ಚಾಮರಾನಗರ: ಸೋಜುಗಾದ ಸೂಜು ಮಲ್ಲಿಗೇ..ಮಂಡೆ ಮ್ಯಾಲೆ ದುಂಡು ಮಲ್ಲಿಗೇ..ಈ ಹಾಡನ್ನು ಕೇಳದವರಾರು. ರಾಜ್ಯ, ಭಾಷೆಯ ಗಡಿಯನ್ನೂ ದಾಟಿ ವಿಶ್ವದೆಲ್ಲೆಡೆ ವೈರಲ್ ಆದ ಮಾದಪ್ಪನ ಈ ಹಾಡು ಈಗಲೂ ಲಕ್ಷಾಂತರ ಜನರ ಮೊಬೈಲ್ನಲ್ಲಿ ರಿಂಗಣಿಸುತ್ತಿದೆ. ಅನನ್ಯ ಭಟ್ (Ananya Bhat) ಹಾಡಿದ್ದ ಈ ಹಾಡು ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಆದ್ರೆ ಈ ಬಾರಿ ಹಾಡಿದವರು ಚಾಮರಾಜನಗರ ಜಿಲ್ಲೆಯ (Chamarajanagar News) ವಿದ್ಯಾರ್ಥಿನಿ ಉಮೇ ಬಸೀರಾ.
ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ
ವಿದ್ಯಾರ್ಥಿನಿಯೋರ್ವಳು ಹಾಡಿದ ಮಹದೇಶ್ವರನ ಭಕ್ತಿಗೀತೆ ಇದೀಗ ಭಾರೀ ವೈರಲ್ ಆಗುತ್ತಿದೆ. ಚಾಮರಾಜನಗರ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಮೇ ಬಸೀರಾ ಹಾಡಿರುವ ಹಾಡು ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: Potraj Dance: ಪೋತರಾಜ ಕುಣಿತದ ಬಗ್ಗೆ ನಿಮಗೆಷ್ಟು ಗೊತ್ತು? ಇವರೇ ನೋಡಿ ವಿಶೇಷ ಕಲಾವಿದ
ಎಲ್ಲರ ಗಮನ ಸೆಳೆದ ವಿದ್ಯಾರ್ಥಿನಿ
ಸೋಜುಗಾದ ಸೂಜಿ ಮಲ್ಲಿಗೆ..ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ ಎಂದು ಹಾಡಿ ರಂಜಿಸಿದ ವಿದ್ಯಾರ್ಥಿನಿ ಎಲ್ಲರ ಗಮನ ಸೆಳೆದಿದ್ದಾರೆ.
ಮಾಹಿತಿ, ವಿಡಿಯೋ: ನಂದೀಶ್, ನ್ಯೂಸ್ 18 ಕನ್ನಡ ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ