ಜಗತ್ತಿನ ಅತಿ ಹಿರಿಕ ಮಹಿಳೆಯಾಗಿರುವ ಸ್ಪೇನ್ನ 113 ವರ್ಷದ ವೃದ್ಧೆ ಮಾರಕ ಕೊರೋನಾ ಸಾಂಕ್ರಾಮಿಕ ವೈರಸ್ನಿಂದ ಬದುಕುಳಿದಿದ್ದಾರೆ.
ಮೂರು ಮಕ್ಕಳ ತಾಯಿಯಾಗಿರುವ ಮಾರಿಯಾ ಬ್ರಾನ್ಯಾಸ್ ಅವರು ಏಪ್ರಿಲ್ನಲ್ಲಿ ಕೊರೋನಾ ವೈರಸ್ಗೆ ತುತ್ತಾಗಿದ್ದರು. ಇವರನ್ನು ವೃದ್ಧರ ಆರೈಕೆ ಕೇಂದ್ರದ ಕೊಠಡಿಯಲ್ಲಿ ಐಸೋಲೆಷನ್ ಮಾಡಲಾಗಿತ್ತು. ಮೂಲತಃ ಯುಎಸ್ನ ಸ್ಯಾನ್ ಫ್ರಾನ್ಸಿಸ್ಕೊದವರಾದ ಇವರು 1918-19ರಲ್ಲಿ ಸ್ಪಾನಿಷ್ ಫ್ಲೂ ಸಾಂಕ್ರಾಮಿಕ ಹಾಗೂ ವಿಶ್ವ ಯುದ್ಧ ಮತ್ತು 1936-1939ರಲ್ಲಿ ನಡೆದ ಸ್ಪಾನಿಷ್ ನಾಗರಿಕ ಯುದ್ಧದಂತಹ ಭೀಕರ ಸನ್ನಿವೇಶದಲ್ಲೂ ಬದುಕುಳಿದಿದ್ದರು.
ವರದಿಯ ಪ್ರಕಾರ, ಬ್ರಾನ್ಯಾಸ್ ಸ್ಪೇನ್ನ ಅತಿ ಹಿರಿಯ ಮಹಿಳೆ ಎಂದು ವೃದ್ಧಾಪ್ಯಶಾಸ್ತ್ರ ಅಧ್ಯಯನ ಸಂಸ್ಥೆ ಗುರುತಿಸಿದೆ. ಈ ಸಂಸ್ಥೆ ನಡೆಸಿದ ನೂರು ವರ್ಷ ಪೂರೈಸಿದವರ ಸೂಪರ್ ಸೆಂಚುರಿಯನ್ಸ್ ಸಮೀಕ್ಷೆಯಲ್ಲಿ ಬ್ರಾನ್ಯಾಸ್ ಸ್ಪೇನ್ನ ಅತಿ ಹಿರಿಯ ಮಹಿಳೆ ಎಂಬುದು ತಿಳಿದುಬಂದಿದೆ.
ವೃದ್ಧರ ಮೇಲೆ ಕೊರೋನಾ ವೈರಸ್ ಮಾರಕ ಪರಿಣಾಮ ಬೀರುತ್ತಿದ್ದು, ಈವರೆಗೂ ಕೊರೋನಾ ವೈರಸ್ನಿಂದ ಮೃತಪಟ್ಟವರಲ್ಲಿ ಬಹುತೇಕ ಎಲ್ಲರೂ ವಯೋವೃದ್ಧರೇ ಆಗಿದ್ದಾರೆ. ಇಂತಹ ವಿಷಮ ಸ್ಥಿತಿಯಲ್ಲಿ ಬ್ರಾನ್ಯಾಸ್ ಕೋವಿಡ್-19ನಿಂದ ಚೇತರಿಸಿಕೊಂಡಿರುವುದು ಗಮನಾರ್ಹವಾಗಿದೆ.
ಡೈಲಿ ಮೇಲ್ ವರದಿ ಪ್ರಕಾರ, ಮಾರಿಯಾ ಬ್ರಾನ್ಯಾಸ್ ಅವರು ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ಆದರೆ, ಪ್ರತಿಯೊಬ್ಬರಿಗೂ ಇರುವಂತೆ ಅವರು ಕೆಲವು ಸಣ್ಣ-ಪುಟ್ಟ ನೋವುಗಳಿಂದ ಬಳಲುತ್ತಿದ್ದಾರೆ. ತಮ್ಮನ್ನು ಆರೈಕೆ ಮಾಡಿ, ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಮಾರಿಯಾ ಬ್ರಾನ್ಯಾಸ್ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನು ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ; ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಇದಕ್ಕೂ ಮುನ್ನ ಸ್ಪಾನಿಷ್ನ 106 ವರ್ಷದ ಆನಾ ದೆಲ್ ವಾಲೆ ಅವರು ಕೊರೋನಾ ವೈರಸ್ನಿಂದ ಬದುಕುಳಿದಿದ್ದರು. ಸ್ಪೇನ್ನಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿನಿಂದ ಬಳಲುತ್ತಿದ್ದು, ಈವರೆಗೂ 27 ಸಾವಿರ ಜನರು ಮೃತಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ