ಕೊಪ್ಪಳ (ಮೇ. 24): ಕೊರೋನಾ ಸೋಂಕಿಗೆ 11 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲೆಯ ಕುಣೆಗೇರಿ ಗ್ರಾಮದ 11 ವರ್ಷದ ಬಾಲಕಿ ಮಾನಸ ಸಾವನ್ನಪ್ಪಿದ್ದಾಳೆ. ಕಳೆದ ಐದು ದಿನಗಳಿಂದ ಈಕೆ ಜ್ವರದಿಂದ ಬಳಲುತ್ತಿದ್ದಳು. ಪೋಷಕರು ಆಕೆಗೆ ಟೈಫಾಯ್ಡ್ ಆಗಿದೆ ಎಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಕೂಡ ಜ್ವರ ತಗ್ಗಿರಲಿಲ್ಲ. ಇಂದು ಆಕೆಗೆ ಜ್ವರ ತೀವ್ರವಾಗಿದ್ದು, ಉಸಿರಾಟ ಸಮಸ್ಯೆ ಕೂಡ ಕಾಣಿಸಿಕೊಂಡಿದೆ. ತಕ್ಷಣಕ್ಕೆ ಆಕೆಯನ್ನು ಪೋಷಕರು ಇಲ್ಲಿನ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ, ಈ ವೇಳೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಉಸಿರಾಟದಿಂದ ಬಳಲುತ್ತಿದ್ದ ಆಕೆಯನ್ನು ಎಷ್ಟೇ ಪ್ರಯತ್ನ ನಡೆಸಿದರೂ ಉಳಿಸಿಕೊಳ್ಳಲಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸೋಂಕು ಹೇಗೆ ಬಂದಿತು ಎಂಬುದೇ ತಿಳಿದಿಲ್ಲ:
ಸಾವನ್ನಪ್ಪಿದ ಬಾಲಕಿ ಬಾಲಕಿಯ ಕುಟುಂಬ ಗುಳೇ ಕುಟುಂಬವಾಗಿದ್ದು, ಸೋಂಕು ಹೇಗೆ ಹಬ್ಬಿದು ಎಂಬುದೇ ತಿಳಿದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬಾಲಕಿ ಸೇರಿದಂತೆ ಮೂವರು ಹೆಣ್ಣು ಮಕ್ಕಳಿದ್ದು, ಅವರ ಅಪ್ಪ ಕೂಡ ಸೋಂಕಿಗೆ ಒಳಗಾಗಿದ್ದಾರೆ. ಕುಟುಂಬಕ್ಕೆ ಸೋಂಕು ಹೇಗೆ ಬಂದಿತು ಎಂಬುದು ತಿಳಿದಿಲ್ಲ. ನಾವು ಕೊರೋನಾ ಪರೀಕ್ಷೆ ಕೂಡ ಮಾಡಿಸಲು ಹೋಗಿಲ್ಲ ಎಂದಿದ್ದಾರೆ ಬಾಲಕಿ ಪೋಷಕರು ತಿಳಿಸಿದ್ದಾರೆ.
ಬ್ಲಾಕ್ ಫಂಗಸ್ ಗೆ ಚಿಕಿತ್ಸೆಗಾಗಿ ಅಲೆದಾಟ
ಜಿಲ್ಲೆಯ ಕೊರೋನಾ ಸೋಂಕಿನಿಂದ ಗುಣಮುಖವಾದ ವ್ಯಕ್ತಿಯೊಬ್ಬನಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಆತ ಅಲೆದಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ 40 ವರ್ಷದ ವ್ಯಕ್ತಿಯಲ್ಲಿ ಬ್ಲಾಕ್ ಫಂಗಸ್ ಕಂಡು ಬಂದಿತು. ಆತ ಚಿಕಿತ್ಸೆ ಪಡೆಯಲಾರದೇ ನಾಲ್ಕು ದಿನ ಅಲೆದಾಟ ನಡೆಸಿದ್ದಾರೆ. ಕಡೆಗೆ ಕೊಪ್ಪಳ ಕಿಮ್ಸ್ ಅಧಿಕಾರಿಗಳ ಸಹಾಯದಿಂದ ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಲಾಗಿದೆ.
ಇದನ್ನು ಓದಿ: ಬ್ಲಾಕ್ ಫಂಗಸ್ ಚಿಕಿತ್ಸೆಗೆ ಕಿಮ್ಸ್ ಕೇಳಿದ್ದು 2 ಸಾವಿರ ವೇಲ್ಸ್; ಸರ್ಕಾರ ಕೊಟ್ಟಿದ್ದು ನೂರು ವೇಲ್ಸ್: ಶೆಟ್ಟರ್ ಸಮರ್ಥನೆ
ಮೇ 17 ರಂದು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿಗೆ ಮೇ 20 ರಂದು ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಈ ವೇಳೆ ಅವರು ಕೊಪ್ಪಳ ಕಿಮ್ಸ್ಗೆ ಸೇರಲು ಮುಂದಾಗಿದ್ದಾರೆ. ಆದರೆ, ಕೊಪ್ಪಳ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ಇಲ್ಲ ಎಂದಿದ್ದಾರೆ. ಬಳಿಕ ಆತ ಅಲ್ಲಿಂದ ಹರಪನಹಳ್ಳಿ, ಮುಂಡರಗಿ ಆಸ್ಪತ್ರೆಗೆ ಹೋಗಿದ್ದಾರೆ. ಕೊನೆಗೆ ಹುಬ್ಭಳ್ಳಿ ಕಿಮ್ಸ್ ಹೋಗಿದ್ದಾರೆ.
ಅಲ್ಲಿ ಜಿಲ್ಲಾಧಿಕಾರಿ ಗಳಿಂದ ಪತ್ರ ಬೇಕೆಂಬ ಕಾರಣಕ್ಕೆ ಒಂದು ದಿನ ಅಡ್ಮಿಟ್ ಮಾಡಿಕೊಂಡಿಲ್ಲ. ಇಂದು ಕೊಪ್ಪಳ ಕಿಮ್ಸ್ ನಿರ್ದೇಶಕ ಸಹಾಯದಿಂದ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ