HOME » NEWS » Coronavirus-latest-news » 1300 MEMBERS WHO ATTEND DELHI RELIGION MEETING FROM KARNATAKA SAYS GOVERNMENT RH

ಕರ್ನಾಟಕದಿಂದ ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿದ್ದವರು 1300 ಜನ; ಸರ್ಕಾರದಿಂದ ಅಧಿಕೃತ ಮಾಹಿತಿ

ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲಿಕ್ ಜಮಾತ್ ಗೆ ಸೇರಿದ 581 ಕಾರ್ಯಕರ್ತರ ಹೆಸರುಗಳಿವೆ. ನಾವು ಸಂಬಂಧಪಟ್ಟ ಎಲ್ಲಾ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದೇವೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. 

news18-kannada
Updated:April 8, 2020, 6:38 PM IST
ಕರ್ನಾಟಕದಿಂದ ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿದ್ದವರು 1300 ಜನ; ಸರ್ಕಾರದಿಂದ ಅಧಿಕೃತ ಮಾಹಿತಿ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು: ಮಾರ್ಚ್​ ತಿಂಗಳಿನಲ್ಲಿ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಕರ್ನಾಟಕದಿಂದ 1300 ಜನರು ಹೋಗಿದ್ದರು ಎಂದು ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.  ‌

ಕರ್ನಾಟಕದಿಂದ ತೆರಳಿದ್ದ 1300 ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ‌ಬೆಂಗಳೂರಿನವರು 276 ಜನ, ಇತರೆ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ ಕ್ವಾರಂಟೇನ್ ಇರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಮಾಹಿತಿ ಸಂಗ್ರಹಿಸಿ,  ಈ ಕುರಿತು ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ. ಭಾರತೀಯರನ್ನು ಹೊರತು ಪಡಿಸಿ 57 ಮಂದಿ ಬೇರೆ ಬೇರೆ ರಾಷ್ಟ್ರಗಳಿಗೆ ಸೇರಿದವರು ಇದ್ದಾರೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ.

ತಬ್ಲೀಕ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಬೀದರ್ 8, ಬೆಳಗಾವಿ 10, ತುಮಕೂರು 8 , ಬೆಂಗಳೂರು ‌31 ಜಿಲ್ಲೆಗಳಲ್ಲಿ ಗುರುತಿಸಿ ಕ್ವಾರಂಟೇನ್​ನಲ್ಲಿ ಇರಿಸಲಾಗಿದೆ.  ಭಾರತಕ್ಕೆ ಬರಲು ನೀಡುವ ವೀಸಾ ಪ್ರಕ್ರಿಯೆಯಲ್ಲಿ ಇವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ಸೂಚನೆಯೊಂದಿಗೆ 57 ಎಫ್​ಐಆರ್​ಗಳನ್ನು ದಾಖಲಿಸಲಾಗಿದೆ. ಅವರ ಪೈಕಿ 20 ಇಂಡೋನೇಷ್ಯಾ, 1 ಯುಕೆ, 4 ದಕ್ಷಿಣ ಆಫ್ರಿಕಾ, 3 ಗ್ಯಾಂಬೀಯಾ, 19 ಕಿರ್ಗಿಸ್ತಾನ್, 1 ಯುಎಸ್​ಎ, 1 ಫ್ರಾನ್ಸ್, 1 ಕೀನ್ಯಾ, ಮತ್ತು ಏಳು ಮಂದಿ ಬಾಂಗ್ಲಾದೇಶಕ್ಕೆ ಸೇರಿದವರು ಇದ್ದಾರೆ. ನಿರ್ಣಾಯಕ ಅವಧಿಯಲ್ಲಿ ಹಾಟ್​ಸ್ಪಾಟ್ ಸಮೀಪದಲ್ಲಿದ್ದ 276 ತಬ್ಲೀಕ್ ಜಮಾತ್ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಗುರುತಿಸಲಾಗಿದೆ. ಸದ್ಯ ಅವರನ್ನು ಕ್ವಾರಂಟೇನ್​ನಲ್ಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ರೀತಿಯ ಹಿನ್ನೆಲೆ ಹೊಂದಿದವರ 482 ತಬ್ಲೀಕ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕ ಇತರ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ 808 ತಬ್ಲೀಕ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದಲ್ಲಿ ಕಡ್ಡಾಯವಾಗಿ ಕ್ವಾರಂಟೇನ್ ನಲ್ಲಿ ಪರೀಕ್ಷಿಸಲಾಗಿದೆ. ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲಿಕ್ ಜಮಾತ್ ಗೆ ಸೇರಿದ 581 ಕಾರ್ಯಕರ್ತರ ಹೆಸರುಗಳಿವೆ. ನಾವು ಸಂಬಂಧಪಟ್ಟ ಎಲ್ಲಾ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದೇವೆ. ಯಾರು ಆತಂಕ ಪಡುವ ಅಗತ್ಯ ವಿಲ್ಲ, ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: Lockdown Extension: ಲಾಕ್​ಡೌನ್​ ಮುಂದುವರೆಸುವುದು ಅಗತ್ಯ; ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ
First published: April 8, 2020, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories