ಪ್ರಕೃತಿ (nature) ಒಂದು ವಿಸ್ಮಯ. ಇದರ ಸೌಂದರ್ಯವನ್ನು ಅನುಭವಿಸಿದವರಿಗೇ ಗೊತ್ತು.. ಗುಡ್ಡ, ಬೆಟ್ಟ, ಕಾಡು, ನದಿ, ತೊರೆ, ಪ್ರಾಣಿ, ಪಕ್ಷಿ, ಹೂವು ಹೀಗೆ… ಸಾಲು ಸಾಲು ಕೌತುಕಗಳು ನಮ್ಮ ಕಣ್ಣಿಗೆ ಗೋಚರಿಸುತ್ತವೆ. ಪ್ರತಿಯೊಂದು ಸಂಗತಿಯೂ ಇಲ್ಲಿ ಪಾಠ ಕಲಿಸುತ್ತವೆ. ಕಣ್ಬಿಟ್ಟು ನೋಡಿದರೆ ಇಲ್ಲಿ ಎಲ್ಲವೂ ವಿಸ್ಮಯವೇ. ಅಂತದ್ದೇ ಒಂದು ವಿಸ್ಮಯ ಕರ್ನಾಟಕದ (Karnataka) ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ (Mullayanagiri) ಕಾಣುತ್ತಿದೆ. ಈ ಅದ್ಭುತ ಸೌಂದರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಡಾ. ದುರ್ಗಾಪ್ರಸಾದ್ ಹೆಗ್ಡೆ ಎನ್ನುವವರು ಇಂಥದ್ದೊಂದು ನಿಸರ್ಗ ಸೌಂದರ್ಯದ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಯಲ್ಲಿ ಅಪರೂಪದ ನೀಲಕುರಂಜಿ ಹೂವುಗಳು (Neelakuranji Flowers) ಅರಳಿರೋ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮುಳ್ಳಯ್ಯನ ಗಿರಿಗೆ ನೇರಳೆ ಬಣ್ಣದ ಹೊದಿಕೆ
ಇಡೀ ಗಿರಿಯಲ್ಲಿ ಅಚ್ಚ ನೇರಳೆ ಬಣ್ಣದ ಹೊದಿಕೆ ಹೊದಿಸಲಾಗಿದೆ ಎಂಬಷ್ಟು ಸೊಗಸಾಗಿ ಮುಳ್ಳಯ್ಯನ ಗಿರಿ ಕಾಣುತ್ತಿದೆ. ಸುಂದರವಾದ ನೇರಳೆ ಬಣ್ಣದಲ್ಲಿ ಸಂಪೂರ್ಣವಾಗಿ ಮುಚ್ಚಿದಂತೆ ಕಾಣುವ ಪರ್ವತದ ತುದಿಯ ಅದ್ಭುತ ಚಿತ್ರವನ್ನು 23-ಸೆಕೆಂಡ್ ಕ್ಲಿಪ್ನಲ್ಲಿ ಸೆರೆಹಿಡಿಯಲಾಗಿದೆ.
ಅಷ್ಟಕ್ಕೂ ಮಲೆನಾಡು ಚಿಕ್ಕಮಗಳೂರು ಪ್ರವಾಸಿಗರ ಸ್ವರ್ಗ. ಈ ಕಾಫಿನಾಡಿನಲ್ಲಿ ಗಿರಿಶೃಂಗಗಳು ಪ್ರಕೃತಿ ಸೌಂದರ್ಯ ಆರಾಧಕರನ್ನು ಕೈಬೀಸಿ ಕರೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಇದರ ಸೌಂದರ್ಯ ದುಪ್ಪಟ್ಟು. ಹಚ್ಚ ಹಸಿರಿನ ನಡುವೆ ಗುಡ್ಡ ಬೆಟ್ಟಗಳ ಸಾಲು ಕಣ್ಮನ ಸೆಳೆಯುತ್ತವೆ. ಅಲ್ಲದೇ ಬೆಟ್ಟಗಳ ನಡುವೆ ಕಾಣಸಿಗುವ ಮಂಜಿನ ಹೊದಿಕೆ ಅಕ್ಷರಶಃ ಸ್ವರ್ಗವನ್ನೇ ಸೃಷ್ಟಿಸುತ್ತದೆ. ಹೀಗಾಗಿ ಚಿಕ್ಕಮಗಳೂರಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
NeelaKurinji in full bloom after 12 years in Mullayanagiri peak, Chikmagalur
Kurinji is a shrub found in the Western Ghats, Nilgiri Hills, which means the blue mountains, got their name from the purplish blue flowers of Neelakurinji pic.twitter.com/9tCA5NeM7X
— Dr Durgaprasad Hegde (@DpHegde) September 23, 2022
ಇದನ್ನೂ ಓದಿ: Mermaid: ಮತ್ಸ್ಯಕನ್ಯೆಯಾಗಿ ಗುರುತಿಸಿಕೊಂಡು ತಿಂಗಳಿಗೆ 6 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ ಈಕೆ!
ಆದರೆ ಈಗ ಚಿಕ್ಕಮಗಳೂರಿನ ಸೌಂದರ್ಯ ದುಪ್ಪಟ್ಟಾಗಿದೆ. ಈಗ ಇದಕ್ಕೆಲ್ಲ ಕಳಶವಿಟ್ಟಂತೆ ಅಪರೂಪದ ನೀಲಕುರಂಜಿ ಹೂವುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮೋಡಿ ಮಾಡುವ ಈ ಹೂವುಗಳ ಸೌಂದರ್ಯ ಆಸ್ವಾದಿಸಲು ತಂಡೋಪತಂಡವಾಗಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರಕೃತಿಯ ಅಮೋಘ ದೃಶ್ಯ ವೈಭವವನ್ನು ಸವಿಯುತ್ತಿದ್ದಾರೆ.
12 ವರ್ಷಕ್ಕೊಮ್ಮೆ ಅರಳುವ ನೀಲಕುರಂಜಿ!
ಇನ್ನು ಈ ನೀಲಕುರಂಜಿ ಹೂವುಗಳ ವೈಶಿಷ್ಠ್ಯವು ಬೇರೆಯೇ ಇದೆ. ಇದು ಸಾಮಾನ್ಯವಾಗಿ ಕಾಣಸಿಗುವ ಹೂವಲ್ಲ. ಬದಲಿಗೆ ಪ್ರತಿ 12 ವರ್ಷಗಳಿಗೊಮ್ಮೆ ಮಾತ್ರ ಅರಳುವ ವಿಶೇಷವಾದ ಹೂವು. ಈ ಪ್ರದೇಶದಲ್ಲಿ ಹೂವನ್ನು ಕುರಿಂಜಿ ಎಂದೂ ಕರೆಯುತ್ತಾರೆ.
ಈ ಹೂವುಗಳು ಪ್ರಾಥಮಿಕವಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ತಮಿಳುನಾಡು, ಕರ್ನಾಟಕ ಮತ್ತು ಕೇರಳ, ಊಟಿ ಮತ್ತು ಮುನ್ನಾರ್ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ನೀಲಕುರುಂಜಿಯ ವಿಡಿಯೋ
ಸದ್ಯ ಈ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ಈ ವೀಡಿಯೊವನ್ನು ಸಾವಿರಾರು ಜನರು ನೋಡಿ ಇಷ್ಟ ಪಟ್ಟಿದ್ದಾರೆ. ಸಾಕಷ್ಟು ಜನರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಇದನ್ನು "ಸೋ ಬ್ಯೂಟಿಫುಲ್, ಇದೊಂದು ಸ್ವರ್ಗ. ವಿಹಾರಕ್ಕೆ ಯುರೋಪ್ ಅಥವಾ ಅಮೇರಿಕಾಕ್ಕೆ ಹೋಗುವ ಅಗತ್ಯವಿಲ್ಲ, ಪಶ್ಚಿಮ ಘಟ್ಟಗಳಿಗೆ ಭೇಟಿ ನೀಡಿದರೆ ಸಾಕು. ತುಂಬಾ ಸುಂದರವಾಗಿವೆ. ಇನ್ಕ್ರೆಡಿಬಲ್ ಇಂಡಿಯಾ" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು "ವಾವ್, ಭೇಟಿ ನೀಡಲು ಇದು ಸರಿಯಾದ ಸಮಯ” ಎಂದಿದ್ದಾರೆ. ಇನ್ನೊಬ್ಬರು "ವಾವ್, ತುಂಬಾ ಸುಂದರ," ಎಂದಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಸಾಕಷ್ಟು ಗಿರಿ ಶೃಂಗಗಳಿವೆ. ಬಾಬಾ ಬುಡನ್ ಗಿರಿ, ದತ್ತಗಿರಿ ಹೀಗೆ ಸಾಕಷ್ಟು ಬೆಟ್ಟಗಳನ್ನು ನಾವು ಕಾಣಬಹುದು. ಇದರಲ್ಲಿ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯಂತ ಎತ್ತರ ಪ್ರದೇಶವಾಗಿದೆ.
ಇದನ್ನೂ ಓದಿ: Uttara Kannada: ಕೋಟೆ ಪಕ್ಕದಲ್ಲೇ ಬೀಚ್! ಉತ್ತರ ಕನ್ನಡದ ಅದ್ಭುತ ಸ್ಥಳವಿದು
ಸಾಮಾನ್ಯವಾಗಿ ಇಲ್ಲಿಗೆ ಬರುವ ಪ್ರವಾಸಿಗರನೇಕರು ಬಾಬಾ ಬುಡನ್ ಗಿರಿಯ ತುತ್ತ ತುದಿ ತಲುಪಿ ಸಂಭ್ರಮಿಸ್ತಾರೆ. ಅದರಲ್ಲೂ ಈಗ ಇಲ್ಲಿಗೆ ಹೋಗುವ ಪ್ರವಾಸಿಗರು ಜಗತ್ತಿನ ಅತ್ಯದ್ಭುತ ಸೌಂದರ್ಯವನ್ನ ಸವಿಯುತ್ತಿದ್ದಾರೆ. ನೀಲಕುರಂಜಿ ಹೂವಿನ ಜೇನು ಹೀರಲು ಬರುವ ಅಪರೂಪದ ಚಿಟ್ಟೆಗಳು, ಹಕ್ಕಿಗಳು, ಕೀಟಗಳೂ ಕೂಡ ಆಕರ್ಷಣೆಯ ಸಂಗತಿಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ