• Home
  • »
  • News
  • »
  • chikkamagaluru
  • »
  • Chikkamagaluru: ಮಹಾಮಂಗಳಾರತಿ ವೇಳೆ ಅಲುಗುವ 16 ಅಡಿ ಹುತ್ತ!

Chikkamagaluru: ಮಹಾಮಂಗಳಾರತಿ ವೇಳೆ ಅಲುಗುವ 16 ಅಡಿ ಹುತ್ತ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

Unnakki Utsava: ಒಟ್ಟಿನಲ್ಲಿ ಪವಾಡವೋ, ಕಾಕತಾಳೀಯವೋ.. ಇಲ್ಲಿನ ಉಣ್ಣಕ್ಕಿ ಉತ್ಸವ ಹುತ್ತ ಅಲುಗಾಡುವಿಕೆಯಿಂದ ಸಾಕಷ್ಟು ಹೆಸರು ಪಡೆದಿದೆ. ಜನರಂತೂ ಮುಗಿಬಿದ್ದು ಆ ಕ್ಷಣವನ್ನ ಕಣ್ತುಂಬಿಸಿಕೊಳ್ತಾರೆ.

  • Share this:

    ಚಿಕ್ಕಮಗಳೂರು: ಎಲ್ಲರ ನೋಟ ಹುತ್ತದತ್ತ ನೆಟ್ಟಿತ್ತು. ಕಣ್ಣುಗಳಲ್ಲಿ ಹುತ್ತವೇ ಕ್ಷಣಕಾಲ ಅಲುಗಾಡೋದನ್ನ ನೋಡೋಕೆ ಕಾತುರವಿತ್ತು. ಅಬ್ಬಾ! ಅದೇನು ವಿಸ್ಮಯ ಅಂತೀರಾ? ಇತ್ತ ಉತ್ಸವ ಪೂಜೆ ನಡೀತಿದ್ರೆ, ಅತ್ತ ಹುತ್ತ ಅದಕ್ಕೆ ಸ್ಪಂದಿಸುತ್ತೆ. ಕ್ಷಣಕಾಲ ಅಲುಗಾಡಿ ಅಲ್ಲಿದ್ದವರನ್ನು ಮಂತ್ರಮುಗ್ಧಗೊಳಿಸುತ್ತೆ. ಇದನ್ನ ಪವಾಡ ಅಂತೀರೋ, ವಿಸ್ಮಯ ಅಂತೀರೋ ಆದರೆ ಈ ಅಲುಗಾಡೋ ಹುತ್ತ ನೋಡೋಕೆ ಸಾವಿರಾರು ಮಂದಿ ನೆರೆದಿದ್ದಂತೂ ಖರೆ. ಇದು ಚಿಕ್ಕಮಗಳೂರು ಜಿಲ್ಲೆಯ (Chikkamagaluru) ಮೂಡಿಗೆರೆ ತಾಲೂಕಿನ ಬಾನಳ್ಳಿ ಗ್ರಾಮದ ಉಣ್ಣಕ್ಕಿ ಉತ್ಸವದ (Unnakki Utsava) ಸಂಭ್ರಮ.


    ಇಲ್ಲಿ 16 ಅಡಿ ಹುತ್ತಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತೆ. ಮಹಾಮಂಗಳಾರತಿ ಸಮಯದಲ್ಲಂತೂ ಹುತ್ತ ಮೆಲ್ಲಗೆ ಅಲುಗಾಡಲು ಆರಂಭಿಸುತ್ತೆ. ಅಲ್ಲಿದ್ದವರೆಲ್ಲ ಆ ಕ್ಷಣಕ್ಕಾಗಿ ಕಾಯ್ತಿರ್ತಾರೆ. ಹುತ್ತ ಅಲುಗಾಡುತ್ತಿದ್ದಂತೆ ನಾಗದೇವರ ಕೃಪೆಗಾಗಿ ಮೊರೆಯಿಡ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೈ ಮುಗಿದು ಪರಿಹಾರ ಬೇಡ್ತಾರೆ.


    ಇದನ್ನೂ ಓದಿ: Hoysala Temple: ಕರುನಾಡನ್ನು 40 ವರ್ಷ ಆಳಿದ ರಾಜವಂಶ ಹುಟ್ಟಿದ್ದು ಈ ಪುಟ್ಟ ಹಳ್ಳಿಯ ದೇಗುಲದಲ್ಲಿ!


    400 ವರ್ಷ ಹಳೆಯ ಉಣ್ಣಕ್ಕಿ ಉತ್ಸವ!
    ಈ ಮಣ್ಣಿನ ಹುತ್ತವನ್ನು ದನ ಕಾಯುವ ಹುಡುಗರು ಮಾಡಿದ್ದಾಗಿ ಪ್ರತೀತಿಯಿದೆ. 400 ವರ್ಷಗಳ ಹಳೆಯದಾದ ಈ ಉಣ್ಣಕ್ಕಿ ಉತ್ಸವದಲ್ಲಿ ಆರೋಗ್ಯವಂತ ಕರುವಿನ ಕಿವಿ ಕತ್ತರಿಸಿ ಕಾಡಿಗೆ ಬಿಡಲಾಗ್ತದೆ. ಹೀಗೆ ಮಾಡಿದ್ರೆ ಗ್ರಾಮದಲ್ಲಿರುವ ಇತರೆ ದನಕರುಗಳು ಆರೋಗ್ಯವಾಗಿ ಇರುವುದಾಗಿ ನಂಬಲಾಗಿದೆ.


    ಇದನ್ನೂ ಓದಿ: Deviramma Betta: ಗಾಳಿಯ ರೂಪದಲ್ಲಿ ಗರ್ಭಗುಡಿ ಹೊಕ್ಕಿದ ದೇವೀರಮ್ಮ! ನೀನೇ ಕಾಪಾಡಮ್ಮಾ ಎಂಬ ಭಕ್ತರು


    ಪವಾಡವೋ, ಕಾಕತಾಳೀಯವೋ?
    ಒಟ್ಟಿನಲ್ಲಿ ಪವಾಡವೋ, ಕಾಕತಾಳೀಯವೋ.. ಇಲ್ಲಿನ ಉಣ್ಣಕ್ಕಿ ಉತ್ಸವ ಹುತ್ತ ಅಲುಗಾಡುವಿಕೆಯಿಂದ ಸಾಕಷ್ಟು ಹೆಸರು ಪಡೆದಿದೆ. ಜನರಂತೂ ಮುಗಿಬಿದ್ದು ಆ ಕ್ಷಣವನ್ನ ಕಣ್ತುಂಬಿಸಿಕೊಳ್ತಾರೆ.

    Published by:ಗುರುಗಣೇಶ ಡಬ್ಗುಳಿ
    First published: