ಬೆಂಗಳೂರಲ್ಲೇ 11 ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ; ಮಾಜಿ ಸಚಿವ ಎಚ್.ಕೆ.ಪಾಟೀಲ

ಹಾಸಿಗೆ ಸಿಗದೆ, ಚಿಕಿತ್ಸೆ ಸಿಗದೆ, ಆ್ಯಂಬುಲೆನ್ಸ್ ಸಿಗದೆ ಹಲವಾರು ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ  ಮನವಿ ಸಲ್ಲಿಸಿದ್ದೆ. ಅದರನ್ವಯ ನನ್ನ ಮನವಿಯನ್ನು ದೂರಾಗಿ ಪರಿಗಣಿಸಿ ವಿಚಾರಣೆ ನಡೆಸಿದೆ ಎಂದರು.

news18-kannada
Updated:August 4, 2020, 6:39 PM IST
ಬೆಂಗಳೂರಲ್ಲೇ 11 ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ; ಮಾಜಿ ಸಚಿವ ಎಚ್.ಕೆ.ಪಾಟೀಲ
ಮಾಜಿ ಸಚಿವ ಹೆಚ್ ಕೆ ಪಾಟೀಲ​​​
  • Share this:
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ 11 ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಇವರು ಎಲ್ಲಿ ಹೋದರು? ಏನಾದರೂ? ಇವರು ಇತರೆ ಅದೆಷ್ಟು ಜನರಿಗೆ ಸೋಂಕನ್ನು ಹರಡಿಸಿರುತ್ತಾರೋ ಗೊತ್ತಿಲ್ಲ ಎಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್ ಕೆ ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಇವರನ್ನು ಹುಡುಕುವ ಯಾವ ಪ್ರಯತ್ನವನ್ನೂ ಮಾಡ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ನಾಪತ್ತೆಯಾದವರನ್ನು ಹುಡುಕುವುದನ್ನು ಬಿಟ್ಟು ಆಹಾರ ಕಿಟ್​ಗಳ ವಿತರಣೆಯಲ್ಲಿ ಮಗ್ನರಾಗಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.

ತಪ್ಪು ದೂರವಾಣಿ ನಂಬರ್, ವಿಳಾಸ ನೀಡಿ ತಪ್ಪಿಸಿಕೊಂಡಿದ್ದಾರೆ. ಸೋಂಕಿತರು ತಪ್ಪಿಸಿಕೊಂಡವರಿಂದ ಎಷ್ಟು ಜನರಿಗೆ ಸೋ‌ಂಕು ಹರಡುವುದನ್ನು‌ ತಡೆಯುವ ಪ್ರಯತ್ನ ಮಾಡಲಿಲ್ಲ. ಮೇಲ್ವಿಚಾರಣೆ ತಂಡ, ನಿಗಾ ಘಟಕಗಳು ಸಮರ್ಪಕವಾಗಿ ಕೆಲಸ‌ ಮಾಡುತ್ತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್  ಅವರು ನಾಪತ್ತೆಯಾದ ಕೋವಿಡ್ ಸೋಂಕಿತರ ಬಗ್ಗೆ ಜನರಿಗೆ  ಉತ್ತರ ನೀಡಬೇಕಿದೆ. ಸರ್ಕಾರ ಇಪ್ಪತ್ತನಾಲ್ಕು ಗಂಟೆಯ ಒಳಗೆ ಉತ್ತರ ನೀಡಬೇಕು. ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ‌ ನೀಡಬೇಕು ಎಂದು ಒತ್ತಾಯಿಸಿದರು. ಇದರ ಜೊತೆಗೆ ಕೋವಿಡ್ ಸೋಂಕಿತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ನೀಡಿದ್ದೇನೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಹಾಸಿಗೆ ಸಿಗದೆ, ಚಿಕಿತ್ಸೆ ಸಿಗದೆ, ಆ್ಯಂಬುಲೆನ್ಸ್ ಸಿಗದೆ ಹಲವಾರು ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ  ಮನವಿ ಸಲ್ಲಿಸಿದ್ದೆ. ಅದರನ್ವಯ ನನ್ನ ಮನವಿಯನ್ನು ದೂರಾಗಿ ಪರಿಗಣಿಸಿ ವಿಚಾರಣೆ ನಡೆಸಿದೆ ಎಂದರು. ಅಂತ್ಯಕ್ರಿಯೆ ವಿಚಾರದಲ್ಲಿ ಸಾರ್ವಜನಿಕರಿಗೆ ಅವುಗಳನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ಸೂಚಿಸಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯದಿಂದ ಕೆಲಸ‌ ಮಾಡುತ್ತಿದ್ದಾರೆ. ಮಾನವ ಹಕ್ಕುಗಳ ಆಯೋಗ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಸರ್ಕಾರಕ್ಕೆ ನಿರ್ದೇಶನ ಕೊಡಿಸಲು ಅವಕಾಶವಿದೆ. ಇದರಿಂದಾಗಿ‌ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ‌ ಮಾಡಬೇಕಿದೆ ಎಂದು ಹೇಳಿದರು.

ಇದನ್ನು ಓದಿ: Ayodhya Ram Mandir: ರಾಮ ಎಲ್ಲರಲ್ಲೂ ಇದ್ದಾನೆ, ಅಯೋಧ್ಯೆ ಕಾರ್ಯಕ್ರಮ ದೇಶದ ಏಕತೆಗೆ ದಾರಿಯಾಗಲಿ: ಪ್ರಿಯಾಂಕಾ ಗಾಂಧಿ

ಕೋವಿಡ್​ನಿಂದಾಗಿ ಮೃತಪಟ್ಟವರ ಅಂತ್ಯ ಸಂಸ್ಕಾರದ ಬಗೆಗಿನ ನಿಯಮಗಳನ್ನು ಸಾರ್ವಜನಿಕರ ಮುಂದೆ ಇಡಿ ಎಂದು ಮಾನವ ಹಕ್ಕುಗಳ ಆಯೋಗ,  ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ ಎಂದರು.
Published by: HR Ramesh
First published: August 4, 2020, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading