ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Betta) ಶಿವರಾತ್ರಿಯ ರಂಗು (Maha Shivaratri) ಕಳೆಗಟ್ಟುತ್ತಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿರುವ ಕಾರಣ ಫೆಬ್ರವರಿ 17ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 21ರ ಸಂಜೆ 7 ಗಂಟೆಯವರೆಗೆ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಅಧಿಕೃತ ಆದೇಶ ಪ್ರಕಟಿಸಿದ್ದಾರೆ.
ಇದನ್ನೂ ಓದಿ: Chamarajanagar: ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್ ಬೈ, ರಾಜಕೀಯಕ್ಕೆ ಜೈ ಎಂದ ಇನ್ಸ್ಪೆಕ್ಟರ್!
ಕಾಲ್ನಡಿಗೆಯಲ್ಲೇ ಸಹಸ್ರಾರು ಭಕ್ತರ ಆಗಮನ
ಮಲೆ ಮಹದೇಶ್ವರ ಬೆಟ್ಟಕ್ಕೆ ವಯಸ್ಸಿನ ಬೇಧವಿಲ್ಲದೇ ಮಹಿಳೆಯರು ಮಕ್ಕಳೆನ್ನದೆ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲೆ ಬರತೊಡಗಿದ್ದಾರೆ. ಕೋಲಾರ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್ ಹೀಗೆ ನಾನಾ ಕಡೆಯಿಂದ ಕಡೆಯಿಂದ ಜೀವಭಯ ಲೆಕ್ಕಿಸದೇ ಕಾವೇರಿ ನದಿ ದಾಟಿ ಕಾಡು ಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ಧಾವಿಸುತ್ತಿದ್ದಾರೆ.
ಇದನ್ನೂ ಓದಿ: Chamarajanagar: ಮಗಳಿಲ್ಲ ಎಂದು ಸಾಕಿದ ಬೆಕ್ಕಿಗೇ ಸೀಮಂತ ಮಾಡಿದ ದಂಪತಿ!
ನಾವು ಕೇಳಿದ್ದೆಲ್ಲ ಕೊಟ್ಟ ಮಹದೇಶ್ವರನಿಗೆ ಇಷ್ಟಾದ್ರೂ ಮಾಡ್ಬೇಕಲ್ಲ!
"ಮಹದೇಶ್ವರ ನಾವು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾನೆ. ಹರಕೆ ಸಲ್ಲಿಸಲು ಕಾಲ್ನಡಿಗೆಯಲ್ಲೇ ಬರುತ್ತಿದ್ದೇವೆ. ದಟ್ಟ ಅರಣ್ಯದ ನಡುವೆ ನಡೆದು ಬಂದರೂ ಮಹದೇಶ್ವರನ ಕೃಪೆಯಿಂದಾಗಿ ತಮಗೆ ಯಾವುದೇ ಪ್ರಾಣಿಗಳು ತೊಂದರೆ ಮಾಡಲ್ಲ. ಮಾದಪ್ಪನ ಧ್ಯಾನ ಮಾಡುತ್ತಾ ಬರುವುದರಿಂದ ಎಷ್ಟೇ ದೂರ ನಡೆದರೂ ಯಾವುದೇ ರೀತಿಯ ದಣಿವೂ ಆಗುತ್ತಿಲ್ಲ" ಎನ್ನುತ್ತಾರೆ ಭಕ್ತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ