Heart Touching Story: ಬಾಳ ಸಂಜೆಯಲ್ಲಿ ನಿಂತು ಬಾಲ್ಯದ ಮನೆಯ ಹುಡುಕಾಟ! ರಿಯಲ್ 'ರತ್ನ'ನಿಗೆ ಸಿಕ್ಕಿತಾ ಹುಟ್ಟಿ ಬೆಳೆದ 'ಪ್ರಪಂಚ'?

'ರತ್ನನ್ ಪ್ರಪಂಚ' ಸಿನಿಮಾದ ಕಥೆ ರಿಯಲ್ ಲೈಫ್‌ನಲ್ಲಿ (Real Life) ನಡೆದರೆ ಹೇಗಿರಬೇಡ? ಇಲ್ಲೂ ಅಂಥದ್ದೊಂದು ನೈಜ ಘಟನೆ ನಡೆದು ಬಿಟ್ಟಿದೆ. ವೃದ್ಧಾಪ್ಯದ ಸನಿಹಕ್ಕೆ ಹೆಜ್ಜೆ ಇಡುತ್ತಿರುವ ವ್ಯಕ್ತಿಯೊಬ್ಬರು ಇದೀಗ ತನ್ನ ಬಾಲ್ಯದ ಮನೆಯನ್ನು, ತನ್ನ ಹೆತ್ತವರನ್ನು ಹುಡುಕುತ್ತಿದ್ದಾರೆ. ಹಾಗಿದ್ರೆ ಈ ‘ರಿಯಲ್ ರತ್ನ’ ಯಾರು? ಅವರ ಬಾಲ್ಯದ ಆ ‘ಪ್ರಪಂಚ’ ಹೇಗಿತ್ತು? ಅವರ ಹುಡುಕಾಟದ ಪರಿ ಹೇಗಿದೆ ಅಂತ ನೀವೇ ನೋಡಿ…

ಹೆತ್ತವರ ಹುಡುಕಾಟದಲ್ಲಿರುವ ಅಬ್ಬಾಸ್

ಹೆತ್ತವರ ಹುಡುಕಾಟದಲ್ಲಿರುವ ಅಬ್ಬಾಸ್

 • Share this:
  ಚಿಕ್ಕಮಗಳೂರು: ನೀವು ಈ ಹಿಂದೆ ಅಮೆಜಾನ್ ಪ್ರೈಮ್‌ನಲ್ಲಿ (Amazon Prime) ರಿಲೀಸ್ (Release) ಆಗಿದ್ದ, ನಟ ಡಾಲಿ ಧನಂಜಯ್ (Dali Dhananjay), ಉಮಾಶ್ರೀ (Umshri) ಅಭಿನಯದ ‘ರತ್ನನ್ ಪ್ರಪಂಚ’ (Ratnan Prapancha) ಸಿನಿಮಾ ನೋಡಿರುತ್ತೀರಿ. ಅಮ್ಮನೇ (Mother) ಸರ್ವಸ್ವ ಎಂದುಕೊಂಡಿದ್ದ ಮಗ (Son), ಆ ಅಮ್ಮ ನನ್ನ ಸ್ವಂತ ಅಮ್ಮ ಅಲ್ಲ ಎನ್ನುವುದು ಗೊತ್ತಾದಾಗ ತೊಳಲುವ ಪರಿ, ಮಗನಿಗೆ ಸತ್ಯ (Truth) ಗೊತ್ತಾಯ್ತು ಅಂತ ಆತಂಕಗೊಳ್ಳುವ ಅಮ್ಮ, ತನ್ನ ಹೆತ್ತ ಅಮ್ಮನನ್ನು ಹುಡುಕಿಕೊಂಡು ಹೋಗುವ ಕಥಾ ನಾಯಕ (Hero).. ಇವೆಲ್ಲ ನೋಡಿ ನೀವೂ ಕಣ್ಣೀರು ಹಾಕಿರುತ್ತೀರಿ. “ಆತನಿಗೆ ಅವನ ಅಮ್ಮ ಸಿಗಲಪ್ಪ” ಅಂತ ಮನೆಯಲ್ಲಿ ಕುಳಿತೇ ಬೇಡಿಕೊಂಡಿರುತ್ತೀರಿ. ಇವೆಲ್ಲ ಸಿನಿಮಾದ ರೀಲ್ ಕಥೆ (Reel Story) ಆಯ್ತು. ಆದ್ರೆ ಇಂಥದ್ದೇ ಕಥೆ ರಿಯಲ್ ಲೈಫ್‌ನಲ್ಲಿ (Real Life) ನಡೆದರೆ ಹೇಗಿರಬೇಡ? ಇಲ್ಲೂ ಇಂಥದ್ದೊಂದು ನೈಜ ಘಟನೆ ನಡೆದು ಬಿಟ್ಟಿದೆ. ವೃದ್ಧಾಪ್ಯದ ಸನಿಹಕ್ಕೆ ಹೆಜ್ಜೆ ಇಡುತ್ತಿರುವ ವ್ಯಕ್ತಿಯೊಬ್ಬರು ಇದೀಗ ತನ್ನ ಬಾಲ್ಯದ ಮನೆಯನ್ನು, ತನ್ನ ಹೆತ್ತವರನ್ನು ಹುಡುಕುತ್ತಿದ್ದಾರೆ. ಹಾಗಿದ್ರೆ ಈ ‘ರಿಯಲ್ ರತ್ನ’ ಯಾರು? ಅವರ ಬಾಲ್ಯದ ಆ ‘ಪ್ರಪಂಚ’ ಹೇಗಿತ್ತು? ಅವರ ಹುಡುಕಾಟದ ಪರಿ ಹೇಗಿದೆ ಅಂತ ನೀವೇ ನೋಡಿ…

   ‘ರಿಯಲ್ ರತ್ನ’ನ ನೋವಿನ ಕಥೆ

  ಇದು ನಡೆದಿರೋದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರದಲ್ಲಿ. ಇಲ್ಲಿನ ನಿವಾಸಿ ಅಬ್ಬಾಸ್ ಎಂಬುವರೇ ತನ್ನ ಬಾಲ್ಯದ ಮನೆ, ತಂದೆ ತಾಯಿ, ಒಡ ಹುಟ್ಟಿದವರು, ಹುಟ್ಟಿ ಬೆಳೆದ ಆ ಊರು ಎಲ್ಲವನ್ನೂ ಹುಡುಕುತ್ತಿರುವ ರಿಯಲ್ ರತ್ನ! ಹೆಚ್ಟು ಕಡಿಮೆ ಮಧ್ಯವಯಸ್ಸು ತಲುಪಿರುವ ಇವರು, ಇದೀಗ ಬಾಲ್ಯದ ಹುಡುಕಾಟದಲ್ಲಿದ್ದಾರೆ.

  ಅಬ್ಬಾಸ್ ಯಾರು? ಎಲ್ಲಿಯವರು? ಏನು ಅವರ ಕಥೆ?

  ಅಸಲಿಗೆ ಅಬ್ಬಾಸ್ ಯಾರು ಎಂಬ ಪ್ರಶ್ನೆಗೆ ಅವರಲ್ಲೇ ಉತ್ತರ ಇಲ್ಲ! ಯಾಕೆಂದ್ರೆ ಅವರ ಮನೆ ಎಲ್ಲಿದೆ, ಯಾವ ಊರು ಎಂಬುದು ಅವರಿಗೆ ಗೊತ್ತಿಲ್ಲ. ಅವರಿಗೆ ಸುಮಾರು 5 ವರ್ಷ ಇದ್ದಾಗ ಆಕಸ್ಮಿಕವಾಗಿ ಮನೆ ಬಿಟ್ಟು ಬಂದಿದ್ದಾರೆ. ಇದೀಗ ಒಂದಷ್ಟು ಘಟನೆ ಬಿಟ್ಟರೆ ಅವರ ಅಪ್ಪ-ಅಮ್ಮನ ಹೆಸರು, ಮನೆ ಯಾವುದೂ ನೆನಪಿಲ್ಲ. ಊರು ಯಾವ ದಿಕ್ಕಿಗೆ ಇದು ಎನ್ನುವುದೂ ತಿಳಿದಿಲ್ಲ!

  ಇದನ್ನೂ ಓದಿ: Mushroom Farming: ಕ್ರೀಡಾ ಶಾಲೆ ವಿದ್ಯಾರ್ಥಿಗೆ ಕೃಷಿಯೇ ಖುಷಿಯಂತೆ! ಅಣಬೆ ಬೆಳೆಯುತ್ತಿದ್ದಾನೆ ಈ ಪೋರ

  ಬಾಲ್ಯದಲ್ಲಿ ಕಳೆದು ಹೋಗಿದ್ದ ಅಬ್ಬಾಸ್

  ಅಬ್ಬಾಸ್‌ಗೆ 5 ವರ್ಷವಾದಾಗ ಒಂದು ದಿನ ಸಾಕಿದ್ದ ಕುರಿಮರಿಯ ಜತೆ ಆಟವಾಡುತ್ತಿದ್ದರು.  ಸುಮ್ಮನೆ ಆಡುತ್ತ, ಆಡುತ್ತ ಆ ಕುರಿಮರಿಗೆ ಹೊಡೆದಾಗ ಅದು ಕುಸಿದುಬಿತ್ತು. ಇದನ್ನು ನೋಡಿದ ಅವರ ಸಹೋದರಿ, ತಮ್ಮನ ಮೇಲೆ ಸಿಟ್ಟು ಮಾಡಿಕೊಂಡಿದ್ದಳು. ಅಪ್ಪನಿಗೆ ಹೇಳಿ ಹೊಡೆಸುತ್ತೀನಿ ಅಂತ ಹೆದರಿಸಿದ್ದಳು. ಇದರಿಂದ ಹೆದರಿದ ಬಾಲಕ ಅಬ್ಬಾಸ್, ತಂದೆಯ ಹೊಡೆತದಿಂದ ತಪ್ಪಿಸಿಕೊಳ್ಳೋಕೆ ಅಜ್ಜಿ ಮನೆಗೆ ಹೋಗೋದೊಂದೇ ದಾರಿ ಅಂತ ಎಣಿಸಿದ.  ಅಜ್ಜಿ ಮನೆ ಹುಡುಕುತ್ತಾ ದಾರಿ ತಪ್ಪಿದ ಬಾಲಕ

  ಅಜ್ಜಿ ಮನೆಗೆ ಹೋಗಬೇಕು ಅಂತ ಅಂದುಕೊಂಡ ಬಾಲಕ, ಗೊತ್ತು ಗುರಿ ಇಲ್ಲದಂತೆ ಸಿಕ್ಕಿದ ಬಸ್ ಹತ್ತಿದ. ಆ ಬಸ್ ಎಲ್ಲಿ ಇಳಿಯಿತೋ ಆತನಿಗೆ ಗೊತ್ತಿಲ್ಲ. ಲಾಸ್ಟ್ ಸ್ಟಾಪ್ ಬಂದಾಗ ಬಸ್‌ನಲ್ಲೇ ಇದ್ದ ಕಂಡಕ್ಟರ್ ಒಬ್ಬ ಬಾಲಕನನ್ನು ವಿಚಾರಿಸಿ, ಅಲ್ಲೇ  ಮಲಗಲು ಹೇಳಿದ. ಮರುದಿನ ಎದ್ದಾಗ ಇನ್ನೊಂದು ಖಾಸಗಿ ಬಸ್ ನಿಂತಿದ್ದನ್ನು ನೋಡಿ, ಆ ಬಸ್‌ ಹತ್ತಿ ಕುಳಿತ ಈ ಪುಟ್ಟ ಅಬ್ಬಾಸ್.

  ಆ ಬಸ್ ಬಂದು ತಲುಪಿದ್ದು ಕೊಟ್ಟಿಗೆಹಾರಕ್ಕೆ

  ಆ ಖಾಸಗಿ ಬಸ್ ಕೊಟ್ಟಿಗೆ ಹಾರಕ್ಕೆ ಬಂತು ನಿಂತಿತು. ಆಗ ಎಲ್ಲಿ ಹೋಗಬೇಕು ಅಂತ ಕಂಗಾಲಾಗಿ ನಿಂತಿದ್ದ ಈ ಬಾಲಕ. ಆತನನ್ನು ನೋಡಿ ಬಸ್ ಕಂಡಕ್ಟರ್ ಹಸೈನಾರ್ ಎಂಬುವರು, ಸಮಾಧಾನ ಮಾಡಿದ. ಆತನ ಕಥೆ ತಿಳಿದು, ತಮ್ಮ ಮನೆಗೆ ಕರೆದುಕೊಂಡು ಹೋದರು. ತನ್ನ ಮಕ್ಕಳ ಜೊತೆ ಆತನನ್ನು ಸಾಕಿ ಬೆಳೆಸಿದರು.

  30 ವರ್ಷಗಳಿಂದ ತಂದೆ-ತಾಯಿಗಾಗಿ ಹುಡುಕಾಟ

  ಆ ಕಂಡಕ್ಟರ್ ಹಸೈನಾರ್ ಮನೆಯಲ್ಲಿ, ಬಾಲಕ ಅಬ್ಬಾಸ್ ಮಗನಾದ. ಅವರ ಮಕ್ಕಳ ಜೊತೆ ಬೆಳೆದು, ದೊಡ್ಡವನಾದ, ತನ್ನ ಬದುಕು ಕಟ್ಟಿಕೊಂಡ. ಆದರೂ ಬಾಲ್ಯದ ಸೆಳೆತ ಬಿಡಲಿಲ್ಲ. ತನ್ನ ಹೆತ್ತ ಅಪ್ಪ, ಅಮ್ಮನಿಗಾಗಿ, ಒಡಹುಟ್ಟಿದವರಿಗಾಗಿ, ಹುಟ್ಟಿದ ಊರಿಗಾಗಿ ಪರಿತರಿಸಿದ. 30 ವರ್ಷಗಳಿಂದ ಹುಡುಕಾಡಿದ್ರೂ ತನ್ನ ಮೂಲ ಗೊತ್ತಾಗಲಿಲ್ಲ.

  ವಾಹನ ಚಾಲನೆ ಮಾಡುತ್ತಾ ಬದುಕುತ್ತಿರುವ ಅಬ್ಬಾಸ್

  ಅಬ್ಬಾಸ್ ಅವರನ್ನು ಸಾಕಿದ ಹಸೈನಾರ್ ಅವರಿಗೆ 80 ವರ್ಷ ವಯಸ್ಸು . ಅವರ ಮೂರು ಮಕ್ಕಳು ಅಂಬುಲೆನ್ಸ್ ಚಾಲನೆ, ಹೋಟೆಲ್ ಸೇರಿದಂತೇ ಬೇರೆ ಬೇರೆ ಉದ್ಯೋಗ ಮಾಡಿಕೊಂಡಿದ್ದಾರೆ. ಅಬ್ಬಾಸ್ ಅವರು ಮದುವೆಯಾದ ನಂತರ ಮಡದಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಕೊಟ್ಟಿಗೆಹಾರದಲ್ಲಿ ವಾಸವಾಗಿದ್ದಾರೆ‌. ವಾಹನ ಚಾಲಕರಾಗಿರುವ ಅಬ್ಬಾಸ್ ವಾಹನ ಬಾಡಿಗೆ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ.

  ಇದನ್ನೂ ಓದಿ: Puttur: ಹೊಡೆದಾಟವೂ ಇಲ್ಲಿ ಒಂದು ಆಚರಣೆ! ಪರಸ್ಪರ ಹೊಡೆದಾಡಿಕೊಳ್ತಾರೆ ಗ್ರಾಮಸ್ಥರು

  ಹೆತ್ತವರನ್ನು ಹುಡುಕಿ ಕೊಡುವಂತೆ ಮನವಿ

  ಇದೀಗ ತನ್ನ ಹೆತ್ತವರನ್ನು ಹುಡುಕಿ ಕೊಡುವಂತೆ ಅಬ್ಬಾಸ್ ಮನವಿ ಮಾಡುತ್ತಿದ್ದಾರೆ. ಒಮ್ಮೆಯಾದರೂ ಅವರನ್ನೆಲ್ಲ ನೋಡಿ ಬರಬೇಕು ಅಂತ ಕನಸು ಕಣ್ಣಿನಿಂದ ಕಾಯುತ್ತಿದ್ದಾರೆ. ರೀಲ್ ರತ್ನನಿಗೆ ಹೆತ್ತ ಅಮ್ಮ, ಅಕ್ಕ ಹಾಗೂ ತಮ್ಮನ ದರ್ಶನವಾಗುತ್ತದೆ. ಆದರೆ ಈ ರಿಯಲ್ ರತ್ನನಿಗೆ ಮತ್ತೆ ಸಿಗುತ್ತಾ ಆತನ ಪ್ರಪಂಚ? ಕಾದು ನೋಡೋಣ…

  (ವರದಿ: ನಂದೀಶ್, ಚಿಕ್ಕಮಗಳೂರು)
  Published by:Annappa Achari
  First published: