ಭಾರತದಲ್ಲಿ ನಿನ್ನೆ ಒಂದೇ ದಿನ ಸುಮಾರು 12 ಸಾವಿರ ಕೊರೋನಾ ಕೇಸ್​ ಪತ್ತೆ; 10 ಸಾವಿರದ ಗಡಿ ತಲುಪಿದ ಸಾವಿನ ಸಂಖ್ಯೆ

ಲಾಕ್​ಡೌನ್​ ಅವಧಿಯಲ್ಲಿ ಭಾರತ ಹದಿನಾಲ್ಕನೇ ಸ್ಥಾನದಲ್ಲಿತ್ತು. ಆದರೆ, ಈ ಅವಧಿಯಲ್ಲಿ ಅನ್​ಲಾಕ್​ ಘೋಷಣೆ ಮಾಡಲಾಗಿತ್ತು. ಪರಿಣಾಮವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಜೂ. 14): ಕೊರೋನಾ ವೈರಸ್​ ಹೆಚ್ಚುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಅನ್​ಲಾಕ್​ 2.0 ಘೋಷಣೆ ಮಾಡಿದೆ. ಪರಿಣಾಮ, ದೇಶದಲ್ಲಿ ಕೊರೋನಾ ವೈರಸ್​ ಮಿತಿ ಮೀರಿ ಹಬ್ಬುತ್ತಿದೆ. ಕಳೆದವಾರ ಏಳು ದಿನಗಳ ಕಾಲ ಸರಾಸರಿ 9,500 ಪ್ರಕರಣಗಳು ದಾಖಲಾಗಿದ್ದವು. ಈಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ನಿನ್ನೆ ಒಂದೇ ದಿನ ಸುಮಾರು 12 ಸಾವಿರ ಪ್ರಕರಣ ಬೆಳಕಿಗೆ ಬಂದಿದೆ.

ಇತ್ತೀಚೆಗೆ ನಿತ್ಯ ಸುಮಾರು 11 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಶನಿವಾರ ಒಂದೇ ದಿನ 11,929 ಜನರಿಗೆ ಸೋಂಕು ತಗುಲಿದೆ.  ಮಹಾರಾಷ್ಟ್ರ ಹಾಗೂ ದೆಹಲಿ ಭಾಗದಲ್ಲಿ ಅತಿ ಹೆಚ್ಚು ಸೋಂಕು ಪತ್ತೆ ಆಗುತ್ತಿವೆ. ಈ ಮೂಲಕ ಕೊರೋನಾ ಪ್ರಕರಣ ಸಂಖ್ಯೆ 3,20,922 ಲಕ್ಷ ಆಗಿದೆ.  ಇನ್ನು, ದಿನದಿಂದ ದಿನಕ್ಕೆ ಮೃತಪಡುವವರ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ. ನಿನ್ನೆ ಒಂದೇ ದಿನ 311 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 9,195 ಆಗಿದೆ.

ಲಾಕ್​ಡೌನ್​ ಅವಧಿಯಲ್ಲಿ ಭಾರತ ಹದಿನಾಲ್ಕನೇ ಸ್ಥಾನದಲ್ಲಿತ್ತು. ಆದರೆ, ಈ ಅವಧಿಯಲ್ಲಿ ಅನ್​ಲಾಕ್​ ಘೋಷಣೆ ಮಾಡಲಾಗಿತ್ತು. ಪರಿಣಾಮವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ತಿಂಗಳ ಹಿಂದೆ ಇಟಲಿಯಲ್ಲಿ ಕೊರೋನಾ ವೈರಸ್​ ಭಾರೀ ಅಟ್ಟಹಾಸ ಮೆರೆದಿತ್ತು. ಈಗ ಆ ರಾಷ್ಟ್ರವನ್ನೇ ಭಾರತ ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Jio - ಒಂದು ಲಕ್ಷ ಕೋಟಿ ದಾಟಿದ ಹೊರ ಬಂಡವಾಳ ಹೂಡಿಕೆ

ಸದ್ಯ, ರಷ್ಯಾ (5.20 ಲಕ್ಷ), ಬ್ರೇಜಿಲ್​ (8.50 ಲಕ್ಷ) ಹಾಗೂ ಅಮೆರಿಕ (21 ಲಕ್ಷ) ಅನುಕ್ರಮವಾಗಿ ಮೂರು, ಎರಡು ಹಾಗೂ ಒಂದನೇ ಸ್ಥಾನದಲ್ಲಿವೆ. ಮೇ 1ರಿಂದ ಕೇಂದ್ರ ಸರ್ಕಾರ ಅನ್​ಲಾಕ್​ ಜಾರಿಗೆ ತಂದಿದೆ. ಪರಿಣಾಮ ಕೊರೋನಾ ವೈರಸ್​ ಮಿತಿ ಮೀರಿ ಹರಡುತ್ತಿದೆ.
First published: