• Home
  • »
  • News
  • »
  • chikkamagaluru
  • »
  • Chikkamagaluru: ಇದು ಪಾರ್ಕ್​ ಅಲ್ಲ, ಮಲ್ಲಂದೂರು ಪೊಲೀಸ್ ಸ್ಟೇಷನ್!

Chikkamagaluru: ಇದು ಪಾರ್ಕ್​ ಅಲ್ಲ, ಮಲ್ಲಂದೂರು ಪೊಲೀಸ್ ಸ್ಟೇಷನ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಠಾಣೆಯ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ನಾ ಎಂಬ ಅನುಮಾನ ಹುಟ್ಟುತ್ತೆ. ಇವರ ಕೆಲಸಕ್ಕೆ ಸ್ಥಳಿಯರು ಕೈಜೋಡಿಸಿ ಸಾಥ್ ನೀಡಿದ್ದಾರೆ.

  • News18 Kannada
  • 3-MIN READ
  • Last Updated :
  • Chikmagalur, India
  • Share this:

    ಚಿಕ್ಕಮಗಳೂರು: ಚಂದಚಂದದ ಚಿತ್ರಗಳು, ಒಮ್ಮೆ ಒಳಹೊಕ್ರೆ ಅಲ್ಲೇ ಇದ್ದುಬಿಡೋಣ ಅನಿಸುವಂಥಾ ವಾತಾವರಣ. ಅರೇ! ಪೊಲೀಸ್ ಸ್ಟೇಷನ್​ಗೆ (Police Station) ಅಂತ ನಾವ್ ಬಂದಿದ್ದಾದ್ರೂ ಎಲ್ಲಿ ಅನ್ನೋ ಕುತೂಹಲ. ನೀವ್ ಬಂದಿದ್ದು ಪೊಲೀಸ್ ಸ್ಟೇಷನ್​ಗೇನೇ ಕಣ್ರೀ!


    ಚಿಕ್ಕಮಗಳೂರು ತಾಲೂಕಿನ (Chikkamagaluru) ಮಲ್ಲಂದೂರು ಪೊಲೀಸ್ ಠಾಣೆ (Mallandur Police Station) ಬಣ್ಣ-ಬಣ್ಣದ ಚಿತ್ರ, ಗೋಡೆಬರಹಗಳಿಂದ ಜಗಮಗಿಸುತ್ತಿದೆ. ಸಬ್ ಇನ್ಸ್ ಪೆಕ್ಟರ್ ರವೀಶ್ ಗ್ರಾಮ ಪಂಚಾಯತ್ ಹಾಗೂ ಸ್ಥಳಿಯ ದಾನಿಗಳ ಸಹಕಾರದಿಂದ ಇಡೀ ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಈ ಠಾಣೆಯ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ನಾ ಎಂಬ ಅನುಮಾನ ಹುಟ್ಟುತ್ತೆ. ಇವರ ಕೆಲಸಕ್ಕೆ ಸ್ಥಳಿಯರು ಕೈಜೋಡಿಸಿ ಸಾಥ್ ನೀಡಿದ್ದಾರೆ.


    ಅಪರಾಧಿ ಮನಸ್ಸುಗಳಲ್ಲಿ ಬದಲಾವಣೆ ತರೋ ಪ್ರಯತ್ನ
    ಪೊಲೀಸ್ ಠಾಣೆಯ ಕಾಂಪೌಂಡ್ ಹೊರಭಾಗದಲ್ಲಿ ಪೋಕ್ಸೋ, ಟ್ರಾಫಿಕ್ ರೂಲ್ಸ್, ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಜೂಜಾಟ, ಕಳ್ಳತನ, ಮಕ್ಕಳನ್ನ ಕೆಲಸಕ್ಕೆ ಬಳಸುವುದು, ಬಾಲಾಪಾರಾದ ಸೇರಿದಂತೆ ಬಹುತೇಕ ಚಿತ್ರಗಳ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಕಾಂಪೌಂಡ್ ಒಳಭಾಗದಲ್ಲಿ ಕಾಡುಪ್ರಾಣಿಗಳ ಬೇಟೆ, ಮರ ಕಡಿಯುವುದು, ಕಾಡುಪ್ರಾಣಿಗಳ ರಕ್ಷಣೆ ಮಾಡುವಂತಹ ಚಿತ್ರಗಳನ್ನ ಬಿಡಿಸಿ ಅಪರಾಧಿ ಮನಸ್ಸುಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚಿತ್ರಗಳ ಮೂಲಕ ತಪ್ಪು ಮಾಡಿದವರಿಗೆ ಮನವರಿಕೆಯಾಗುವಂತೆ ಮಾಡಲಾಗಿದೆ.




    ಇದನ್ನೂ ಓದಿ: Uttara Kannada: ಹೆರಿಗೆಯ ದಿನ ಬಂದ್ರೂ ಈ ಎಮ್ಮೆಗೆ ಕೆಚ್ಚಲೇ ಮೂಡಿಲ್ಲ!


    ಯಾರ ಬಳಿಯೂ ಚಿಕ್ಕಾಸನ್ನೂ ಪಡೆದಿಲ್ಲ!
    ಜೊತೆಗೆ ಠಾಣೆಯ ಆವರಣದಲ್ಲಿ ಪಾರ್ಕ್ ಕೂಡ ಇದೆ. ಯಾರ ಬಳಿಯೂ ಹಣ ಪಡೆಯದೇ ಇಷ್ಟೆಲ್ಲ ಬದಲಾವಣೆ ಮಾಡಲಾಗಿದೆ. ಎಸ್.ಐ. ರವೀಶ್ ಅವರ ಕೆಲಸವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಕೂಡ ಮೆಚ್ಚಿದ್ದಾರೆ.


    ಇದನ್ನೂ ಓದಿ: Wild Elephants: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಭಕ್ತರಿಗೆ ಕಾಡಾನೆ ಕಾಟ!


    ಒಟ್ಟಾರೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ ಪೊಲೀಸ್ ಸ್ಟೇಷನ್ ಅಂದ್ರೆ ಮೂಡ್ತಿದ್ದ ಭಯದ ಫೀಲನ್ನ ತೊಡೆದುಹಾಕಿ ಒಂದೊಳ್ಳೆ ಪಾಸಿಟಿವ್ ಅನುಭವ ಮೂಡಿಸ್ತಿದೆ


    ಮಾಹಿತಿ, ವಿಡಿಯೋ: ವೀರೇಶ್, ನ್ಯೂಸ್ 18 ಕನ್ನಡ ಚಿಕ್ಕಮಗಳೂರು

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು