ಚಿಕ್ಕಮಗಳೂರು: ಹೊರನಾಡು ಅಬ್ಬಪೂರ್ಣೇಶ್ವರಿಯ ಭಕ್ತರಿಗೆ ಈಗ ಕಾಡಾನೆ ಕಾಟ! ಹೌದು, ರಾತ್ರಿ ಆದ್ರೆ ಸಾಕು ಆಚೆ ಕಾಲಿಡೋಕೂ ಭಯ. ಒಂದು ಹೆಜ್ಜೆ ಬಾಗಿಲಿನಿಂದಾಚೆ ಇಟ್ರೆ ಎಲ್ಲಿ ಕಾಡಾನೆ ದಾಳಿ (Wild Elephants Problem) ಮಾಡುತ್ತೋ ಅನ್ನೋ ಢವಢವ! ಚಿಕ್ಕಮಗಳೂರು ಜಿಲ್ಲೆ (Chikkamagalur News) ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲೇ ಇಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಗಣಪತಿಕಟ್ಟೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ (Horanadu Annapoorneshwari) ಹೋಗುವ ಮಾರ್ಗದಲ್ಲಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ತೀರಾ ಹೆಚ್ಚಾಗಿದೆ. ಇದು ಹೊರನಾಡು ಅನ್ನಪೂರ್ಣೇಶ್ವರಿಯ ಭಕ್ತರಿಗೂ (Annapoorneshwari Temple) ಭೀತಿ ಉಂಟುಮಾಡ್ತಿದೆ.
ಕಾಡಾನೆಗಳು ರಾತ್ರಿ ವೇಳೆ ಮನೆ ಬಾಗಿಲನ್ನೇ ಹುಡುಕು ಬರ್ತಿವೆ! ಹೀಗಾಗಿ ಗ್ರಾಮಸ್ಥರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರೋದಕ್ಕೂ ಭಯಪಡ್ತಿದ್ದಾರೆ.
ಗಣಪತಿಕಟ್ಟೆಯಲ್ಲೇ ಬೀಡುಬಿಟ್ಟ ಎರಡು ಕಾಡಾನೆಗಳು
ಚಿಕ್ಕಮಗಳೂರಿನ ಕಳಸ ತಾಲೂಕಿನ ಗಣಪತಿಕಟ್ಟೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿವೆ. ಇದೇ ಪ್ರದೇಶದಲ್ಲಿ ಅತ್ತಿಂದಿತ್ತ ಓಡಾಡುತ್ತಾ ಸ್ಥಳಿಯರಲ್ಲಿ ಆತಂಕ ಹುಟ್ಟಿಸಿವೆ. ಅರಣ್ಯ ಅಧಿಕಾರಿಗಳು ಆನೆಗಳನ್ನ ಓಡಿಸಲು ಹುಡುಕಾಡುತ್ತಾ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: Hassan Baby Elephant: ಅಮ್ಮನ ಮಡಿಲು ಸೇರಿದ ಪುಟ್ಟ ಕಾಡಾನೆ ಮರಿ, ಖೆಡ್ಡಾದಲ್ಲೊಂದು ದಿನ ಹೀಗಿತ್ತು ನೋಡಿ
ಇದನ್ನೂ ಓದಿ: Elephant Revenge: 6 ತಿಂಗಳ ಬಳಿಕ ಸೇಡು ತೀರಿಸಿಕೊಂಡ ಕಾಡಾನೆ! ಹಾಸನದ ಕುಟುಂಬ ಕಂಗಾಲು
ಸದ್ಯ ಸ್ಥಳಿಯರು ಮನೆ ಬಳಿ ಬಂದ ಆನೆಗಳನ್ನ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. 20 ಜನ ಅಧಿಕಾರಿಗಳ ತಂಡದ ಜೊತೆ ಸ್ಥಳಿಯರು ಆನೆ ಓಡಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಾಹಿತಿ, ವಿಡಿಯೋ: ವೀರೇಶ್, ಚಿಕ್ಕಮಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ