Kottigehara Neer Dosa: ಆಹಾ! ತಿಂದರೆ ತಿನ್ನುತ್ತಲೇ ಇರಬೇಕು ಅನಿಸುತ್ತೆ! ಕೊಟ್ಟಿಗೆಹಾರದ ನೀರುದೋಸೆ ಏಕೆ ಅಷ್ಟೊಂದು ರುಚಿ?

ತಿಂದರೆ ಇಂಥಾ ತಿನಿಸು ತಿನ್ನಬೇಕು ಅಂತ ಅನಿಸುವಂತೆ ಮಾಡೋಕೆ ಕೆಲವೇ ಕೆಲವು ತಿಂಡಿಗಳ ಬಳಿ ಸಾಧ್ಯ. ಅವುಗಳಲ್ಲಿ ನಂಬರ್ 1 ಜಾಗದಲ್ಲಿ ನಿಲ್ಲೋದು ನೀರುದೋಸೆ. ಅದರಲ್ಲೂ ಕೊಟ್ಟಿಗೆಹಾರ ಎಂಬ ಆಕಾಶಕ್ಕೆ ತಟ್ಟುವಷ್ಟು ಎತ್ತರಕ್ಕೆ ಇರೋ ಚಿಕ್ಕಮಗಳೂರಿನ ಊರಿನ ನೀರುದೋಸೆಯ ಸವಿಯನ್ನು ನೀವು ಸವಿದುಬನ್ನಿ!

ನೀರುದೋಸೆ

ನೀರುದೋಸೆ

  • Share this:
    ಚಿಕ್ಕಮಗಳೂರು:  ನೀರುದೋಸೆ! ಈ ಹೆಸರು ಕೇಳಿದರೇ ಸಾಕು, ಬಾಯಲ್ಲಿ ನೀರೂರುತ್ತೆ. ಈಗಲೆ ಒಂದು ನೀರುದೋಸೆ ಸವಿದುಬಿಡೋಣ ಎಂದು ಬಯಕೆ ಮೂಡುತ್ತೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ (Kottigehara) ಎಂಬ ಊರಿನ ನೀರುದೋಸೆಯಂತೂ ಜಗದ್ವಿಖ್ಯಾತವಾಗಿದೆ.  ಕೊಟ್ಟಿಗೆಹಾರದಲ್ಲಿ ಸಿಗುವ ಗರಿಗರಿಯ ನೀರುದೋಸೆ ಎಂತಹವರ ಬಾಯಲೂ ಕೂಡ ನೀರು ತರಿಸುತ್ತದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಪ್ರವಾಸಕ್ಕೆ ತೆರಳುವ ಪ್ರವಾಸಿಗರು ಕೊಟ್ಟಿಗೆಹಾರ ಊರಿಗೆ ತೆರಳಿ ನೀರುದೋಸೆ ರುಚಿ ನೋಡದೇ ಇರೋದೇ ಇಲ್ಲ. ಚಿಕ್ಕಮಗಳೂರಿನ ಇತರ ತಾಣಗಳಿಗೆ ಪ್ರವಾಸ ಮಾಡದೇ ಇದ್ರೂ ಸರಿ,  ನೀರುದೋಸೆ (Neer Dosa) ತಿನ್ನದೇ  ಮರಳುವುದಿಲ್ಲ . ಅಷ್ಟು ವರ್ಡ್ ಫೇಮಸ್ ಕೊಟ್ಟಿಗೆಹಾರದ ನೀರುದೋಸೆ! ಹಾಗಾದ್ರೆ, ಈ ನೀರುದೋಸೆ ತಯಾರಾಗೋದು ಹೇಗೆ? ಈ ಆಸಕ್ತಿಕರ ಪಾಕ ವಿಧಾನ ಇಲ್ಲಿದೆ ನೋಡಿ!

    ನೀರುದೋಸೆ ತಯಾರಾಗುವ ವಿಧಾನ
    ನೀರುದೋಸೆ ಮಾಡಲು ಅಕ್ಕಿಯನ್ನು ಮೂರು ಗಂಟೆ ನೆನೆ ಹಾಕಿ ನಂತರ ಅದನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಕಡೆಯುವ ಕಲ್ಲು ಅಥವಾ ಗ್ರೈಂಡರ್​ನಲ್ಲಿ ನುಣುಪಾಗಿ ರುಬ್ಬಲಾಗುತ್ತದೆ. ನಂತರ ಅದಕ್ಕೆ ತೆಂಗಿನಕಾಯಿಯ ಹಾಲನ್ನು ಸೇರಿಸಿದರೆ ನೀರುದೋಸೆಯ ಹಿಟ್ಟು ರೆಡಿ.

    ದೋಸೆಬಂಡಿಗೆ ಹುಯ್ಯುವುದೊಂದೇ ಮುಂದಿನ ಕೆಲಸ
    ಕಾದ ಕಾವಲಿಯಿಂದ ಬೆಂದು ಬರುವ ಬಿಸಿಬಿಸಿ ಹಬೆಯಾಡುವ ನೀರುದೋಸೆಗೆ ವಿಶೇಷ ರೀತಿಯಲ್ಲಿ ಮಾಡಿದ ಚಟ್ನಿ, ಸಾಂಬಾರ್ ಸಖತ್ ಕಾಂಬಿನೇಷನ್. ನಾನ್ ವೆಜ್ ಪ್ರಿಯರಿಗೆ ಮೊಟ್ಟೆ ಗಸಿ, ಚಿಕ್ಕನ್ ಸಾಂಬಾರ್ ಅಥವಾ ಮೀನು ಸಾರಿನ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ ಅಂತಾರೆ ನೀರುದೋಸೆ ತಿಂದ ಪ್ರವಾಸಿಗರು.

    ಪ್ರವಾಸಿಗರ ಮೆಚ್ಚಿನ ತಿನಿಸು ನೀರುದೋಸೆ!
    ಹೌದು, ಮಲೆನಾಡು ಪ್ರದೇಶವಾದ ಚಿಕ್ಕಮಗಳೂರಿಗೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಬಂದಂತಹ ಪ್ರವಾಸಿಗರು ಕೊಟ್ಟಿಗೆಹಾರಕ್ಕೂ ಭೇಟಿ ನೀಡಿ ಇಲ್ಲಿ ಸಿಗುವ ನೀರುದೋಸೆಯನ್ನು ಸವಿದು ಹೋಗುತ್ತಾರೆ. ಧರ್ಮಸ್ಥಳ, ಶೃಂಗೇರಿ, ಸುಬ್ರಮಣ್ಯ ಹೀಗೆ ಹಲವೆಡೆಯಿಂದ ಬರುವ ಪ್ರವಾಸಿಗರಿಗೆ ಈ ಪ್ರದೇಶದಲ್ಲಿ ಮೊದಲು ಸಿಗುವ ಊರು ಕೊಟ್ಟಿಗೆಹಾರ. ಆದ್ದರಿಂದ ಕೊಟ್ಟಿಗೆಹಾರವೇ ಇಲ್ಲಿಯ ಕೇಂದ್ರಬಿಂದು ಆಗಿದ್ದು, ಇಲ್ಲಿಯೇ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ನೀರುದೋಸೆ ತಿಂದೆ ಮುಂದೆ ಸಾಗುತ್ತಾರೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಹೋಟೆಲ್ ಮಾಲೀಕರು.

    ಇದನ್ನೂ ಓದಿ: Skin Problem Solution: ಚರ್ಮರೋಗಗಳಿಗೆ ರಾಮಬಾಣ ಬಾಗಲಕೋಟೆಯ ಈ ಔಷಧ! ಯಾವುದಕ್ಕೆಲ್ಲ ಚಿಕಿತ್ಸೆ ಸಿಗುತ್ತೆ?

    ಗರಿ ಗರಿ ನೀರುದೋಸೆಯ ಒಂದು ಪ್ಲೇಟ್​ಗೆ ಎಷ್ಟು ರೂಪಾಯಿ?
    ಇನ್ನು ಇಲ್ಲಿ ಸಿಗುವ ನೀರುದೋಸೆ ಜೊತೆಗೆ ಚಟ್ನಿ, ಸಾಂಬಾರ್ ಚೆನ್ನಾಗಿ ಇರುತ್ತೆ ಅಂತಾರೆ ಪ್ರವಾಸಿಗರು. ಗರಿ ಗರಿ ಮುರಿಯುವ ತೆಳ್ಳಗಿನ ಈ ನೀರುದೋಸೆ ದೋಸೆ ಪ್ರಿಯರಿಗೆ ಹೇಳಿ ಮಾಡಿಸಿದಂತಿರುತ್ತದೆ. ಪ್ರತಿ ಪ್ಲೇಟ್ ದೋಸೆಗೆ 40 ರೂಪಾಯಿ ದರವನ್ನು ಫಿಕ್ಸ್ ಮಾಡಲಾಗಿದೆ.

    ಮೊದಲು ಇಷ್ಟೆಲ್ಲ ಫೇಮಸ್ ಇರ್ಲಿಲ್ಲ!
    ಈಮುನ್ನ ನೀರುದೋಸೆಯ ಜೊತೆಗೆ ನಾನ್ ವೆಜ್ ಕೂಡ ಸಿಗುತ್ತಿದ್ದು, ಅದರ ಬೆಲೆ ಬೇರೆಯಾಗಿರುತ್ತೆ. ಪ್ರಾರಂಭದಲ್ಲಿ ಕೇವಲ ನೀರುದೋಸೆಗೆ ಅಷ್ಟೇನೂ ಬೇಡಿಕೆ ಇರಲಿಲ್ಲ. ಆದರೆ ದಿನ ಕಳೆದಂತೆ ಕೊಟ್ಟಿಗೆಹಾರದ ನೀರುದೋಸೆಯ ಘಮಘಮ ಪರಿಮಳ ಇಡೀ ಜಿಲ್ಲೆಗೆ ಪಸರಿಸಿ ಈಗ ರಾಜ್ಯದ ತುಂಬ ಕೊಟ್ಟಿಗೆಹಾರದ ನೀರುದೋಸೆಭರ್ಜರಿ ಪ್ರಸಿದ್ಧಿ ಪಡೆದು ಪ್ರವಾಸಿಗರ ಮೆಚ್ಚಿನ ತಿಂಡಿಯಾಗಿದೆ.

    ಇದನ್ನೂ ಓದಿ: Organic Jaggery: ಬರದ ನಾಡಿನಲ್ಲಿ 18 ಬಗೆಯ ಬೆಲ್ಲ, ಇಂಥಾ ವೆರೈಟಿ ನೀವೆಲ್ಲೂ ನೋಡಿರಲ್ಲ ಬಿಡಿ!

    ಕೊಟ್ಟಿಗೆಹಾರಕ್ಕೆ ಬಂದರೆ ನೀರುದೋಸೆ ತಿನ್ನಲು ಮರೆಯದಿರಿ
    ಒಟ್ಟಿನಲ್ಲಿ ಹಲವು ವರ್ಷದ ಹಿಂದೆ ಕೊಟ್ಟಿಗೆಹಾರದ ಕೇವಲ ಒಂದು ಹೊಟೇಲ್‍ನಲ್ಲಿ ಮಾತ್ರ ನೀರುದೋಸೆ ಮಾಡಲಾಗುತ್ತಿತ್ತು. ಈಗ ಕೊಟ್ಟಿಗೆಹಾರದಲ್ಲಿ ನಲ್ವತ್ತಕ್ಕೂ ಹೆಚ್ಚು ಹೊಟೇಲ್‍ನಲ್ಲಿ ನೀರುದೋಸೆ ಸಿಗುತ್ತದೆ. ನೀವು ಕೊಟ್ಟಿಗೆಹಾರಕ್ಕೆ ಬಂದರೆ ನೀರುದೋಸೆ ತಿನ್ನುವುದನ್ನು ಮಿಸ್ ಮಾಡಲೇಬೇಡಿ. ಅದು ಈಗ ಬರೋ ಮಳೆಗಾಲದಲ್ಲಂತೂ ಕೊಟ್ಟಿಗೆಹಾರದ ನಿರುದೋಸೆಗೆ ಭರ್ಜರಿ ಬೇಡಿಕೆ ಬಂದಿರುತ್ತೆ. ಜೊತೆಗೆ ಮಳೆಯ ವಾಯಾವರಣಕ್ಕೆ ರುಚಿಯೂ ಕೊಂಚ ಹೆಚ್ಚಾಗಿರುತ್ತೆ!
    Published by:Suraj Risaldar
    First published: