ವಿಶೇಷ ರೈಲಿನಲ್ಲಿ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ; ಪ್ರಕಟಣೆ ಹೊರಡಿಸಿದ ಸರ್ಕಾರ

ಕ್ವಾರಂಟೈನ್‌ಗೆ ಒಳಗಾಗಲು ಒಪ್ಪದ ಪ್ರಯಾಣಿಕರನ್ನು ನಿನ್ನೆ ಮತ್ತೆ ಅದೇ ರೈಲಿನಲ್ಲಿ ದೆಹಲಿಗೆ ಕಳುಹಿಸಿಕೊಡಲಾಗಿತ್ತು ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ದೆಹಲಿಯ ಕರ್ನಾಟಕ ಭವನ ಹೊಸ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವ ದೆಹಲಿ (ಮೇ 15); ಕರ್ನಾಟಕ ರಾಜ್ಯ ಸಕಾರ ಕೋವಿಡ್-19ರ ಶಿಷ್ಟಾಚಾರ ನಿಯಮಗಳನ್ವಯ ಕರ್ನಾಟಕಕ್ಕೆ ಬರುವ ಅಂತಾರಾಜ್ಯ ಪ್ರವಾಸಿಗರು ಸರ್ಕಾರದ ವತಿಯಿಂದ ಒದಗಿಸುವ 14 ದಿನಗಳ ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಪೂರೈಸಬೇಕು ಎಂದು ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿ ಪ್ರಕಟಣೆ ಹೊರಡಿಸಿದೆ.

ಲಾಕ್‌ಡೌನ್‌ನಿಂದಾಗಿ ದೇಶದ ನಾನಾ ಮೂಲೆಯಲ್ಲಿ ಸಿಲುಕಿಕೊಂಡಿರುವ ಜನರನ್ನು ಮನೆಗೆ ತಲುಪಿಸುವ ಸಲುವಾಗಿ ಕಳೆದ ಮಂಗಳವಾರ ಕೇಂದ್ರ ಸರ್ಕಾರ 15 ಜೋಡಿ ರೈಲುಗಳ ವಿಶೇಷ ಸೇವೆ ಆರಂಭಿಸಿತ್ತು. ಆನ್‌ಲೈನ್‌ ಟಿಕೆಟ್ ರಿಜಿಸ್ಟ್ರೇಷನ್ ಆರಂಭವಾಗುತ್ತಿದ್ದಂತೆ ಎಲ್ಲಾ ಟಿಕೆಟ್ ಭರ್ತಿಯಾಗಿತ್ತು. ಅಲ್ಲದೆ, ಈ ರೈಲಿನಲ್ಲಿ ದೆಹಲಿಯಿಂದ ಸಾವಿರಾರು ಜನ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು.

ಆದರೆ, ಹೀಗೆ ಬೇರೆ ರಾಜ್ಯದಿಂದ ಬೆಂಗಳೂರಿಗೆ ಆಗಮಿಸುವವರನ್ನುಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಈ ಮುಂಚೆಯೇ ತಿಳಿಸಿರಲಿಲ್ಲ. ಆದರೆ, ನಿನ್ನೆ ಪ್ರಯಾಣಿಕರು ರೈಲಿನಲ್ಲಿ ಮೆಜೆಸ್ಟಿಕ್‌ಗೆ ಬಂದು ಇಳಿದ ನಂತರ ಅಧಿಕಾರಿಗಳು ಕ್ವಾರಂಟೈನ್ ಮಾಡಲು ಮುಂದಾದರು. ಇದಕ್ಕೆ ಪ್ರಯಾಣಿಕರು ಒಪ್ಪಿಗೆ ಸೂಚಿಸಿರಲಿಲ್ಲ. ಅಲ್ಲದೆ, ಕ್ವಾರಂಟೈನ್ ಬಗ್ಗೆ ಮುಂಚೆಯೇ ಹೇಳಿದ್ದರೆ ನಾವು ದೆಹಲಿಯಿಂದ ಬರುತ್ತಲೇ ಇರಲಿಲ್ಲ ಎಂದು ಅಲವತ್ತುಕೊಂಡಿದ್ದರು.

ಪರಿಣಾಮ ಕ್ವಾರಂಟೈನ್‌ಗೆ ಒಳಗಾಗಲು ಒಪ್ಪದ ಪ್ರಯಾಣಿಕರನ್ನು ಮತ್ತೆ ಅದೇ ರೈಲಿನಲ್ಲಿ ದೆಹಲಿಗೆ ಕಳುಹಿಸಿಕೊಡಲಾಗಿತ್ತು ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ದೆಹಲಿಯ ಕರ್ನಾಟಕ ಭವನ ಹೊಸ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.

ಈ ಪ್ರಕಟಣೆಯಲ್ಲಿ, “ಕರ್ನಾಟಕ ರಾಜ್ಯ ಸರ್ಕಾರದ ಕೋವಿಡ್ 19ರ ಶಿಷ್ಟಾಚಾರ ನಿಯಮಗಳ ಅನ್ವಯ ಕರ್ನಾಟಕ ರಾಜ್ಯಕ್ಕೆ ಬರುವ ಅಂತರರಾಜ್ಯ ಪ್ರವಾಸಿಗರು ಸರ್ಕಾರದ ವತಿಯಿಂದ ಒದಗಿಸುವ 14 ದಿನಗಳ ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು. ರಾಜ್ಯ ಸರ್ಕಾರದ ವಸತಿ ಗೃಹಗಳಲ್ಲಿ ಉಚಿತವಾಗಿ ಅಥವಾ ನಿಗಧಿತ ಹೋಟೆಲ್‌ಗಳಲ್ಲಿ ಹಣ ಸಂದಾಯ ಮಾಡುವ ಮೂಲಕ ಕ್ವಾರಂಟೈನ್ ಅನ್ನು ಪೂರೈಸಬೇಕು.

ಯಾವುದೇ ಕಾರಣಕ್ಕೂ ಮನೆಯಲ್ಲೇ ಕ್ವಾರಂಟೈನ್ ಹೊಂದಲು ಅವಕಾಶಗಳಿರುವುದಿಲ್ಲ. 14 ದಿನಗಳಿಗೆ ಮುಂಚೆತವಾಗಿ ನಿಮ್ಮ ಮನೆಗಳಿಗೆ ಹೋಗಲೂ ಸಹ ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ : Muthappa Rai Death: ಮಾಜಿ ಡಾನ್ ಮುತ್ತಪ್ಪ ರೈ ನಿಧನ; ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ ಜಯರಾಜ್ ಮಗ ಅಜಿತ್
First published: