ಚಾಮರಾಜನಗರ: "ಮಲಗು ಕಂದ ಮಲಗು ಕೂಸೆ.. ಮಲಗು ಕಂದ" ಈ ಅಚ್ಚ ಕನ್ನಡ (Kannada Song) ಹಾಡಿನದ್ದೇ ಗುನುಗು ನಾದ ಈಗ ದೆಹಲಿಯನ್ನೂ ತಲುಪಿದೆ! ಸ್ವತಃ ಪ್ರಧಾನಿ ಮೋದಿಯವರೇ (PM Narendra Modi) ಕನ್ನಡದ ಲಾಲಿ ಹಾಡನ್ನು ಹೊಗಳಿ ಪ್ರಶಂಸಿದ್ದಾರೆ.
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ನಡೆಸಿದ ಪೆನ್ ಎ ಲೋರಿ ಎಂಬ ಜೋಗುಳಗೀತೆ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯ ಕವಿ ಬಿ.ಎಂ. ಮಂಜುನಾಥ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ತಾಯಿ, ಅಜ್ಜಿಯೇ ಸ್ಪೂರ್ತಿ
"ಮಲಗು ಕಂದ ಮಲಗು ಕೂಸೆ" ಎಂಬ ಈ ಲಾಲಿ ಹಾಡಿಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಪ್ರಶಂಸಿದ್ದಾರೆ.
ಯಾರು ಈ ಕವಿ ಮಂಜುನಾಥ್?
ಬಿ.ಎನ್ ಮಂಜುನಾಥ್ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಡಂಚಿನ ಬಾಳೆಗುಣಸೆ ಎಂಬ ಗ್ರಾಮದವರು. ಎಲ್ಐಸಿ ಪ್ರತಿನಿಧಿ ಆಗಿರುವ ಮಂಜುನಾಥ್ ಪ್ರವೃತ್ತಿಯಲ್ಲಿ ಕವಿ. ಕೇಂದ್ರ ಸಂಸ್ಕೃತಿ ಸಚಿವಾಲಯ ಜೋಗುಳ ಗೀತೆ ರಚಿಸುವ ಸ್ಪರ್ಧೆಗೆ ಆಹ್ವಾನಿಸಿದಾಗ ಪತ್ನಿ ಹಾಗೂ ಮಗನ ಒತ್ತಾಯಕ್ಕೆ ಕಟ್ಟುಬಿದ್ದ ಮಂಜುನಾಥ್ ಮಲಗು ಕಂದ ಮಲಗು ಕೂಸೆ ಎಂಬ ಜೋಗುಳಗೀತೆ ರಚಿಸಿ ಕಳುಹಿಸಿದ್ದರು.
ಇದನ್ನೂ ಓದಿ: Success Story: ಬಾಳೆ ದಿಂಡಿನಿಂದಲೇ ಹಣ ಗಳಿಸಿ! ಇವ್ರನ್ನ ನೋಡಿ ಕಲೀರಿ!
ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ, ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಈ ಜೋಗುಳ ಗೀತೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ ಮಂಜುನಾಥ್ ಅವರನ್ನು ಪ್ರಶಂಸಿದ್ದಾರೆ.
ಇದನ್ನೂ ಓದಿ: Chamarajanagar: ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್ ಬೈ, ರಾಜಕೀಯಕ್ಕೆ ಜೈ ಎಂದ ಇನ್ಸ್ಪೆಕ್ಟರ್!
ಸ್ವತಃ ಪ್ರಧಾನಿ ಹೊಗಳಿಕೆಯ ಬಗ್ಗೆ ಹರ್ಷಗೊಂಡಿರುವ ಕವಿ ಮಂಜುನಾಥ್, "ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ, ಖಂಡಿತವಾಗಿಯೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ" ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ವರದಿ: ನಂದೀಶ್, ನ್ಯೂಸ್ 18 ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ