೂ 6,19,088 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.
Published by: HR Ramesh
First published: August 8, 2020, 8:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading