• Home
  • »
  • News
  • »
  • chamarajanagar
  • »
  • Chamarajanagar: ಮಗಳಿಲ್ಲ ಎಂದು ಸಾಕಿದ ಬೆಕ್ಕಿಗೇ ಸೀಮಂತ ಮಾಡಿದ ದಂಪತಿ!

Chamarajanagar: ಮಗಳಿಲ್ಲ ಎಂದು ಸಾಕಿದ ಬೆಕ್ಕಿಗೇ ಸೀಮಂತ ಮಾಡಿದ ದಂಪತಿ!

X
ಸೀಮಂತದ ವಿಡಿಯೋ ನೋಡಿ

"ಸೀಮಂತದ ವಿಡಿಯೋ ನೋಡಿ"

ತಮ್ಮ ಮನೆಯ ಗರ್ಭಿಣಿ ಬೆಕ್ಕಿಗೆ ಹೊಸಬಟ್ಟೆ ತೊಡಿಸಿ, ಕಜ್ಜಾಯ, ಕೋಡುಬಳೆ, ಫಲತಾಂಬೂಲ ಇಟ್ಟು ಸಂಪ್ರದಾಯದಂತೆ ಸೀಮಂತ ಮಾಡಿದ್ದಾರೆ ಈ ದಂಪತಿ.

  • News18 Kannada
  • Last Updated :
  • Chamarajanagar, India
  • Share this:

    ನೀವು ಮನೆ ಮಗಳಿಗೆ, ತಂಗಿಗೆ ಸೀಮಂತ ಮಾಡಿರ್ತೀರಿ, ಸಂಭ್ರಮದಲ್ಲಿ ಭಾಗಿಯಾಗಿರ್ತೀರಿ. ಆದ್ರೆ ಇಲ್ಲೊಬ್ರು ಬೆಕ್ಕಿಗೆ (Baby Shower To Cat) ಸೀಮಂತ ಮಾಡಿದ್ದಾರೆ. ಅರೇ, ಇದೇನಿದು ಹೀಗೆ ಅಂತ ಮೂಗಿನ ಮೇಲೆ ಬೆರಳಿಟ್ಕೊಂಡ್ರಾ? ಹೌದು ಕಣ್ರೀ. ಚಾಮರಾಜನಗರದ ದಂಪತಿ (Chamarajanagar)  ಬೆಕ್ಕಿಗೆ ಸೀಮಂತ (Baby Shower) ಮಾಡಿರೋ ಘಟನೆಯೊಂದು ಇದೀಗ ಸಖತ್ ಸುದ್ದಿ (Viral Video)  ಮಾಡ್ತಿದೆ. 


    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯ ದಂಪತಿ ತಮ್ಮ ಮನೆಯ ಬೆಕ್ಕಿಗೆ ಸೀಮಂತ ಮಾಡಿದ್ದಾರೆ. ವೆಂಕಟರಮಣಶೆಟ್ಟಿ ಮತ್ತು ನಿರ್ಮಲಾ ಎಂಬ ದಂಪತಿಯೇ ಈ ಅಪರೂಪದ ಕಾರ್ಯಕ್ರಮ ನಡೆಸಿದವರು.


    ಇದನ್ನೂ ಓದಿ: Dakshina Kannada: ಮೈಸೂರು ಮಹಾರಾಜರ ಕಾಲದ ಬಂಗಾರದ ಚಿತ್ರಗಳು! ವಿಡಿಯೋ ನೋಡಿ


    ಬೆಕ್ಕಿಗೆ ಹೊಸಬಟ್ಟೆ ತೊಡಿಸಿ ಸಂಭ್ರಮ
    ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಆದ್ರೆ ಹೆಣ್ಣು ಮಕ್ಕಳಿಲ್ಲ. ಹೀಗಾಗಿ ತಮ್ಮ ಮನೆಯ ಗರ್ಭಿಣಿ ಬೆಕ್ಕಿಗೆ ಹೊಸಬಟ್ಟೆ ತೊಡಿಸಿ, ಕಜ್ಜಾಯ, ಕೋಡುಬಳೆ, ಫಲತಾಂಬೂಲ ಇಟ್ಟು ಸಂಪ್ರದಾಯದಂತೆ ಸೀಮಂತ ಮಾಡಿದ್ದಾರೆ.


    ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ


    ಬೆಕ್ಕಿಗೆ ಆರತಿ ಬೆಳಗಿದ ದಂಪತಿಗೆ ಖುಷಿಯೋ ಖುಷಿ
    ತಮ್ಮ ಮುದ್ದಿನ ಗರ್ಭಿಣಿ ಬೆಕ್ಕಿಗೆ ಆರತಿ ಬೆಳಗಿದ ದಂಪತಿ ಖುಷಿಪಟ್ಟಿದ್ದಾರೆ. ಒಟ್ಟಾರೆ ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿ ದಂಪತಿ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.


    ಮಾಹಿತಿ, ವಿಡಿಯೋ: ನಂದೀಶ್, ಚಾಮರಾಜನಗರ

    Published by:ಗುರುಗಣೇಶ ಡಬ್ಗುಳಿ
    First published: