• Home
 • »
 • News
 • »
 • chikkamagaluru
 • »
 • Deviramma Betta: ಗಾಳಿಯ ರೂಪದಲ್ಲಿ ಗರ್ಭಗುಡಿ ಹೊಕ್ಕಿದ ದೇವೀರಮ್ಮ! ನೀನೇ ಕಾಪಾಡಮ್ಮಾ ಎಂಬ ಭಕ್ತರು

Deviramma Betta: ಗಾಳಿಯ ರೂಪದಲ್ಲಿ ಗರ್ಭಗುಡಿ ಹೊಕ್ಕಿದ ದೇವೀರಮ್ಮ! ನೀನೇ ಕಾಪಾಡಮ್ಮಾ ಎಂಬ ಭಕ್ತರು

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಹರಕೆ ಹೊತ್ತವರಂತೂ ಉಪವಾಸವಿದ್ದೇ ಬೆಟ್ಟ ಏರಿದ್ದರು. ತಾಯಿಯ ದರ್ಶನ ಪಡೆದು ಕೃತಾರ್ಥರಾಗಿ ಆಹಾರ ಸೇವಿಸಿದ್ದರು.

 • News18 Kannada
 • Last Updated :
 • Chikmagalur, India
 • Share this:

  ಚಿಕ್ಕಮಗಳೂರು: ದೇವೀರಮ್ಮಾ..ಕಾಪಾಡಮ್ಮಾ! ಬೆಟ್ಟದ ಮೇಲಿಂದ ಗಾಳಿ ರೂಪದಲ್ಲಿ ಬಂದು ತಾಯಿ ದೇವೀರಮ್ಮ (Deviramma Temple) ಗರ್ಭಗುಡಿ ಸೇರಿದಳು! ಚಿಕ್ಕಮಗಳೂರಿನ 3800 ಅಡಿ ಎತ್ತರದ ಬೆಟ್ಟದಲ್ಲಿ ದರ್ಶನ ನೀಡಿದ್ದ ಬೆಟ್ಟದ ತಾಯಿ ದೇವೀರಮ್ಮ ಬೆಟ್ಟದ (Deviramma Betta) ಕೆಳಗಿರೋ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದಳು. ಅದೂ ಹಾಗೀಗಲ್ಲ! ಗಾಳಿಯ ರೂಪದಲ್ಲಿ! ಗರ್ಭಗುಡಿಗೆ ಹಾಕಿದ ಪರದೆ ಸರಿದಾಗ ದೇವೀರಮ್ಮ ಒಳ ಹೋದಳೆಂಬ ನಂಬಿಕೆಯಿದೆ.


  ಇದನ್ನೂ ಓದಿ: Koragajja Miracle: ಸಾಗರದ 4 ತಿಂಗಳ ಬಾಲೆಯನ್ನು ಕಾಪಾಡಿದ ಉಡುಪಿಯ ಕೊರಗಜ್ಜ!


  ವಿಶೇಷ ಪೂಜೆ
  ಹೀಗೆ ದೇವೀರಮ್ಮ ಗರ್ಭಗುಡಿ ಪ್ರವೇಶಿಸಿದ ನಂತರ ವಿಶೇಷ ಪೂಜೆ (Deviramma Temple Puja) ನಡೆಸಲಾಯ್ತು. ಇಂದಿನಿಂದ 364 ದಿನ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ಮಾಡಬಹುದಾಗಿದೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಬೆಟ್ಟ, ಕಲ್ಲು, ಮುಳ್ಳು ಲೆಕ್ಕಿಸದ ಭಕ್ತರು
  ಹರಕೆ ಹೊತ್ತವರಂತೂ ಉಪವಾಸವಿದ್ದೇ ಬೆಟ್ಟ ಏರಿದ್ದರು. ತಾಯಿಯ ದರ್ಶನ ಪಡೆದು ಕೃತಾರ್ಥರಾಗಿ ಆಹಾರ ಸೇವಿಸಿದ್ದರು. ಕಲ್ಲು ಮುಳ್ಳಿನ ಹಾದಿಯನ್ನೂ ಲೆಕ್ಕಿಸದೇ ರಾತ್ರಿಯಿಂದಲೂ ಬೆಟ್ಟವನ್ನೇರಿದ ಭಕ್ತ ಸಮೂಹ ದೇವಿಯ ದರ್ಶನ ಪಡೆದಿದ್ರು. ಸಾವಿರಾರು ಭಕ್ತರು ದುರ್ಗಮ ಹಾದಿ, ಬಂಡೆಗಳನ್ನು ಮೀರಿ ಬರಿಗಾಲಲ್ಲಿ ಬೆಟ್ಟದ ದಾರಿಯಲ್ಲಿ ನಡೆದು ತಾಯಿಗೆ ಕೈಮುಗಿದರು.

  Published by:ಗುರುಗಣೇಶ ಡಬ್ಗುಳಿ
  First published: