Chitradurga: 300 ವರ್ಷಗಳ ನಂತರ ಹೊಸದುರ್ಗದ ಸಿದ್ದೇಶ್ವರ ದೇವರುಗಳ ಕೂಡುಭೇಟಿ ಉತ್ಸವ ಸಂಭ್ರಮ!

ಶ್ರೀ ಸಿದ್ದೇಶ್ವರ ಬೀರಲಿಂಗೇಶ್ವರ ಸ್ವಾಮಿ ದೇವಾಲಯ

ಶ್ರೀ ಸಿದ್ದೇಶ್ವರ ಬೀರಲಿಂಗೇಶ್ವರ ಸ್ವಾಮಿ ದೇವಾಲಯ

ಶ್ರೀ ಸಿದ್ದೇಶ್ವರ ಬೀರಲಿಂಗೇಶ್ವರ ಸ್ವಾಮಿ, ಶ್ರೀ ದೊಡ್ಡಣ್ಣ ಹಾಗೂ ಚಿಕ್ಕಣ್ಣ ದೇವರುಗಳನ್ನು ಹಾಲುಮತ ಕುರುಬ ಸಮಾಜದವರು ಆರಾಧನೆ ಮಾಡಿಕೊಂಡು ಬಂದಿದ್ದಾರೆ.

  • News18 Kannada
  • 3-MIN READ
  • Last Updated :
  • Chitradurga, India
  • Share this:

    ಚಿತ್ರದುರ್ಗ: ಹೊಸದುರ್ಗ ತಾಲೂಕಿನ (Hosadurga) ಕೆಲ್ಲೋಡು ಗ್ರಾಮದ ಶ್ರೀ ಸಿದ್ದೇಶ್ವರ ಬೀರಲಿಂಗೇಶ್ವರಸ್ವಾಮಿ, ಶ್ರೀ ದೊಡ್ಡಣ್ಣ ಹಾಗೂ ಚಿಕ್ಕಣ್ಣ ಸ್ವಾಮಿಯ ನೂತನ ದೇವಾಲಯ ಪ್ರಾರಂಭೋತ್ಸವ, ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಕುಂಭಾಭಿಷೇಕ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಬರೋಬ್ಬರಿ 300 ವರ್ಷಗಳ ನಂತರ ದೇವಪುರದ ಶ್ರೀ ಬೀರಲಿಂಗೇಶ್ವರ ಹಾಗೂ ಕೆಲ್ಲೋಡು ಶ್ರೀ ಸಿದ್ದೇಶ್ವರ ದೇವರುಗಳ ಕೂಡುಭೇಟಿ ಉತ್ಸವ (Koodubheti Utsav) ನಡೆಯಲಿರುವುದು ಜಾತ್ರೆಯ ವಿಶೇಷವಾಗಿದೆ.


    ಶ್ರೀ ಸಿದ್ದೇಶ್ವರ ಬೀರಲಿಂಗೇಶ್ವರ ಸ್ವಾಮಿ, ಶ್ರೀ ದೊಡ್ಡಣ್ಣ ಹಾಗೂ ಚಿಕ್ಕಣ್ಣ ದೇವರುಗಳನ್ನು ಹಾಲುಮತ ಕುರುಬ ಸಮಾಜದವರು ಆರಾಧನೆ ಮಾಡಿಕೊಂಡು ಬಂದಿದ್ದಾರೆ. ಪ್ರಮುಖವಾಗಿ 62 ಗ್ರಾಮದಲ್ಲಿ ನೆಲೆಸಿರುವ 13 ಕುಲದವರಾದ ತೋವಿನಕುಲ, ಶಾವಂತಕುಲ, ಮನ್ನೆಕುಲ, ಧಾರೆಕುಲ, ಗೌಡಕುಲ, ಆನೆಕುಲ, ದಂಡೆಕುಲ, ಅರ್ಧನಕುಲ, ಬ್ಯಾಲನಕುಲ, ಸೆಂಗೆಕುಲ, ಹಾಲನಕುಲ, ಚಂದ್ರಕುಲ, ಹುಲ್ಲೆಕುಲದವರು ಸೇರಿದಂತೆ ಭಕ್ತರ ಸಹಕಾರದಿಂದ ನೂತನ ದೇವಾಲಯ ಅಭಿವೃದ್ದಿಪಡಿಸಲಾಗಿದೆ.


    ಹಲವು ಧಾರ್ಮಿಕ ಕಾರ್ಯಗಳಿಗೆ ಸಾಕ್ಷಿಯಾದ ಜಾತ್ರೆ
    ಜನವರಿ 22 ರಿಂದ ಆರಂಭವಾಗಿರುವ ಜಾತ್ರಾ ಮಹೋತ್ಸವದಲ್ಲಿ ಈಗಾಗಲೇ ಹಲವು ಧಾರ್ಮಿಕ ಕಾರ್ಯಗಳು ಜರುಗಿವೆ. ಶ್ರೀ ನಿರಂಜನಾನಂದಪುರಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರಿಂದ ಕಳಸರೋಹಣ ನಡೆದಿದೆ.


    ಈ ಎಲ್ಲ ದೇವರುಗಳ ಉಪಸ್ಥಿತಿ
    ಶ್ರೀ ಗುರುರೇವಣಸಿದ್ದೇಶ್ವರ ಸ್ವಾಮಿ, ಕರೆಕಲ್ ಬೀರಲಿಂಗೇಶ್ವರ ಸ್ವಾಮಿ, ದಳವಾಯಪ್ಪ ಸ್ವಾಮಿ, ಕಂಸಾಗ ಬೀರಲಿಂಗೇಶ್ವರ ಸ್ವಾಮಿ, ಹುಲ್ಲೂರು ಬೀರಲಿಂಗೇಶ್ವರ ಸ್ವಾಮಿ, ಮಲಿಯಮ್ಮ ದೇವಿ, ಮಲೆನಾಡ ಚೌಡೇಶ್ವರಿ ದೇವಿ, ಕೆಲ್ಲೋಡು, ಅತ್ತಿಘಟ್ಟ, ಕಾರೇಹಳ್ಳಿ, ನಗರಗೆರೆ ಆಂಜನೇಯಸ್ವಾಮಿ, ತಿಮ್ಮಪ್ಪಸ್ವಾಮಿ, ಕೆಲ್ಲೋಡು ಹೊಸೂರಮ್ಮ ದೇವಿ ದೇವರುಗಳು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿವೆ.




    ಮಕ್ಕಳಿಗೆ ಹೆಸರಿಡುವ ವಿಶಿಷ್ಟ ಸಂಪ್ರದಾಯ
    ಈ ದೇವರು ಆರೋಗ್ಯ, ಸಂತಾನ ಪ್ರಾಪ್ತಿ, ಸಂಪತ್ತು ಕರುಣಿಸುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು. ಈ ಕಾರಣಕ್ಕೆ ಜನಿಸುವ ಗಂಡು ಮಗುವಿಗೆ ಸಿದ್ದಪ್ಪ, ಚಿಕ್ಕಣ್ಣ, ದೊಡ್ಡಣ್ಣ ಎಂತಲೂ, ಹೆಣ್ಣು ಮಗುವಿಗೆ ಸಿದ್ದಮ್ಮ, ಮಲಿಯಮ್ಮ ಎಂದು ನಾಮಕರಣ ಮಾಡುವ ಸಂಪ್ರದಾಯ ರೂಡಿಸಿಕೊಂಡು ಬರಲಾಗಿದೆ.


    ಇದನ್ನೂ ಓದಿ: Kavadikere Lake Temple: ಕವಡೆಯ ನೀರಿನಿಂದ ತುಂಬಿದ 60 ಎಕರೆಯ ಕೆರೆ! ದಟ್ಟ ಅಡವಿಯ ನಡುವಿನ ಕವಡಿಕೆರೆ ಮಹಾತ್ಮೆಯಿದು




    ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಶ್ರೀ ಸ್ವಾಮಿಯ ಉತ್ಸವ ನಡೆಸಲಾಗುತ್ತದೆ ಎಂದು ಭಕ್ತರಾದ ವಜ್ರಪ್ಪ, ಗುಡಿ ಗೌಡ ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ: Uttara Kannada: 2 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಅದ್ಭುತ ಕೃಷಿ ಉಪಕರಣ ತಯಾರಿಸಿದ ವಿದ್ಯಾರ್ಥಿಗಳು!


    ಧಾರ್ಮಿಕ ಸಭೆಯಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಸಚಿವರು ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.


    ಮಾಹಿತಿ: ವಿನಾಯಕ್, ನ್ಯೂಸ್ 18 ಕನ್ನಡ ಚಿತ್ರದುರ್ಗ

    Published by:ಗುರುಗಣೇಶ ಡಬ್ಗುಳಿ
    First published: