ಚಾಮರಾಜನಗರ: ಆನೆ ಆನೆ ಆನೆ..ರಾಜ್ಯದ ರೈತರು ಆನೆ ಅನ್ನೋ ಪದ ಕೇಳಿದ್ರೆ ಸಾಕು, ಬೆಚ್ಚಿಬೀಳ್ತಿದ್ದಾರೆ. ಇದೇ ವೇಳೆ ಪುಂಡಾನೆಯೊಂದು ಸೆರೆಸಿಕ್ಕ ಸಮಾಧಾನಕರ ಸುದ್ದಿಯೊಂದು ಇಲ್ಲಿದೆ ನೋಡಿ. ಚಾಮರಾಜನಗರ ಜಿಲ್ಲೆ (Chamarajanagar News) ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಯೊಂದು (Wild Elephant) ಉಪಟಳ ನೀಡ್ತಿತ್ತು. ಈ ಕಾಡಾನೆ ದಾಳಿಯಿಂದ ದೇವರಾಜಪ್ಪ ಎಂಬ ರೈತ ತೀವ್ರ ಗಾಯಗೊಂಡಿದ್ರು. ಮನೆಯಿಂದ ಆಚೆ ಕಾಲಿಡೋಕೂ ಈ ಭಾಗದ ಜನರು ಭಯಬೀಳ್ತಿದ್ರು. ಆದ್ರೆ ಇದೀಗ ಈ ಕಾಡಾನೆ ಸೆರೆಸಿಕ್ಕಿದೆ. ರೈತರು Wild Elephant Probem to Farmer's) ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೆಟ್ಟದಮಾದಳ್ಳಿ ಗ್ರಾಮದಲ್ಲಿ ಈ ಆನೆಯ ಆರ್ಭಟ ಜೋರಾಗಿತ್ತು. ಈ ಕಾಟ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಅರಣ್ಯಾಧಿಕಾರಿಗಳು ಕಾಡಾನೆಯನ್ನ ಸೆರೆಹಿಡಿದಿದ್ದಾರೆ.
ಚಾಮರಾಜನಗರದ ಬೋಗವಾಳು ವಡೆಯನಪುರ ಸಮೀಪದ ಕಲ್ಲಹಳ್ಳದಲ್ಲಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: Hassan Baby Elephant: ಅಮ್ಮನ ಮಡಿಲು ಸೇರಿದ ಪುಟ್ಟ ಕಾಡಾನೆ ಮರಿ, ಖೆಡ್ಡಾದಲ್ಲೊಂದು ದಿನ ಹೀಗಿತ್ತು ನೋಡಿ
ಕಾಡಾನೆಯನ್ನು ಸೆರೆಹಿಡಿದ ಆನೆಗಳಿವು
ದಸರಾ ಆನೆಯೂ ಆಗಿರೋ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ನೇತೃತ್ವದಲ್ಲಿ ಗಣೇಶ, ಗಜೇಂದ್ರ, ಭೀಮ ಎಂಬ ಸಾಕಾನೆಗಳು ಪುಂಡಾನೆ ಸೆರೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದವು. ಸೆರೆಹಿಡಿದ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ರಾಮಾಪುರ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ: Hassan: ಖಾಲಿ ಗಾಜಿನ ಬಾಟಲಿ ಬ್ಯುಸಿನೆಸ್! ತಿಂಗಳಿಗೆ 50 ಸಾವಿರ ಆದಾಯ ಗಳಿಸುತ್ತಿರುವ ಹಾಸನದ ಯುವಕ
ಒಟ್ಟಾರೆ ಆನೆ ಅನ್ನೋ ಪದ ಕೇಳಿದ್ರೇನೇ ಭಯ ಬೀಳ್ತಿದ್ದ ಚಾಮರಾಜನಗರದ ರೈತರು ಸದ್ಯ ಸಮಾಧಾನ ಅನುಭವಿಸ್ತಿದ್ದಾರೆ.
ಮಾಹಿತಿ, ವಿಡಿಯೋ: ನಂದೀಶ್, ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ