HOME » NEWS » Coronavirus-latest-news » 14 DAY HOME QUARANTINE COMPULSORY FOR EVEN THOSE FOREIGN TRAVELLERS WITHOUT COVID 19 SYMPTOMS ICMR LG

ವಿದೇಶದಿಂದ ಬಂದವರಲ್ಲಿ ಕೊರೋನಾ ಇಲ್ಲದಿದ್ದರೂ 14 ದಿನ ಗೃಹಬಂಧನ ಕಡ್ಡಾಯ; ಐಸಿಎಂಆರ್​

Coronavirus News Updates: ಮಾರಣಾಂತಿಕ ಕೊರೋನಾ ವೈರಸ್​​ ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಹರಡುತ್ತಿದೆ. ಈಗಾಗಲೇ  ಭಾರತ 150ಕ್ಕೂ ಹೆಚ್ಚು ದೇಶಗಳಿಗೂ ಈ ಕೊರೋನಾ ಹಬ್ಬಿದೆ.  ಭಾರತದಲ್ಲಿ 13 ರಾಜ್ಯಗಳಲ್ಲಿ ಕೊರೋನಾ ವೈರಸ್​ ಕಾಲಿಟ್ಟಿದೆ. ಮಂಗಳವಾರ ಭಾರತದಲ್ಲಿ 137 ಪ್ರಕರಣಗಳು ಪತ್ತೆಯಾಗಿವೆ.

news18-kannada
Updated:March 18, 2020, 9:08 AM IST
ವಿದೇಶದಿಂದ ಬಂದವರಲ್ಲಿ ಕೊರೋನಾ ಇಲ್ಲದಿದ್ದರೂ 14 ದಿನ ಗೃಹಬಂಧನ ಕಡ್ಡಾಯ; ಐಸಿಎಂಆರ್​
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮಾ.18): ವಿದೇಶದಿಂದ ಭಾರತಕ್ಕೆ ಬರುವವರಲ್ಲಿ ಕೊರೋನಾ ಲಕ್ಷಣಗಳು ಇಲ್ಲವಾದರೂ ಅವರು ಕಡ್ಡಾಯವಾಗಿ 14 ದಿನಗಳ ಕಾಲ ಬಂಧನದಲ್ಲಿರಲೇಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ವಿದೇಶಗಳಿಂದ ಮರಳಿದವರು ಕನಿಷ್ಠ ಎರಡು ವಾರಗಳ ಕಾಲ ಗೃಹಬಂಧನದಲ್ಲಿರಬೇಕು. ಆಎರಡು ವಾರಗಳ ಅವಧಿಯಲ್ಲಿ ಒಂದು ವೇಳೆ ಅವರಲ್ಲಿ ಕೊರೋನಾ ಲಕ್ಷಣಗಳು ಬೆಳವಣಿಗೆಯಾದರೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಐಸಿಎಂಆರ್​​ನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.ಅವರಲ್ಲಿ ಯಾವುದೇ ರೋಗ ಲಕ್ಷಣಗಳಿದ್ದರೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮಾರಣಾಂತಿಕ ಕೊರೋನಾ ವೈರಸ್​​ ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಹರಡುತ್ತಿದೆ. ಈಗಾಗಲೇ  ಭಾರತ 150ಕ್ಕೂ ಹೆಚ್ಚು ದೇಶಗಳಿಗೂ ಈ ಕೊರೋನಾ ಹಬ್ಬಿದೆ.  ಭಾರತದಲ್ಲಿ 13 ರಾಜ್ಯಗಳಲ್ಲಿ ಕೊರೋನಾ ವೈರಸ್​ ಕಾಲಿಟ್ಟಿದೆ. ಮಂಗಳವಾರ ಭಾರತದಲ್ಲಿ 137 ಪ್ರಕರಣಗಳು ಪತ್ತೆಯಾಗಿವೆ.

ಕೊರೋನಾ ವೈರಸ್​ ಸಮುದಾಯದಿಂದ ಹರಡುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ; ಐಸಿಎಂಆರ್​ ಸ್ಪಷ್ಟನೆ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)​​​​, ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಪ್ರಕಾರ, ಬಹುತೇಕ ಕೊರೋನಾ ಪ್ರಕರಣಗಳು ವಿದೇಶಗಳಿಂದ ಬಂದವುಗಳಾಗಿವೆ ಎಂದು ತಿಳಿದು ಬಂದಿದೆ. ಕೆಲವು ಪ್ರಕರಣಗಳು ಮಾತ್ರ ಸ್ಥಳೀಯವಾಗಿ ಪತ್ತೆಯಾಗಿವೆ ಎನ್ನಲಾಗಿದೆ. ವಿದೇಶಗಳಿಂದ ಮರಳಿದ್ದವರ ಜೊತೆ ಸಂಪರ್ಕ ಹೊಂದಿದ್ದವರು ಮತ್ತು ಸಂಬಂಧಿಗಳಲ್ಲಿ ಕೊರೋನಾ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಕೊರೋನಾ ವೈರಸ್​​ ಹೆಚ್ಚಿನ ಪ್ರಮಾಣದಲ್ಲಿ ಹರಡಿರುವ ಚೀನಾ, ಹಾಂಗ್​-ಕಾಂಗ್​, ಜಪಾನ್​, ದಕ್ಷಿಣ ಕೊರಿಯಾ, ಸಿಂಗಾಪೂರ್, ಇರಾನ್​ ಮತ್ತು ಇಟಲಿಯಿಂದ ಭಾರತಕ್ಕೆ ಬಂದವರು ತಪಾಸಣೆ ಮಾಡಿಸಿಕೊಳ್ಳಲೇಬೇಕು. ಜೊತೆಗೆ ಕೊರೋನಾ ಪಾಸಿಟಿವ್​ ಇರುವ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದರೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕನಿಷ್ಠ 14 ದಿನಗಳ ಕಾಲ ಗೃಹ ಬಂಧನದಲ್ಲಿರಬೇಕು ಎಂದು ಐಸಿಎಂಆರ್​ ತಿಳಿಸಿದೆ.

ಬೆಂಗಳೂರಿನ ರೆಸಾರ್ಟ್​ ಬಳಿ ಪ್ರತಿಭಟನೆ; ದಿಗ್ವಿಜಯ್​ ಸಿಂಗ್ ಸೇರಿ ಅನೇಕ ಕಾಂಗ್ರೆಸ್​ ನಾಯಕರು ವಶಕ್ಕೆಗೃಹ ಬಂಧನದಲ್ಲಿರುವ ಸಂದರ್ಭದಲ್ಲಿ ಒಣ ಕೆಮ್ಮು, ನೆಗಡಿ ಮತ್ತು ಜ್ವರದಿಂದ ಬಳಲುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.

ಈಗಾಗಲೇ ವಿದೇಶಿ ಪ್ರಯಾಣಿಕರನ್ನು ಭಾರತಕ್ಕೆ ಬರದಂತೆ ಹೇರಲಾಗಿದ್ದ ನಿಷೇಧವನ್ನು ವಿಸ್ತರಣೆ ಮಾಡಲಾಗಿದೆ. ಜೊತೆಗೆ ಇಂಗ್ಲೆಂಡ್, ಟರ್ಕಿ ಮತ್ತು ಯುರೋಪ್​ಗಳಲ್ಲಿ ಭಾರತೀಯ ಪಾಸ್​ಪೋರ್ಟ್​​ ಹೊಂದಿರುವವರಿಗೆ ಮಾರ್ಚ್​​​ ಅಂತ್ಯದವರೆಗೆ ಭಾರತ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.
First published: March 18, 2020, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories