ಚಿಕ್ಕಮಗಳೂರು: ಕಿಡ್ನಾಪರ್ಗೆ ಯುಕೆಜಿಯ ಪುಟ್ಟ ಬಾಲಕನೊಬ್ಬ ಚಳ್ಳೆಹಣ್ಣು ತಿನ್ನಿಸಿ ಪಾರಾದ ಅಪರೂಪದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ (Chikkamagaluru Viral Video) ನಡೆದಿದೆ. ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕನನ್ನು ಕಿಡ್ನಾಪ್ ಮಾಡಲು ವ್ಯಕ್ತಿಯೋರ್ವ ಯತ್ನಿಸಿದ್ದಾನೆ. ಆದರೆ ಪವಾಡದಂತೆ ಚಿಕ್ಕ ಬಾಲಕ ಕಿಡ್ನಾಪರ್ನಿಂದ (Boy Escaped From Kidnaper) ಪಾರಾಗಿದ್ದಾನೆ!
ಮಾರ್ಚ್ 26 ರಂದು ಭಾನುವಾರ ಸಂಜೆ 6.38ರ ವೇಳೆ ನಡೆದ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.
ಸ
ಫುಟ್ಪಾತ್ನಲ್ಲಿ ಪುಟ್ಟ ಬಾಲಕ ಆಟವಾಡುತ್ತಿದ್ದ ಅನಾಮಿಕ ವ್ಯಕ್ತಿಯೊಬ್ಬ ಅಪಹರಿಸಲು ಯತ್ನಿಸಿದ್ದಾನೆ. ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ಬೇಗ ಸ್ಥಳದಿಂದ ಕಾಲು ಕೀಳಲು ಮುಂದಾಗಿದ್ದಾನೆ. ಆದರೆ ಅದೇ ವೇಳೆ ಎಚ್ಚೆತ್ತ ಬಾಲಕ ಅಪಹರಣಕಾರ ಹೆಗಲ ಮೇಲಿನಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾನೆ.
ಇದನ್ನೂ ಓದಿ: Chikkamagaluru: ನೀವು ಏನೇ ಹೇಳಿ, ನಾವು ಮತ ಹಾಕಲ್ಲ! ಚಿಕ್ಕಮಗಳೂರಿನಲ್ಲಿ ಬಂಡೆದ್ದ ಜನತೆ
ಬಾಲಕ ತಪ್ಪಿಸಿಕೊಂಡ ತಕ್ಷಣ ಕಿಡ್ನಾಪರ್ ತಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕಿಡ್ನಾಪರ್ ಕೈಯಿಂದ ತಪ್ಪಿಸಿಕೊಂಡು ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಯುಕೆಜಿ ಬಾಲಕನ ಕುರಿತು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
5 ರೂಪಾಯಿ ಉಳಿಸಲು ಹೋಗಿ ಜೀವವನ್ನೇ ಕಳೆದುಕೊಳ್ತಿದ್ದ ಯುವಕ!
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ (Railway Police Constable) ಓರ್ವರು ರಕ್ಷಿಸಿದ ಘಟನೆ ನಡೆದಿದೆ. ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ರಾಠೋಡ್ ಎಂಬುವವರೇ ರೈಲ್ವೆ (Indian Railway Traveler) ಪ್ರಯಾಣಿಕರ ಜೀವ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.
ಇದನ್ನೂ ಓದಿ: Karnataka Rains: ಮಳೆಗಾಗಿ ಕಳಸೇಶ್ವರನ ಮೊರೆ, ಪೂಜೆಗೂ ಮುನ್ನ ಸುರಿದ ವರ್ಷಧಾರೆ!
ಹೊಸಪೇಟೆ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ರೈಲ್ವೆ ಪ್ಲಾಟ್‌ಫಾರಂ ಮೇಲೆ ನಿಂತಿದ್ದ ಪೊಲೀಸ್ ಕಾನ್ಸ್ಟೇಬಲ್ ರೈಲಿನ ಅಡಿಗೆ ಬೀಳುತ್ತಿದ್ದ ಪ್ರಯಾಣಿಕ ಯುವಕನನ್ನು ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾರೆ.
ಗದಗ ಮೂಲದ ಯುವಕ ಅಪಾಯಕ್ಕೆ ಸಿಲುಕಿದ್ದೇಗೆ?
ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ. ಈ ವೇಳೆ ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಶೌಚಕ್ಕೆಂದು ಹೋದಾಗ 5 ರೂ. ಕೇಳಿದ್ದು, ಹಣ ಯಾಕೆ ಪಾವತಿಸಬೇಕೆಂದು ಅದೇ ಸಮಯಕ್ಕೆ ಫ್ಲಾಟ್ಫಾರಂಗೆ ಬಂದು ನಿಂತಿದ್ದ ಬೆಳಗಾವಿ- ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ