• Home
 • »
 • News
 • »
 • chikkamagaluru
 • »
 • Deviramma Temple: ಚಿಕ್ಕಮಗಳೂರು ದೇವಿರಮ್ಮನ ಪವಾಡ! ಬೆಟ್ಟ ಏರಿ ಕೈಮುಗಿದ ಭಕ್ತರು

Deviramma Temple: ಚಿಕ್ಕಮಗಳೂರು ದೇವಿರಮ್ಮನ ಪವಾಡ! ಬೆಟ್ಟ ಏರಿ ಕೈಮುಗಿದ ಭಕ್ತರು

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕಲ್ಲು ಮುಳ್ಳಿನ ಹಾದಿಯನ್ನೂ ಲೆಕ್ಕಿಸದೇ ರಾತ್ರಿಯಿಂದಲೂ ಬೆಟ್ಟವನ್ನೇರಿದ ಭಕ್ತ ಸಮೂಹದ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಸಾವಿರಾರು ಭಕ್ತರು ದುರ್ಗಮ ಹಾದಿ, ಬಂಡೆಗಳನ್ನು ಮೀರಿ ಬರಿಗಾಲಲ್ಲಿ ಬೆಟ್ಟದ ದಾರಿಯಲ್ಲಿ ನಡೆದರು.

 • News18 Kannada
 • Last Updated :
 • Chikmagalur, India
 • Share this:

  ಚಿಕ್ಕಮಗಳೂರು: ಹಚ್ಚಹಸಿರಿನ ಸಹ್ಯಾದ್ರಿ ಪರ್ವತಶ್ರೇಣಿ, ಮಂಜು ಮುಸುಕಿದ ಬೆಟ್ಟದ ದಾರಿ. ಒಬ್ಬರ ಹಿಂದೊಬ್ಬರಂತೆ 3 ಸಾವಿರ ಅಡಿ ಬೆಟ್ಟ ಹತ್ತುತ್ತಿರೋ ಭಕ್ತರು. ಇಡೀ ಬೆಟ್ಟಕ್ಕೆ ಬೆಟ್ಟವೇ ಭಕ್ತರಿಂದ ತುಂಬಿಹೋಗಿತ್ತು, ಚಿಕ್ಕಮಗಳೂರು ಜಿಲ್ಲೆಯ (Chikkamagaluru) ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಬಿಂಡಿಗಾ ದೇವಿರಮ್ಮ (Deviramma Temple Chikkamagaluru) ದೇವಿಯೇ ಹೀಗೆ ಭಕ್ತರನ್ನು ಸೆಳೆದ ಮಹಾತಾಯಿ.


  ಅಂದಹಾಗೆ ಬಿಂಡಿಗಾ ದೇವಿರಮ್ಮ ದೇವಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುತ್ತಾಳೆ. ಹೀಗಾಗಿ ಭಕ್ತರ ಉತ್ಸಾಹ ಇನ್ನಷ್ಟು ಹೆಚ್ಚಿತ್ತು.
  ಇದನ್ನೂ ಓದಿ: Horanadu Annapoorneshwari: ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡು ಅನ್ನಪೂರ್ಣೇಶ್ವರಿ ಮೊರೆ!


  ಕಲ್ಲು ಮುಳ್ಳಿನ ಹಾದಿಯನ್ನೂ ಲೆಕ್ಕಿಸದೇ ರಾತ್ರಿಯಿಂದಲೂ ಬೆಟ್ಟವನ್ನೇರಿದ ಭಕ್ತ ಸಮೂಹದ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಸಾವಿರಾರು ಭಕ್ತರು ದುರ್ಗಮ ಹಾದಿ, ಬಂಡೆಗಳನ್ನು ಮೀರಿ ಬರಿಗಾಲಲ್ಲಿ ಬೆಟ್ಟದ ದಾರಿಯಲ್ಲಿ ನಡೆದರು.


  ಇದನ್ನೂ ಓದಿ: Neelakurinji: ನೀಲಕುರಿಂಜಿ ಹೂ ಮನೆಯಲ್ಲೂ ಬೆಳೆಯುತ್ತಾ?


  ಹರಕೆ ಹೊತ್ತವರಂತೂ ಉಪವಾಸವಿದ್ದೇ ಬೆಟ್ಟ ಏರಿದರು. ತಾಯಿಯ ದರ್ಶನ ಪಡೆದು ಕೃತಾರ್ಥರಾಗಿ ಆಹಾರ ಸೇವಿಸಿದರು. ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಬಿಂಡಿಗಾ ದೇವಿರಮ್ಮಗೆ ಉಘೇ ಎಂದು ಕೈಮುಗಿದರು.

  Published by:ಗುರುಗಣೇಶ ಡಬ್ಗುಳಿ
  First published: