• Home
  • »
  • News
  • »
  • chikkamagaluru
  • »
  • Horanadu Annapoorneshwari: ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡು ಅನ್ನಪೂರ್ಣೇಶ್ವರಿ ಮೊರೆ!

Horanadu Annapoorneshwari: ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡು ಅನ್ನಪೂರ್ಣೇಶ್ವರಿ ಮೊರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಲ್ಲದೇ ಅಡಿಕೆಯ ಎಲೆಚುಕ್ಕಿ ರೋಗಕ್ಕೆ ಹೆದರಿ ಯಾವುದೇ ಕೃಷಿಕರೂ ಸಹ ದುಡುಕಿ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು ಎಂದು ಜಿ.ಭೀಮೇಶ್ವರ ಜೋಷಿ ಮನವಿ ಮಾಡಿಕೊಂಡಿದ್ದಾರೆ.

  • News18 Kannada
  • Last Updated :
  • Shimoga, India
  • Share this:

    ಚಿಕ್ಕಮಗಳೂರು: ಅಡಿಕೆ ಬೆಳೆಯನ್ನು ಬೆಂಬಿಡದೇ ಕಾಡುತ್ತಿರುವ ಎಲೆಚುಕ್ಕಿ ರೋಗ ನಿವಾರಣೆಗೆ ಕೃಷಿಕರು ದೇವರ ಮೊರೆಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ (Chikkamagaluru News) ಕಳಸ ತಾಲ್ಲೂಕಿನಲ್ಲಿ ಎಗ್ಗಿಲ್ಲದೇ ಹರಡುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಪ್ರಸಿದ್ಧಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪೂಜೆ, ಪಾರಾಯಣ, ಹೋಮ ನಡೆಸಿ ಹೊರನಾಡು ಅನ್ನಪೂರ್ಣೇಶ್ವರಿಯಲ್ಲಿ (Horanadu Annapoorneshwari) ಅಡಿಕೆ ಎಲೆಚುಕ್ಕಿ ರೋಗ ನಿವಾರಣೆ ಮಾಡುವಂತೆ ಕೃಷಿಕರ ಪರವಾಗಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಮಾಹಿತಿ ನೀಡಿದ್ದಾರೆ ಈ ಮೂಲಕವಾದರೂ ಅಡಿಕೆ ಕೃಷಿಕರು (Areca Nut Farmers) ಎಲೆಚುಕ್ಕಿ ರೋಗದಿಂದ ಪಾರಾಗಲು ದಾರಿ ಸಿಗಬಹುದು ಎಂಬ ನಿರೀಕ್ಷೆ ಅಡಿಕೆ ಕೃಷಿಕರಲ್ಲಿ ಹುಟ್ಟಿಕೊಂಡಿದೆ.


    ಮಲೆನಾಡಿನ ಮುಖ್ಯ ಬೆಳೆಯಾದ ಅಡಿಕೆಯನ್ನು ಕಾಡುತ್ತಿರುವ ಎಲೆಚುಕ್ಕಿ ರೋಗವನ್ನು ಹೋಗಲಾಡಿಲು ಈ ಹೋಮ, ಹವನವನ್ನು ನಡೆಸುತ್ತಿರುವುದಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.


    ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಮಾಡಿ ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಲು ಸಲಹೆ
    ಹೀಗಾಗಿ ಎಲೆಚುಕ್ಕಿ ರೋಗದಿಂದ ಬಳಲುತ್ತಿರುವ ಅಡಿಕೆ ತೋಟಗಳ ಕೃಷಿಕರು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಮಾಡಬೇಕು, ದೇವಸ್ಥಾನದಲ್ಲಿ ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ಅದನ್ನು ತಮ್ಮ ಜಮೀನಿಗೆ ಒಯ್ದು ಅಲ್ಲಿ ಸಿಂಪಡಿಸಬೇಕು ಎಂದು ಜಿ.ಭೀಮೇಶ್ವರ ಜೋಷಿ ಕರೆ ನೀಡಿದ್ದಾರೆ.


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬೇಡಿ
    ಅಲ್ಲದೇ ಅಡಿಕೆಯ ಎಲೆಚುಕ್ಕಿ ರೋಗಕ್ಕೆ ಹೆದರಿ ಯಾವುದೇ ಕೃಷಿಕರೂ ಸಹ ದುಡುಕಿ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು ಎಂದು ಸಹ ಅವರು ಮನವಿ ಮಾಡಿಕೊಂಡಿದ್ದಾರೆ.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಸರ್ಕಾರಕ್ಕೆ ಮನವಿ ಸಲ್ಲಿಕೆ
    ಕೃಷಿಕರಿಗೆ ಬಂದಿರುವ ಗಂಡಾಂತರ ಪರಿಹಾರ ಆಗುವ ಎಲ್ಲ ಭರವಸೆ ಇದೆ. ಈ ರೋಗದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಬೇಕು. ನಿವಾರಣೋಪಾಯಗಳನ್ನು ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ, ಕೃಷಿ ಸಚಿವರು ಮತ್ತು ಶಾಸಕರಲ್ಲಿ ಮನವಿ ಮಾಡಲಾಗಿದೆ. ಎಲ್ಲ ಕೃಷಿಕರೂ ಧೈರ್ಯದಿಂದ, ಸಾಮೂಹಿಕವಾಗಿ ಈ ರೋಗಕ್ಕೆ ಪರಿಹಾರ ಕಂಡುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: