Datta Peetha: ದತ್ತಪೀಠದ ಹೋಮ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ! ಗೋರಿಗೆ ಅರ್ಪಿಸಿದರಾ ಕಿಡಿಗೇಡಿಗಳು?

ದತ್ತಪೀಠದ ಹೋಮ-ಹವನ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಹಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದ್ದು, ಹೋಮ-ಹವನ ನಡೆಯುವ ತಾತ್ಕಾಲಿಕ ಶೆಡ್‌ನಲ್ಲಿ ಮಾಂಸಹಾರ ಮಾಡಿ, ಮಾಂಸದೂಟ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.

ವಿವಾದಿತ ದತ್ತಪೀಠ

ವಿವಾದಿತ ದತ್ತಪೀಠ

  • Share this:
ಚಿಕ್ಕಮಗಳೂರು: ಬಾಬಾ ಬುಡನ್‌ಗಿರಿಯಲ್ಲಿರುವ (Baba Budangiri) ವಿವಾದಿತ ದತ್ತಪೀಠ (Datta Peetha) ಪ್ರದೇಶ ಮತ್ತೆ ಸುದ್ದಿಯಾಗಿದೆ. ದತ್ತಪೀಠದ ಹೋಮ-ಹವನ (Homa) ನಡೆಯುವ ಪವಿತ್ರ ಜಾಗದಲ್ಲಿ ಮಾಂಸಹಾರ (Non Veg) ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಿವಾದಿತ ಜಾಗದಲ್ಲಿ ಕೋರ್ಟ್ (Court) ಆದೇಶ (Order) ಉಲ್ಲಂಘನೆ ಮಾಡಲಾಗಿದ್ದು, ಹೋಮ-ಹವನ ನಡೆಯುವ ತಾತ್ಕಾಲಿಕ ಶೆಡ್ (Shed) ನಲ್ಲಿ ಮಾಂಸಹಾರ ಮಾಡಿ, ಮಾಂಸದೂಟ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ವಿವಾದಿತ ಗೋರಿ (Tomb) ಬಳಿ ಕಿಡಿಗೇಡಿಗಳು ಮಾಂಸದೂಟ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಹಿಂದೂಪರ (Hindu) ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಘಟನೆಗೆ ಮುಜರಾಯಿ ಇಲಾಖೆ ಅಧಿಕಾರಿಗಳೇ್ ಕಾರಣ ಅಂತ ಆರೋಪಿಸಿವೆ.

ದತ್ತಪೀಠದ ಪವಿತ್ರ ಜಾಗದಲ್ಲಿ ಮಾಂಸಾಹಾರ

ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ಹೋಮ-ಹವನ ನಡೆಯುವ ತಾತ್ಕಾಲಿಕ ಶೆಡ್ ನಲ್ಲಿ ಮಾಂಸಹಾರ ಸೇವನೆಯು ನಡೆಯುತ್ತಿದೆ ಎನ್ನಲಾಗಿದೆ. ಪವಿತ್ರ ದತ್ತಪೀಠದಲ್ಲಿ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಹಾರ ನಡೆದಿರುವ ಬಗ್ಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ಹಿಂದೂಪರ ಸಂಘಟನೆಗಳಿಂದ ಆಕ್ರೋಶ

ಹೋಮ ಹವನ ನಡೆಯುವ ಸ್ಥಳದಲ್ಲಿ ಮಾಂಸದೂಟ ನಡೆಯುತ್ತಿದ್ದು, ದತ್ತಪೀಠದಲ್ಲಿ ಗೋರಿ ಪೂಜೆ ಮಾಡಿರುವ ಆರೋಪ ಇದೆ. ಇದಕ್ಕೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಹೋಮ-ಹವನ ನಡೆಯುವ ಸ್ಥಳದಲ್ಲಿ ಬಿರಿಯಾನಿ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Gyanavapi: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಯ್ತಂತೆ ಶಿವಲಿಂಗ! ನಾಳೆಯೇ ಕೋರ್ಟ್‌ಗೆ ಅಂತಿಮ ವರದಿ

“ಮಾಂಸ ಬೇಯಿಸುವ ಮೂಲಕ ದತ್ತಪೀಠ ಅಪವಿತ್ರ”

ಮಾಂಸ ಬೇಯಿಸುವ ಮೂಲಕ ದತ್ತಪೀಠ ಅಪವಿತ್ರ  ಮಾಡಲಾಗಿದೆ ಅಂತ ಭಜರಂಗದಳದ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ ಹೇಳಿದ್ದಾರೆ. ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ, ಬೇರೆ ಸಮಯದಲ್ಲಿ ಮಾಂಸದ ಹೊಗೆ ಆಗಿದೆ. ಮುಂದಿನ ದತ್ತ ಜಯಂತಿಯ ಹೋಮವನ್ನು ತಾತ್ಕಾಲಿಕ ಶೆಡ್ ನಲ್ಲಿ ಮಾಡುವುದಿಲ್ಲ, ಬದಲಾಗಿ ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ಮಾಡುತ್ತೇವೆ ಎಂದಿದ್ದಾರೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಇನ್ನು ಈ ಘಟೆಯನ್ನು ಖಂಡಿಸಿರುವ ಬಜರಂಗದಳ, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ದತ್ತಪೀಠದ ಅಪವಿತ್ರಗೊಳಿಸಿರುವವರ  ವಿರುದ್ದ ಪ್ರಕರಣಕ್ಕೆ ಒತ್ತಾಯಿಸಿದ್ದು, ಯಾವುದೇ ವಿರೋಧವನ್ನು ಎದುರಿಸಲು ಬಜರಂಗದಳ ಸನ್ನದ್ಧವಾಗಿದೆ ಎಂದಿದೆ. ಕೋರ್ಟ್‌ ಆದೇಶ ಉಲ್ಲಂಘನೆ ಆಗಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಲಾಗಿದೆ.

“ಇದು ಅಕ್ಷಮ್ಯ, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು”

ಇನ್ನು ಘಟನೆ ಕುರಿತಂತೆ ಕಲಬುರಗಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರು ದತ್ತ ಪೀಠದ ಘೋರಿಗಳಿಗೆ ಮಾಂಸ ನೈವೇದ್ಯ ಮಾಡಿದ್ದು ಅಕ್ಷಮ್ಯ ಅಪರಾಧ. ಇದರ ಹಿಂದೆ ಯಾರಿದ್ದಾರೋ ಕ್ರಮ ಆಗಬೇಕು ಎಂದಿದ್ದಾರೆ.

ಇದನ್ನೂ ಓದಿ: Srirangapatna Jamia Mosque: ವಿವಾದದ ಕೇಂದ್ರ ಬಿಂದುವಾಗುತ್ತಾ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ

 “ನಿನ್ನೆ ರಾತ್ರಿಯೇ ನನ್ನ ಗಮನಕ್ಕೆ ಬಂದಿದೆ”

ನಿನ್ನೆ ರಾತ್ರಿಯೇ ಈ ವಿಚಾರ ನಿನ್ನ ಗಮನಕ್ಕೆ ಬಂದಿದೆ, ಈ ಬಗ್ಗೆ ಸ್ಪಷ್ಟನೆಗಾಗಿ ಜಿಲ್ಲಾಧಿಕಾರಿಗೆ ವಾಟ್ಸಪ ಸಂದೇಶ ಕಳುಹಿಸಿದ್ದೆ. 300 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷಿದ್ಧವಾಗಿದೆ. ಆದರೂ ಹೇಗೆ ಅವಕಾಶ ಕೊಟ್ಟರೋ ಗೊತ್ತಿಲ್ಲ ಎಂದಿದ್ದಾರೆ. ಪ್ರಾಣಿ ಬಲಿ ಮಾಡಿದವರ ವಿರುದ್ದ ಮತ್ತು ನಿರ್ಲಕ್ಷ ಮಾಡಿದ ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ ಅವರ ವಿರುದ್ಧವೂ ಸೂಕ್ತ ಕ್ರಮ ಆಗಬೇಕು, ಇದು ಸ್ಪಷ್ಟ ಉಲ್ಲಂಘನೆಯಾಗಿದೆ, ಪಿ.ಎಫ್.ಐ ಸೇರಿ ಇದರ ಹಿಂದೆ ಯಾರೇ  ಇರಬಹುದು ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದಿದ್ದಾರೆ.
Published by:Annappa Achari
First published: