ಕೊರೋನಾ ಭೀತಿ: ಮಹಾರಾಷ್ಟ್ರದಲ್ಲಿ ಪೆರೋಲ್ ಮೇಲೆ 11 ಸಾವಿರ ಕೈದಿಗಳ ಬಿಡುಗಡೆ

ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗಿರುವ 11 ಸಾವಿರ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ನಾನು ಆದೇಶ ಹೊರಡಿಸಿದ್ದೇನೆ. ರಾಜ್ಯಾದ್ಯಂತ ಎಲ್ಲಾ ಕಾರಾಗೃಹಗಳಿಗೂ ಅಗತ್ಯ ಆದೇಶ ಹೊರಡಿಸಿದ್ದೇನೆ ಎಂದು ದೇಶ್​ಮುಖ್ ಹೇಳಿದ್ದಾರೆ.

news18-kannada
Updated:March 27, 2020, 9:35 AM IST
ಕೊರೋನಾ ಭೀತಿ: ಮಹಾರಾಷ್ಟ್ರದಲ್ಲಿ ಪೆರೋಲ್ ಮೇಲೆ 11 ಸಾವಿರ ಕೈದಿಗಳ ಬಿಡುಗಡೆ
ಸಾಂದರ್ಭಿಕ ಚಿತ್ರ
  • Share this:
ಮಹಾರಾಷ್ಟ್ರ(ಮಾ.27): ದೇಶದಲ್ಲಿ ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಏಪ್ರಿಲ್ 14ರವರೆಗೆ ಲಾಕ್​ಡೌನ್​ ಆದೇಶ ಹೊರಡಿಸಲಾಗಿದೆ. ಹೀಗಾಗಿ ಅನೇಕ ಜೈಲುಗಳಿಂದ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ 11 ಸಾವಿರ ಕೈದಿಗಳನ್ನು ಜೈಲಿನಿಂದ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

7 ವರ್ಷಕ್ಕಿಂತ ಕಡಿಮೆ ಜೈಲುಶಿಕ್ಷೆಗೆ ಗುರಿಯಾಗಿರುವ ಕೈದಿಗಳನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್​ಮುಖ್​ ತಿಳಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಅವರು ಈ ಘೋಷಣೆ ಹೊರಡಿಸಿದ್ದಾರೆ.

ಜೈಲುಗಳಲ್ಲೂ ಕೊರೋನಾ ವೈರಸ್ ಭೀತಿ; ಹರಿಯಾಣದ ಕೈದಿಗಳಿಗೆ 4 ವಾರ ರಜೆ ಘೋಷಣೆ

ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗಿರುವ 11 ಸಾವಿರ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ನಾನು ಆದೇಶ ಹೊರಡಿಸಿದ್ದೇನೆ. ರಾಜ್ಯಾದ್ಯಂತ ಎಲ್ಲಾ ಕಾರಾಗೃಹಗಳಿಗೂ ಅಗತ್ಯ ಆದೇಶ ಹೊರಡಿಸಿದ್ದೇನೆ ಎಂದು ದೇಶ್​ಮುಖ್ ಹೇಳಿದ್ದಾರೆ.

ರಾಜ್ಯದಲ್ಲಿ 60 ಕಾರಾಗೃಹಗಳಿದ್ದು, ಅಲ್ಲಿ ಈ ಅದೇಶವನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

First published: March 27, 2020, 9:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading