ಸುಸಜ್ಜಿತವಾಗಿ ಸಿದ್ದವಾಗುತ್ತಿದೆ 10 ಸಾವಿರ ಹಾಸಿಗೆ ಸಾಮರ್ಥ್ಯದ ಬಿಐಇಸಿ ಕೋವಿಡ್ ಕೇರ್ ಸೆಂಟರ್

ಸೋಂಕಿತರಿಗೆ ಉತ್ತಮ ಆರೈಕೆ ಜೊತೆಗೆ ಇತರೆ ಚಟುವಟಿಕೆಗಳಿಗೂ ಸಹ ಆದ್ಯತೆ ನೀಡಲಾಗುತ್ತದೆ. ಯೋಗ, ಪ್ರೇರಣ ಭಾಷಣ, ಕೇರಂ, ಚೆಸ್, ಗ್ರಂಥಾಲಯ, ದಿನಪತ್ರಿಕೆ, ಮಾಸಪತ್ರಿಕೆಗಳು, ಇಂಟರ್ನೆಟ್ ಸೌಲಭ್ಯ, ಆರೋಗ್ಯ ತಜ್ಞರಿಂದ ಆತ್ಮಸ್ಥೈರ್ಯ ತುಂಬುವಂತಹ ವಿಶೇಷ ಭಾಷಣಕ್ಕೂ ಕೋವಿಡ್ ಕೇರ್ ಸೆಂಟರ್​ನಲ್ಲಿ ವ್ಯವಸ್ಥೆ ಮಾಡಲಾಗಿದೆ‌.

ಬೆಂಗಳೂರಿನ ಮಾದವಾರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಲಾಗಿರುವ 10100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್.

ಬೆಂಗಳೂರಿನ ಮಾದವಾರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಲಾಗಿರುವ 10100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್.

  • Share this:
ಬೆಂಗಳೂರು (ಜುಲೈ 10): ಕೊರೋನಾ ವೈರಸ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ 1000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡುವುದೇ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿತ್ತು. ಇದೀಗ ಮುನ್ನೆಚ್ಚರಿಕೆಯಾಗಿ ಮುಂದಿನ ದಿನಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಬೆಂಗಳೂರು ಉತ್ತರ ತಾಲೂಕಿನ ಮಾದವಾರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 10100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ.

ಕೋವಿಡ್ ಕೇರ್ ಸೆಂಟರ್‌ನಲ್ಲಿ ಸದ್ಯ 6100 ಬೆಡ್‌ಗಳು ಆರೈಕೆಗೆ ಸಿದ್ದವಿದ್ದು, ಇನ್ನೂ 4000 ಬೆಡ್‌ಗಳನ್ನ ಸಿದ್ದಪಡಿಸಬೇಕಿದೆ. ಹಾಲ್ ನಂಬರ್ 1ರಲ್ಲಿ 920 ಬೆಡ್‌ಗಳು, 2ರಲ್ಲಿ 872 ಬೆಡ್‌ಗಳು ಹಾಲ್ ನಂಬರ್ 3ರಲ್ಲಿ  1180 ಬೆಡ್‌ಗಳು, ಹಾಲ್ ನಂಬರ್ 4ರಲ್ಲಿ 1512 ಬೆಡ್‌ಗಳು, ಹಾಲ್ ನಂಬರ್ 5 ರಲ್ಲಿ 1616 ಬೆಡ್‌ಗಳನ್ನ ಸಿದ್ದಪಡಿಸಲಾಗಿದೆ.

ಕೋವೀಡ್ ಕೇರ್ ಸೆಂಟರ್‌ನಲ್ಲಿ 300 ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ 600 ನರ್ಸ್‌ಗಳು, 300 ಸಹಾಯಕರು, 400 ಶುಚಿತ್ವ ಸಿಬ್ಬಂದಿ, 300 ಮಾರ್ಶಲ್‌ಗಳು, 300 ಆರಕ್ಷಕ ಸಿಬ್ಬಂದಿ ಸೇರಿದಂತೆ ಒಟ್ಟು 2200 ಸಿಬ್ಬಂದಿ ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸೋಂಕಿತರಿಗೆ ಬೆಳಗ್ಗೆ 8ಕ್ಕೆ ಉಪಾಹಾರ ನೀಡಲಾಗುತ್ತದೆ. ಬೆಳಗ್ಗೆ ತಿಂಡಿಗೆ ತಡ್ಲಿ, ಪೊಂಗಲ್, ದೋಸೆ, ಚೌಚೌಬಾತ್, ಬೆಳಗ್ಗೆ 10 ಘಂಟೆಗೆ ಹಣ್ಣು ಮತ್ತು ಸೂಪ್‌ಗಳು, ಮಧ್ಯಾಹ್ನ 12ಕ್ಕೆ ರೊಟ್ಟಿ, ಚಪಾತಿ, ಸಬ್ಜಿ, ಪಲ್ಯ, ಅನ್ನ- ಸಾಂಬಾರ್, ಮೊಸರು, ಸಂಜೆ 5ಕ್ಕೆ ಲಘು ಉಪಾಹಾರವಾಗಿ ಬಾಳೆಹಣ್ಣು, ಬಿಸ್ಕತ್, ಡ್ರೈಫ್ರೂಟ್ಸ್, ರಾತ್ರಿ 7 ಘಂಟೆಗೆ ರೊಟ್ಟಿ, ಚಪಾತಿ, ಸಬ್ಜಿ, ಪಲ್ಯ, ಅನ್ನ, ಸಾಂಬಾರ್, ಮೊಸರು, ನೀಡಲಾಗುತ್ತದೆ. ಹಾಗೂ ಮಲಗುವ ಮುಂಚೆ ಅರಿಶಿನ ಬೆರೆಸಿದ ಹಾಲು ನೀಡಲಾಗುವುದು.

ಇದನ್ನು ಓದಿ: ಸಿಎಂ ಗೃಹ ಕಚೇರಿಯಲ್ಲಿ ಕೊರೋನಾ ಪತ್ತೆ; ಇಂದಿನಿಂದ ಕೆಲವು ದಿನ ಸಿಎಂ ಯಡಿಯೂರಪ್ಪ ಮನೆಯಿಂದಲೇ ಕೆಲಸ

ಸೋಂಕಿತರಿಗೆ ಉತ್ತಮ ಆರೈಕೆ ಜೊತೆಗೆ ಇತರೆ ಚಟುವಟಿಕೆಗಳಿಗೂ ಸಹ ಆದ್ಯತೆ ನೀಡಲಾಗುತ್ತದೆ. ಯೋಗ, ಪ್ರೇರಣ ಭಾಷಣ, ಕೇರಂ, ಚೆಸ್, ಗ್ರಂಥಾಲಯ, ದಿನಪತ್ರಿಕೆ, ಮಾಸಪತ್ರಿಕೆಗಳು, ಇಂಟರ್ನೆಟ್ ಸೌಲಭ್ಯ, ಆರೋಗ್ಯ ತಜ್ಞರಿಂದ ಆತ್ಮಸ್ಥೈರ್ಯ ತುಂಬುವಂತಹ ವಿಶೇಷ ಭಾಷಣಕ್ಕೂ ಕೋವಿಡ್ ಕೇರ್ ಸೆಂಟರ್​ನಲ್ಲಿ  ವ್ಯವಸ್ಥೆ ಮಾಡಲಾಗಿದೆ‌.
Published by:HR Ramesh
First published: