Janata Jaladhare: ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟ್ಟಿದ್ದಾರೆ; ಎಚ್​ ಡಿ ಕುಮಾರಸ್ವಾಮಿ​ ಕಿಡಿ

ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಹತ್ತಿಕ್ಕಲು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಸ್ವಾಮೀಜಿಗಳನ್ನು ಕರೆದು, ಅವರ ಸಮ್ಮುಖದಲ್ಲಿ ಭಾವೈಕ್ಯತೆ ಸಂದೇಶ ಕೊಡುವುದು ಸರ್ಕಾರದ ಕರ್ತವ್ಯ.

ಚಿಕ್ಕಮಗಳೂರಿನಲ್ಲಿ ಜನತಾ ಜನತಾ ಜಲಧಾರೆಗೆ ಎಚ್​ಡಿಕೆ ಚಾಲನೆ

ಚಿಕ್ಕಮಗಳೂರಿನಲ್ಲಿ ಜನತಾ ಜನತಾ ಜಲಧಾರೆಗೆ ಎಚ್​ಡಿಕೆ ಚಾಲನೆ

 • Share this:
  ಚಿಕ್ಕಮಗಳೂರು (ಏ. 18): ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಯತ್ನಿಸಿದ್ದಾರೆ ಎಂದು ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ (HD Kumarswamy)  ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಕಳಸ ಸಮೀಪದ ಭದ್ರ ನದಿಯ ತಟದಲ್ಲಿ ವಿಶೇಷ ಪೂಜೆ ಮೂಲಕ ಜನತಾ ಜಲಧಾರೆಗೆ (Janata Jaladhare) ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ಬೆಳವಣಿಗೆ ಕುರಿತು ಮಾತನಾಡಿದ ಅವರು, ಕತ್ತಿ ಕಟ್ಕೊಂಡು ರಾಜಕಾರಣ ಮಾಡುವುದಲ್ಲ. ರಾಮ ಏನು ಸಂದೇಶ ನೀಡಿದ್ದೇನು ಎಂಬುದನ್ನು ಅರಿಯಿರಿ. ಮಾನವೀಯತೆ ಸಂದೇಶ ಸಾರುವ ಮೂಲಕ ರಾಮನ (Rama) ಆದರ್ಶ ಪಾಲಿಸಿ. ನಾವು ಯಾವುದೇ ಒಂದು ವರ್ಗದ ಪರವಾಗಿ ನಿಂತಿಲ್ಲ. ಕುವೆಂಪು ಅವರ ಸಂದೇಶ ಚಿರಸ್ಥಾಯಿಯಾಗಿರಲು ಜನತಾದಳ ಇರುವುದು. ಸಮಾಜ ಹಾಳು ಮಾಡಲು ಹೊರಟಿರುವ ಬಿಜೆಪಿ ವಿರುದ್ಧ ನಾವಿರುವುದು. ನಮಗೆ ಉತ್ತರಪ್ರದೇಶ, ಗುಜರಾತ್ (Gujarat) ಆಡಳಿತ ಬೇಕಿಲ್ಲ. ವಿಶ್ವಕ್ಕೆ ಮಾದರಿಯಾದ ಕರ್ನಾಟಕದ ಆಡಳಿತ ಕೊಡಿ ಎಂದು ಮನವಿ ಮಾಡಿದರು.

  ಸಿಎಂ ನಾಡಿನಲ್ಲಿ ಶಾಂತಿ ನೆಲೆಸುವ ಕ್ರಮ ಕೈಗೊಳ್ಳಬೇಕು
  ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಹತ್ತಿಕ್ಕಲು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಸ್ವಾಮೀಜಿಗಳನ್ನು ಕರೆದು, ಅವರ ಸಮ್ಮುಖದಲ್ಲಿ ಭಾವೈಕ್ಯತೆ ಸಂದೇಶ ಕೊಡುವುದು ಸರ್ಕಾರದ ಕರ್ತವ್ಯ. ಸಿಎಂ ಅವರಿಗೆ ನಾಡಿನ ಬಗ್ಗೆ ಗೌರ ಇದ್ದರೆ, ರಾಜ್ಯದಲ್ಲಿ ಶಾಂತಿ ನೆಲೆಸಲು ಈ ಕ್ರಮಕ್ಕೆ ಮುಂದಾಗಬೇಕು. ಕಳೆದೆರಡು ತಿಂಗಳಿನಿಂದ ಸಾಮರಸ್ಯ ಹಾಳು ಮಾಡಲು ಹೊರಟ್ಟಿರುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

  ಮತಕೋಸ್ಕರ ಅಶಾಂತಿ ಮೂಡಿಸುವ ಯತ್ನ
  ರಾಜ್ಯದಲ್ಲಿ ಮತಕೋಸ್ಕರ ಕಳೆದೆರಡು ತಿಂಗಳಿನಿಂದ ಅಶಾಂತಿ ಮೂಡಿಸುವ ಘಟನೆ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷದಿಂದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕೆಲಸ ಆಗ್ತಿದೆ. ಬಿಜೆಪಿಗೆ 150 ಸೀಟು ತೆಗೆದುಕೊಳ್ಳುವ ಚಿಂತೆ. ಕಾಂಗ್ರೆಸ್ ಗೆ ಯಾರನ್ನ ಜೈಲಿಗೆ ಕಳುಹಿಸಬೇಕು ಅನ್ನೋ ಚಿಂತೆ ಆಗಿದೆ. ಜನತೆಯ ಬದಕು ಜೀವನ ಗಮದಲ್ಲಿಟ್ಟುಕೊಂಡು ಜನರು ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ಜನರು ದೂರ ಇರಿಸಬೇಕು. ನಮ್ಮ ರಾಜ್ಯದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಎರಡು ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

  ಇದನ್ನು ಓದಿ: PSI ನೇಮಕಾತಿ ಅಕ್ರಮ ಪ್ರಕರಣ: ಬಿಜೆಪಿ ನಾಯಕಿಯ ಪತಿ ಅರೆಸ್ಟ್

  ಹುಬ್ಬಳ್ಳಿ ಸದಾ ಶಾಂತಿಯನ್ನು ಬಯಸುವ ನಗರ. ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯುಳ್ಳ ತಾಣ. ಕೆಲ ವರ್ಷಗಳಿಂದ ಇಲ್ಲಿ ಎಲ್ಲ ಸಮುದಾಯದವರು ಸಹೋದರರಾಗಿ ಬಾಳಿ ಬದುಕುತ್ತಿದ್ದಾರೆ. ಬವಣೆಯಲ್ಲಿ ಬೇಯುತ್ತಿರುವ ಬದುಕನ್ನು ಕಟ್ಟಿಕೊಳ್ಳುವ ಬದಲು ಕೋಮುದಳ್ಳುರಿ ಹರಡುವುದು ಬೇಡ. ಅಂಜುಮನ್ ಸಂಸ್ಥೆ ಮುಖಂಡರ ಜತೆ ತೆರಳಿ ಪೊಲೀಸರಿಗೆ ಮನವಿ ಕೊಡಿ ಎಂದು ಈಗಾಗಲೇ ನಮ್ಮ ಪಕ್ಷದ ಮುಖಂಡರಿಗೂ ಸೂಚಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮುಗ್ಧರಿಗೆ ಅನ್ಯಾಯ ಆಗದಿರಲಿ ಎನ್ನುವುದು ನನ್ನ ಮನವಿ ಎಂದರು.

  ಇದನ್ನು ಓದಿ: ಮುಂದಿನ ತಿಂಗಳ ಮೊದಲ ವಾರದೊಳಗೆ ರಾಜ್ಯ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ; ಇಂದು ಜೆ.ಪಿ.ನಡ್ಡಾ ಆಗಮನ

  ಜನರ ಬದುಕು ಹಸನಾಗಿಸಲು ಜೆಡಿಎಸ್​ ಪಣ
  ನಮ್ಮ ರಾಜ್ಯದ ಅಭಿವೃದ್ದಿ, ನಮ್ಮ ರಾಜ್ಯದ ನದಿ ನೀರನ್ನು ನಾವು ಪಡೆಯಬೇಕು ಎಂಬ ಉದ್ಧೇಶ, ಪಂಚ ರತ್ನ ಕಾರ್ಯಕ್ರಮಗಳು ಶಿಕ್ಷಣ ಆರೋಗ್ಯ, ರೈತನ ಬದುಕು ಹಸನ ಗೊಳಿಸುವುದು, ಪ್ರತಿ ಕುಟುಂಬಕ್ಕೆ ಉದ್ಯೋಗ ಮತ್ತು ಮಹಿಳಾ ಸಬಲೀಕರಣ, ಕುಟುಂಬಕ್ಕೆ ವಸತಿ. ಈ ರೀತಿ ಕನ್ನಡಿಗರಲ್ಲಿ ಹೊಸ ಸರ್ಕಾರ ತಂದು ಜನರಲ್ಲಿ ಬದುಕು, ವಿಶ್ವಾಸ ಮೂಡಿಸಲು ನಾವು ಹೊರಟಿರುವ ಪ್ರಯತ್ನದಲ್ಲಿ ಯಶಸ್ಸು ಕಾಣುವ ವಿಶ್ವಾಸ ನಮಗೆ ಇದೆ ಎಂದು ತಿಳಿಸಿದರು.

  ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರ ಕಾಳಜಿ ಇಲ್ಲ

  ಜನತಾ ಜಲಧಾರೆ ಕಾರ್ಯಕ್ರಮದ ಉದ್ದೇಶ ನಮ್ಮ ನೀರನ್ನು ನಾವು ಪಡೆಯುವುದು. ರೈತರಿಗೆ ನೀರನ್ನು ಕೊಡುವುದರಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ. ದೇವೇಗೌಡರು ಮುಖ್ಯಮಂತ್ರಿಯಾದ ಕಾಲದಲ್ಲಿ ರೈತರಿಗೆ ನೀರಾವರಿಗೆ ಒದಗಿಸಿದ್ದೇವೆ.  ಆ ಬಳಿಕ ಯಾರು ಕೂಡ ರೈತರ ನೆರವಿಗೆ ಬಂದಿಲ್ಲ.  ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿಗೆ, ಕುಡಿಯಲು ಸಂಪೂರ್ಣ ನೀರನ್ನು ಕೊಡುತ್ತೇವೆ. ಜನರ ಜೀವನದ ಬಗ್ಗೆ, ಬದುಕಿನ ಬಗ್ಗೆ ಎರಡು ಪಕ್ಷಗಳಿಗೂ ಕಾಳಜಿ ಇಲ್ಲ ಎಂದು ಕಿಡಿ ಕಾರಿದರು.
  Published by:Seema R
  First published: