ರೈಲಿನಲ್ಲಿ ಪ್ರಯಾಣಿಸಿದ್ದ 12 ಮಂದಿಗೆ ಕೊರೋನಾ ಸೋಂಕು: ಕೇಂದ್ರ ರೈಲ್ವೆ ಸಚಿವಾಲಯ

ಇತ್ತೀಚೆಗಷ್ಟೇ ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆ ಮಾಡಲು ರೂ. 10 ರೂ. ಇದ್ದ ಫ್ಲಾಟ್‌ ಫಾರಂ ಟಿಕೆಟ್ ದರವನ್ನು 50 ರೂ. ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಹೆಚ್ಚು ಜನರು ನಿಲ್ದಾಣಕ್ಕೆ ಬರದಂತೆ ತಡೆಯಲಾಗಿದೆ.

ಕೊರೋನಾ ಸಾಂದರ್ಭಿಕ ಚಿತ್ರ

ಕೊರೋನಾ ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಮಾ.21): ರೈಲಿನಲ್ಲಿ ಪ್ರಯಾಣಿಸಿದ್ದ ವಿವಿಧ ರಾಜ್ಯಗಳ ಒಟ್ಟು 12 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.  ಈ ಸಂಬಂಧ ಸರಣಿ ಟ್ವೀಟ್​​ ಮಾಡಿರುವ ಕೇಂದ್ರ ರೈಲ್ವೆ ಸಚಿವಾಲಯ, ಮಾರ್ಚ್ 16ನೇ ತಾರೀಕಿನಂದು ಮುಂಬೈ-ಜಬಲ್ಪುರ್ ಮಾರ್ಗದ ಗೂಡಾನ್​​​​​ ಎಕ್ಸ್​ಪ್ರೆಸ್​​​ ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರು ಪ್ರಯಾಣಿಕರಿಗೆ ಸೋಂಕು ತಗುಲಿದೆ. ಈ ನಾಲ್ವರು ಕಳೆದ ವಾರವಷ್ಟೇ ದುಬೈನಿಂದ ಭಾರತಕ್ಕೆ ಬಂದಿದ್ದರು. ಇದೀಗ ನಾಲ್ವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದೆ.  ಹಾಗೆಯೇ, ದೆಹಲಿಯಿಂದ ರಾಮಗುಂಡಂಗೆ ಹೋಗುವ ಎಪಿ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್​​ನಲ್ಲಿ ಪ್ರಯಾಣಿಸಿದ 8 ಮಂದಿಗೆ ಕೊರೋನಾ ಸೋಂಕು ತಗಲಿರುವುದು ಖಾತ್ರಿಯಾಗಿದೆ. ಗೂಡಾನ್​​​​​ ಎಕ್ಸ್​ಪ್ರೆಸ್​​​ ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರು ಮತ್ತು ಎಪಿ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್​​ನಲ್ಲಿ ಪ್ರಯಾಣಿಸಿದ್ದ ಎಂಟು ಮಂದಿ ಒಟ್ಟು 12 ಮಂದಿಯಲ್ಲಿ ಕೊರೋನಾ ಪಾಸಿಟಿವ್​​ ಪತ್ತೆಯಾಗಿದೆ. ಹಾಗಾಗಿ ಪ್ರಯಾಣಿಕರು ಯಾರು ಮನೆಯಿಂದ ಹೊರಗೆ ಬರಬೇಡಿ ಎಂದು ಮತ್ತೊಂದು ಟ್ವೀಟ್​​ನಲ್ಲಿ ಕೇಂದ್ರ ರೈಲ್ವೆ ಸಚಿವಾಲಯ ಮನವಿ ಮಾಡಿದೆ.  ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಾರ್ವಜನಿಕರಿಗೆ ಜನತಾ ಕರ್ಫ್ಯೂಗೆ ಕರೆ ನೀಡಿರುವ ಪರಿಣಾಮ ರೈಲ್ವೆ ಇಲಾಖೆ ದೇಶಾದ್ಯಾಂತ 3 ಸಾವಿರ 700 ರೈಲುಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. ರೈಲ್ವೆ ಆದೇಶದ ಪ್ರಕಾರ, 'ದೇಶದ ಯಾವುದೇ ರೈಲ್ವೆ ನಿಲ್ದಾಣದಿಂದ ಶನಿವಾರ ಮಧ್ಯರಾತ್ರಿಯವರೆಗೆ ಭಾನುವಾರ ರಾತ್ರಿ 10 ಗಂಟೆಗೆ ಯಾವುದೇ ಪ್ರಯಾಣಿಕ ಅಥವಾ ಎಕ್ಸ್ಪ್ರೆಸ್ ರೈಲು ಓಡುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

  ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ 11 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 63ಕ್ಕೇರಿಕೆ - ಆರೋಗ್ಯ ಸಚಿವ ರಾಜೇಶ್​​ ತೋಪೆ

  ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ ಮತ್ತು ಸಿಕಂದರಾಬಾದ್ ನಲ್ಲಿ ಉಪನಗರ ರೈಲು ಸೇವೆಗಳನ್ನೂ ಸಹ ಕಡಿತಗೊಳಿಸಲಾಗುತ್ತಿದೆ. ಅಗತ್ಯ ಪ್ರಯಾಣಕ್ಕೆ ಮಾತ್ರ ಅನುವು ಮಾಡಿಕೊಡಲು ಕೆಲವೇ ಕೆಲವು ರೈಲುಗಳನ್ನು ಮಾತ್ರ ಓಡಿಸಲಾಗುವುದು ಎಂದೂ ರೈಲ್ವೆ ಮಂಡಳಿ ಹೇಳಿದೆ.

  ಇತ್ತೀಚೆಗಷ್ಟೇ ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆ ಮಾಡಲು ರೂ. 10 ರೂ. ಇದ್ದ ಫ್ಲಾಟ್‌ ಫಾರಂ ಟಿಕೆಟ್ ದರವನ್ನು 50 ರೂ. ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಹೆಚ್ಚು ಜನರು ನಿಲ್ದಾಣಕ್ಕೆ ಬರದಂತೆ ತಡೆಯಲಾಗಿದೆ.

  !function(e,i,n,s){var t="InfogramEmbeds",d=e.getElementsByTagName("script")[0];if(window[t]&&window[t].initialized)window[t].process&&window[t].process();else if(!e.getElementById(n)){var o=e.createElement("script");o.async=1,o.id=n,o.src="https://e.infogram.com/js/dist/embed-loader-min.js",d.parentNode.insertBefore(o,d)}}(document,0,"infogram-async");

   
  Loading...

   
  First published: