ಕೊರೋನಾ ಲಾಕ್ ಡೌನ್ – ಬೆಳೆ ಹಾನಿಗೆ ಎಕರೆಗೆ 10 ರಿಂದ 20 ಸಾವಿರ ಪರಿಹಾರ ನೀಡಿ ; ಕುಮಾರಸ್ವಾಮಿ ಆಗ್ರಹ

ರಾಮನಗರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಟನಲ್‌ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಬೇರೆ ಭಾಗಗಳಲ್ಲೂ ಟನಲ್ ಗಳನ್ನ ಸ್ಥಾಪಿಸಲಾಗುವುದೆಂದು ಹೆಚ್ಡಿಕೆ ತಿಳಿಸಿದರು.

news18-kannada
Updated:April 6, 2020, 6:32 PM IST
ಕೊರೋನಾ ಲಾಕ್ ಡೌನ್ – ಬೆಳೆ ಹಾನಿಗೆ ಎಕರೆಗೆ 10 ರಿಂದ 20 ಸಾವಿರ ಪರಿಹಾರ ನೀಡಿ ; ಕುಮಾರಸ್ವಾಮಿ ಆಗ್ರಹ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ರಾಮನಗರ (ಏ.06) :  ರಾಜ್ಯದಲ್ಲಿ ರೈತರು ಬೆಳೆಯುವ ಎಲ್ಲಾ ಬೆಳೆಗಳ ಬೆಲೆಯೂ ಕುಸಿದಿದೆ. ರೈತರಿಂದ ಹೊಲದಲ್ಲಿ ಬೆಳೆ ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಹಾಗಾಗಿ ಸರ್ಕಾರ ರೈತರ 1 ಎಕರೆಯಲ್ಲಿ ಬೆಳೆದಿರುವ ಬೆಳೆಗೆ 10 ರಿಂದ 20 ಸಾವಿರ ಪರಿಹಾರ ಕೊಡಬೇಕು ಎಂದು ಸರ್ಕಾರವನ್ನುಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಈಗ ಮಾವನ್ನ ಹೊರಭಾಗಕ್ಕೆ ರಫ್ತು ಮಾಡುವುದು ಕಷ್ಟವಾಗಿದೆ. ಸರ್ಕಾರಕ್ಕೆ ಇವತ್ತು ಹಣದ ಕೊರತೆಯಿಲ್ಲ, ಹಣ ಸಂಗ್ರಹ ಮಾಡಬಹುದು. ನಾನು 25 ಸಾವಿರ ಕೋಟಿ ರೈತರ ಸಾಲಮನ್ನಕ್ಕೆ ಹಣ ಹೊಂದಿಸಲಿಲ್ಲವೆ ಎಂದರು.

ಕೊರೋನಾ ಸೋಂಕು ನಿವಾರಕ ಟನಲ್‌ ಗಳ ಸ್ಥಾಪನೆ‌ ಮಾಡಿದ್ದು, ರೈತರು, ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಹಿನ್ನಲೆ. ರಾಮನಗರ, ಚನ್ನಪಟ್ಟಣ ಎಪಿಎಂಸಿ, ರೇಷ್ಮೆ ಮಾರುಕಟ್ಟೆಯಲ್ಲಿ ಇಂದು ಉದ್ಘಾಟನೆ ಮಾಡಲಾಯಿತು. ಚನ್ನಪಟ್ಟಣ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಒಟ್ಟಿಗೆ ಉದ್ಘಾಟನೆ ನೆರವೇರಿಸಿದರು.

ರಾಮನಗರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಟನಲ್‌ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಬೇರೆ ಭಾಗಗಳಲ್ಲೂ ಟನಲ್ ಗಳನ್ನ ಸ್ಥಾಪಿಸಲಾಗುವುದೆಂದು ಹೆಚ್ಡಿಕೆ ತಿಳಿಸಿದರು.

ಏ.17 ಕ್ಕೆ ನಿಖಿಲ್ ಮದುವೆ

ಇದೇ ಏ.17 ರ ಶುಭ ಲಗ್ನದಲ್ಲೇ ಮನೆಯ ಸದಸ್ಯರ ನಡುವೆ ನಿಖಿಲ್ ಮದುವೆ ನಡೆಯುತ್ತೆ. ಇಲ್ಲಾ ಹೆಣ್ಣಿನ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತೆ. ಮುಂದೆ ಸಮಯ ನೋಡಿ ರಾಮನಗರದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : ‘ಕೊರೋನಾ ವಿರುದ್ಧದ ಹೋರಾಟಕ್ಕೆ ಜೆಡಿಎಸ್​​ ಬೆಂಬಲ ಇದೆ; ಹಾಗಾಗಿ ಮೋದಿ ಮಾತು ಪಾಲಿಸಿದ್ದೇವೆ‘ - ದೇವೇಗೌಡಇನ್ನು ಲಾಕ್ ಡೌನ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ಲಾಕ್ ಡೌನ್ ಮುಂದುವರೆಯುತ್ತ, ಇಲ್ವಾ ಎಂಬುದು ಗೊತ್ತಿಲ್ಲ. 16 ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಯುತ್ತೆ, ಬೇರೆ ಕಡೆ ಇಲ್ಲ ಎಂಬ ಮಾಹಿತಿ ಇದೇ. ಆದರೆ ಮುಂದೆ ಕಾದು ನೋಡಬೇಕು. ಈಗ ಸರ್ಕಾರದ ನಡೆಯ ಬಗ್ಗೆ ಟೀಕೆ ಮಾಡಲ್ಲ. ಸರ್ಕಾರಕ್ಕೆ ನಾವು ಸಲಹೆ ಕೊಡಬಹುದು, ಸಲಹೆ ಕೊಡ್ತೇವೆ ಅಷ್ಟೇ. ಮುಖ್ಯವಾಗಿ ವೈದ್ಯರ ಬಗ್ಗೆ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದರು.

(ವರದಿ : ಎ ಟಿ ವೆಂಕಟೇಶ್)
First published: April 6, 2020, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading