• Home
 • »
 • News
 • »
 • chikkamagaluru
 • »
 • Hoysala Temple: ಕರುನಾಡನ್ನು 40 ವರ್ಷ ಆಳಿದ ರಾಜವಂಶ ಹುಟ್ಟಿದ್ದು ಈ ಪುಟ್ಟ ಹಳ್ಳಿಯ ದೇಗುಲದಲ್ಲಿ!

Hoysala Temple: ಕರುನಾಡನ್ನು 40 ವರ್ಷ ಆಳಿದ ರಾಜವಂಶ ಹುಟ್ಟಿದ್ದು ಈ ಪುಟ್ಟ ಹಳ್ಳಿಯ ದೇಗುಲದಲ್ಲಿ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸ್ವತಃ ಉದ್ಭವವಾಗಿ ಈ ಶಕ್ತಿದೇವತೆಯನ್ನು ಸುತ್ತಲಿನ ಜನರೂ ಸೇರಿದಂತೆ ದೂರದೂರುಗಳಿಂದಲೂ ಹುಡುಕಿಕೊಂಡು ಬಂದು ಪೂಜೆ ಸಲ್ಲಿಸುವ ಭಕ್ತರಿದ್ದಾರೆ. ನೀವೂ ಈ ದೇಗುಲ ದರ್ಶನ ಮಾಡಿಬನ್ನಿ.

 • News18 Kannada
 • Last Updated :
 • Chikmagalur, India
 • Share this:

  ಚಿಕ್ಕಮಗಳೂರು: ಸುತ್ತಲೂ ದಟ್ಟ ಕಾಡು, ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರಿನ ಸಿರಿ. ನಡುವೆ ಒಂದು ಪುಟ್ಟ ಆಲಯ. ಆಗಾಗ ತಿಳಿದೇ ಅಲ್ಲಿಗೆ ಹುಡುಕಿಕೊಂಡು ಬರುವ ಭಕ್ತರು. ಸದ್ಯ ದೇವಾಲಯದ (Vasantha Parameshwari Devi Temple) ಜೀರ್ಣೋದ್ಧಾರ ನಡೆಯುತ್ತಿರೋದು ಕಾಣುತ್ತದೆಯಾದ್ರೂ ದೇವಿಯ ಶಕ್ತಿಯ ದರ್ಶನಕ್ಕಾಗಿ ಬರುವವರೇನೂ ತಪ್ಪಿಸುತ್ತಿಲ್ಲ ಅಂದ್ಹಾಗೆ ಇದು ಚಿಕ್ಕಮಗಳೂರು ಜಿಲ್ಲೆಯ (Chikkamagaluru Temples) ಪುಟ್ಟ ಹಳ್ಳಿಯಲ್ಲಿರುವ ವಸಂತಾ ಪರಮೇಶ್ವರಿ ದೇವಾಲಯ. ಈ ದೇವಸ್ಥಾನದ ಅಂಗಳದಲ್ಲೇ ಕನ್ನಡ ನಾಡನ್ನು 4 ಶತಮಾನಗಳ ಕಾಲ ಆಳಿದ ರಾಜವಂಶವೊಂದು ಹುಟ್ಟಿಕೊಂಡಿತ್ತು!

  ನಿಮಗೆ ಹೊಯ್ಸಳ ಅರಸರು ಗೊತ್ತಲ್ವಾ? 10ರಿಂದ 14ನೇ ಶತಮಾನದಲ್ಲಿ ಬಹುಪಾಲು ಇಂದಿನ ಕರ್ನಾಟಕವನ್ನು ವಿಜೃಂಭಣೆಯಿಂದ ಆಳಿದವರು ಹೊಯ್ಸಳ ವಂಶಸ್ಥರು. ಬೇಲೂರು-ಹಳೇಬೀಡು ಮುಂತಾದ ಶಿಲ್ಪಕಲೆಗಳಿಗೆ ಜಗತ್ಪ್ರಸಿದ್ಧಿ ಪಡೆದ ಅನೇಕ ದೇವಾಲಯಗಳು ಇಂದಿಗೂ ಹೊಯ್ಸಳರ ಕಾಲದ ವೈಭವಕ್ಕೆ ಸಾಕ್ಷಿಯಾಗಿದೆ.


  ಹೊಯ್ಸಳರ ಮೂಲಸ್ಥಾನ ಪುಟ್ಟ ಹಳ್ಳಿ!
  ಆದ್ರೆ ಈ ಹೊಯ್ಸಳರ ಮೂಲ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ದಟ್ಟ ಕಾಡಿನ ನಡುವೆ ಇರೋ ಅಂಗಡಿ ಎನ್ನುವ ಪುಟ್ಟ ಹಳ್ಳಿಯಲ್ಲಿದೆ ಅನ್ನೋದು ಅನೇಕರಿಗೆ ತಿಳಿದಿಲ್ಲ.


  ವಾಸಂತಿಕಾ ದೇವಿಯ ಮಂದಿರ
  ಚಿಕ್ಕಮಗಳೂರಿನಿಂದ 47 ಕಿಲೋಮೀಟರ್ ದೂರದಲ್ಲಿ ಮೂಡಿಗೆರೆ ಬಳಿ ಅಂಗಡಿ ಎನ್ನುವ ಪುಟ್ಟ ಗ್ರಾಮ ಇದೆ. ಇಲ್ಲಿ ವಾಸಂತಿಕಾ ದೇವಿ ಅಥವಾ ವಸಂತಾ ಪರಮೇಶ್ವರಿ ದೇವಸ್ಥಾನವಿದೆ. ಈ ದೇವಸ್ಥಾನ ಹೊಯ್ಸಳ ಅರಸರ ಮೂಲಸ್ಥಾನ. ಹೊಯ್ಸಳ ಎನ್ನುವ ಪದ ಹುಟ್ಟಿದ್ದು ಇದೇ ದೇವಾಲಯದ ಆವರಣದಲ್ಲಿ.


  vasanthika parameswari temple angadi
  ಈ ಶಕ್ತಿಕೇಂದ್ರಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಇತಿಹಾಸಕ್ಕೆ ಹೋಗಿಬರೋಣ
  10ನೇ ಶತಮಾನದ ಅಂತ್ಯಕಾಲ ಮತ್ತು 11ನೇ ಶತಮಾನದ ಆರಂಭ ಘಟ್ಟದಲ್ಲಿ ಈ ದೇವಾಲಯದ ಪ್ರಾಂಗಣದಲ್ಲಿ ಗುರುಕುಲ ನಡೆಯುತ್ತಿತ್ತಂತೆ. ಜೈನ ಮುನಿಗಳಾದ ಸುದತ್ತಾಚಾರ್ಯರು ತಮ್ಮ ಶಿಷ್ಯರಿಗೆ ಆಗ ದಟ್ಟ ಅಡವಿಯಲ್ಲಿದ್ದ ಈ ಪುಟ್ಟ ದೇಗುಲದ ಆವರಣದಲ್ಲಿ ಪಾಠ ಹೇಳುತ್ತಿದ್ದರು. ಅವರ ಒಬ್ಬ ಶಿಷ್ಯನ ಹೆಸರು ಸಳ. ಒಂದು ದಿನ ಗುರುಗಳು ಪಾಠ ಮಾಡ್ತಾ ಇದ್ದಾಗ ಕಾಡಿನೊಳಗಿನಿಂದ ಹುಲಿಯೊಂದು ಅಲ್ಲಿದ್ದವರ ಮೇಲೆ ಎರಗಲು ಸಜ್ಜಾಯ್ತು.


  ಇದನ್ನೂ ಓದಿ: Deviramma Betta: ಗಾಳಿಯ ರೂಪದಲ್ಲಿ ಗರ್ಭಗುಡಿ ಹೊಕ್ಕಿದ ದೇವೀರಮ್ಮ! ನೀನೇ ಕಾಪಾಡಮ್ಮಾ ಎಂಬ ಭಕ್ತರು


  ಕೂಡಲೇ ಗುರುಗಳು ಶಿಷ್ಯ ಸಳನಿಗೆ `ಪೊಯ್ ಸಳ’ ಎಂದು ಆದೇಶಿಸಿದ್ರು. ಇದು ಹಳಗನ್ನಡ ಪದ, ಇದರರ್ಥ ಹೊಯ್ ಅಥವಾ ಕೊಲ್ಲು ಎಂದು – ಇದು ಸಳನನ್ನು ಉದ್ದೇಶಿದ ಮಾತು. ಕೂಡಲೇ ತನ್ನ ಖಡ್ಗವನ್ನು ಹೊರತೆಗೆದ ಸಳ ಸ್ಥಳದಲ್ಲೇ ಆ ದೈತ್ಯ ಹುಲಿಯನ್ನು ಕೊಲ್ಲುತ್ತಾನೆ.


  ಪೊಯ್ ಸಳ ಹೊಯ್ಸಳ ಆದ ಕಥೆ!
  ಪೊಯ್ ಸಳ ಎನ್ನುವ ಪದವೇ ಮುಂದೆ ಬಳಕೆಯಲ್ಲಿ ಹೊಯ್ಸಳ ಆಗಿ ಬದಲಾಯ್ತು. ಹುಲಿಯನ್ನೇ ಕೊಂದ ವೀರನನ್ನು ಆಗ ರಾಜ್ಯ ಆಳುತ್ತಿದ್ದ ಕಲ್ಯಾಣ ಚಾಲುಕ್ಯ ಅರಸರಿಗೆ ಪರಿಚಯಿಸಲಾಯ್ತು. ಆಗ ಅವರು ಸಳನನ್ನು ಸಾಮಂತರಾಜನನ್ನಾಗಿ ಮಾಡಲಾಗುತ್ತೆ. ಈ ಪ್ರಾಂತ್ಯಕ್ಕೆ ಮೊದಲನೇ ಸಾಮಂತರಾಜನಾದ ಸಳ ನಂತರದ ಆತನ ವಂಶಜರು ತಮ್ಮದೇ ಸ್ವಂತ ಸಾಮ್ರಾಜ್ಯ ಸ್ಥಾಪಿಸಿಕೊಳ್ತಾರೆ. ರಾಜ್ಯ ದೊಡ್ಡದಾಂತೆ ದ್ವಾರಸಮುದ್ರ ಅಂದ್ರೆ ಈಗಿನ ಹಳೇಬೀಡಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಲಾಗುತ್ತೆ.


  ಸ್ವತಃ ಉದ್ಭವವಾಗಿ ಈ ಶಕ್ತಿದೇವತೆಯನ್ನು ಸುತ್ತಲಿನ ಜನರೂ ಸೇರಿದಂತೆ ದೂರದೂರುಗಳಿಂದಲೂ ಹುಡುಕಿಕೊಂಡು ಬಂದು ಪೂಜೆ ಸಲ್ಲಿಸುವ ಭಕ್ತರಿದ್ದಾರೆ.


  ಇದನ್ನೂ ಓದಿ: Horanadu Annapoorneshwari: ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡು ಅನ್ನಪೂರ್ಣೇಶ್ವರಿ ಮೊರೆ!


  ಇಷ್ಟೆಲ್ಲಾ ಇತಿಹಾಸ ಆರಂಭವಾಗಿದ್ದು ಅಂಗಡಿಯ ವಸಂತಾಪರಮೇಶ್ವರಿ ದೇವಸ್ಥಾನದ ಪ್ರಾಂಗಣದಲ್ಲಿ. ಸಾಮಾನ್ಯವಾಗಿ ದೇವರ ಮೂರ್ತಿ ಕಲ್ಲಿನದ್ದಾಗಿರುತ್ತೆ. ಆದ್ರೆ ಇಲ್ಲಿ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಾಗಾಗಿ 12 ವರ್ಷಗಳಿಗೊಮ್ಮೆ ಮೂಲ ವಿಗ್ರಹಕ್ಕೆ ಬಣ್ಣ ಹಾಕುವ ಕೆಲಸ ನಡೆಯುತ್ತದೆ.


  ನಡೆಯುತ್ತಿದೆ ಅಭಿವೃದ್ಧಿ ಕಾರ್ಯ
  ಈಗ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದ್ದು ಸುತ್ತಲೂ ಕಲ್ಲಿನ ಆವರಣ ಸೇರಿದಂತೆ ಒಟ್ಟಾರೆ ದೇವಸ್ಥಾನದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲೇ ಕಾಣುವ ಹೊಯ್-ಸಳನ ಬೃಹತ್ ಕಲ್ಲಿನ ಮೂರ್ತಿ ಈ ಪ್ರದೇಶದ ಇತಿಹಾಸವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.


  ವಿಡಿಯೋ ವರದಿ: ಸೌಮ್ಯ ಕಳಸ

  Published by:ಗುರುಗಣೇಶ ಡಬ್ಗುಳಿ
  First published: