ಕಾಫಿನಾಡಿಗೂ ಬಿಡದ ಮುಂಬೈ ನಂಟು; ಚಿಕ್ಕಮಗಳೂರಿಗೂ ಕೊರೋನಾ ಸೋಂಕು ಹೊತ್ತು ತಂದ ಎಂಟು ಮಂದಿ

ಕೊರೋನಾ ಸೋಂಕು ದೇಶದೊಳಗೆ ಕಾಲಿಟ್ಟ ನಂತರದ 55 ದಿನಗಳು ಕಾಫಿನಾಡು ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಸರ್ಕಾರ ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿ ನೀಡಿದ ನಂತರ ಕಾಫಿನಾಡಿನಲ್ಲೂ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಹತ್ತು ಕೊರೋನಾ ಸೋಂಕು ಪ್ರಕರಣದಲ್ಲಿ 8 ಮಂದಿ ಮುಂಬೈ ಮೂಲವನ್ನು ಹೊಂದಿದ್ದಾರೆ.

ಚಿಕ್ಕಮಗಳೂರು ಪೊಲೀಸರು ರಸ್ತೆಯನ್ನು ಬ್ಲಾಕ್ ಮಾಡಿರುವುದು (ಸಂಗ್ರಹ ಚಿತ್ರ)

ಚಿಕ್ಕಮಗಳೂರು ಪೊಲೀಸರು ರಸ್ತೆಯನ್ನು ಬ್ಲಾಕ್ ಮಾಡಿರುವುದು (ಸಂಗ್ರಹ ಚಿತ್ರ)

  • Share this:
ಚಿಕ್ಕಮಗಳೂರು: ಎರಡು ತಿಂಗಳಿಂದ ಗ್ರೀನ್ ಝೋನ್ ಹಣೆಪಟ್ಟಿ ಹೊತ್ತುಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರೇ ದಿನದಲ್ಲಿ 10 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲೆಗೆ ಬರಸಿಡಿಲು ಬಡಿದಂತಾಗಿದೆ. ಅದರಲ್ಲೂ ಮುಂಬೈ ನಂಟು ಕಾಫಿನಾಡಿಗೆ ದೊಡ್ಡ ಆಘಾತ ನೀಡಿದೆ. 10 ಪ್ರಕರಣದಲ್ಲಿ 8 ಪ್ರಕರಣಗಳು ಮುಂಬೈನಿಂದ ಬಂದವರಾಗಿದ್ದು, ಕಾಫಿನಾಡಿನ ಮಂದಿ ಮುಂಬೈ ಲಿಂಕ್ ಗೆ ಬೆಚ್ಚಿಬಿದ್ದಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಐದು ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಕಳೆದ ಮಂಗಳವಾರ ಜಿಲ್ಲೆಯ ಮೂಡಿಗೆರೆ, ತರೀಕೆರೆ ಹಾಗೂ ಎನ್.ಆರ್.ಪುರ ತಾಲೂಕಿನಲ್ಲಿ ಐದು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಶುಕ್ರವಾರ ಎನ್.ಆರ್.ಪುರ ಮೂಲದ ಐದು ಮಂದಿಗೆ ಕೊರೋನಾ ದೃಢಪಟ್ಟಿದೆ. ಐದು ಪ್ರಕರಣಗಳು ಮಹಾರಾಷ್ಟ್ರದ ಮುಂಬೈನಿಂದ ಬಂದವರಲ್ಲಿ ಕಾಣಿಸಿಕೊಂಡಿದ್ದು, ಕಾಫಿನಾಡಿನ ಜನರಲ್ಲಿ ಆತಂಕ ಮನೆಮಾಡಿದೆ.

ಮೇ 16ರಂದು ಎನ್.ಆರ್.ಪುರ ತಾಲೂಕಿನ ಸಿತೂರಿಗೆ ಟೆಂಪೋ ಟ್ರಾವೆಲ್ ಮೂಲಕ ಎರಡು ಕುಟುಂಬದ 9ಮಂದಿ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಅವರೆಲ್ಲರನ್ನೂ ಕೊಪ್ಪದ ಹರಂದೂರು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದರಲ್ಲಿ 7ವರ್ಷದ ಬಾಲಕ, 10ವರ್ಷದ ಬಾಲಕ, 17ವರ್ಷದ ಯುವತಿಯಲ್ಲಿ ಕೊರೋನಾ ಸೋಂಕಿರುವುದು ಮಂಗಳವಾರ ದೃಢಪಟ್ಟಿತ್ತು. ಉಳಿದ ಆರು ಮಂದಿಯಲ್ಲಿ ಐದು ಮಂದಿಯ ಗಂಟಲ ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆ ವರದಿ ಶುಕ್ರವಾರ ಬಂದಿದ್ದು, 7ವರ್ಷದ ಬಾಲಕ, 14 ವರ್ಷದ ಬಾಲಕಿ, 49 ವರ್ಷದ ಪುರುಷ, 46 ವರ್ಷದ ಪುರುಷ ಹಾಗೂ 48 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಇದರಲ್ಲಿ ಮತ್ತೊಬ್ಬರ ವರದಿ ಬರಬೇಕಿದೆ.

ಮೂಡಿಗೆರೆ ತಾಲ್ಲೂಕಿನ ಸರ್ಕಾರಿ ವೈದ್ಯ, ತರೀಕೆರೆ ತಾಲ್ಲೂಕಿನ ಗರ್ಭಿಣಿ ಮಹಿಳೆ ಹಾಗೂ ಮಹಾರಾಷ್ಟ್ರದಿಂದ ಬಂದ 8 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು ಅವರೆಲ್ಲರನ್ನೂ ಚಿಕ್ಕಮಗಳೂರು ನಗರದ ಮಲ್ಲೇಗೌಡ  ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್-19 ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ: ಮಹಾರಾಷ್ಟ್ರದಿಂದ ಕಲಬುರ್ಗಿಗೆ 30 ಸಾವಿರಕ್ಕೂ ಅಧಿಕ ವಲಸಿಗರು; ನೆಗೆಟಿವ್ ಬಂದವರು ಮನೆಗೆ ತೆರಳಲು ಅವಕಾಶ

ಜಿಲ್ಲೆಯನ್ನು ಕಾಡುತ್ತಿದೆ ಮುಂಬೈ ನಂಟು

ಕೊರೋನಾ ಸೋಂಕು ದೇಶದೊಳಗೆ ಕಾಲಿಟ್ಟ ನಂತರದ 55 ದಿನಗಳು ಕಾಫಿನಾಡು ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಸರ್ಕಾರ ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿ ನೀಡಿದ ನಂತರ ಕಾಫಿನಾಡಿನಲ್ಲೂ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಹತ್ತು ಕೊರೋನಾ ಸೋಂಕು ಪ್ರಕರಣದಲ್ಲಿ 8 ಮಂದಿ ಮುಂಬೈ ಮೂಲವನ್ನು ಹೊಂದಿದ್ದಾರೆ. ಸರ್ಕಾರ ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿ ನೀಡಿದ ನಂತರ ಜಿಲ್ಲೆಗೆ 200 ಮಂದಿ ಮಹಾರಾಷ್ಟ್ರದಿಂದ ಬಂದಿದ್ದು, ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂಬೈನಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿರುವುದರಿಂದ ಜಿಲ್ಲೆಯ ಜನರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

 
First published: