ಚಾಮರಾಜನಗರ: ಶಿವನೇ ನನಗೆ ಹುಡುಗಿ ಕರುಣಿಸು ಎಂದು ಭಕ್ತನೊಬ್ಬ ದೇವರ ಮೊರೆ ಹೋದ ಅಪರೂಪದ ಘಟನೆಯೊಂದು ಇದೀಗ ಭಾರೀ ವೈರಲ್ ಆಗ್ತಿದೆ. ಹೌದು, ದೇವರೇ ನನಗೆ ಹುಡುಗಿ ಕರುಣಿಸಿ ಎಂದು ಬರೆದಿರುವ ಪತ್ರವೊಂದು ಚಾಮರಾಜನಗರದ (Chamarajanagar News) ಚಾಮರಾಜೇಶ್ವರ ದೇವಾಲಯ (Chamarajeshwar Temple) ಹುಂಡಿ ಎಣಿಕೆ ಸಂದರ್ಭದಲ್ಲಿ ಸಿಕ್ಕಿದೆ. ಮದುವೆಯಾಗೋಕೆ ಹುಡುಗಿಯೇ ಸಿಕ್ತಿಲ್ಲ ಎಂಬ ಕೂಗು ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಹೆಚ್ತಿರೋ ಈ ಸಂದರ್ಭದಲ್ಲೇ ದೇವರಿಗೆ ಬರೆದ ಈ ಪತ್ರ ಭಾರೀ ವೈರಲ್ (Viral News) ಆಗಿದೆ.
ಅಷ್ಟೇ ಅಲ್ಲ ಕಣ್ರೀ..ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆಯಲ್ಲಿ ಸಿಕ್ಕ ಇನ್ನೊಂದು ಪತ್ರವೂ ವೈರಲ್ ಆಗ್ತಿದೆ.
ಇದನ್ನೂ ಓದಿ: Chamarajangar: ದಕ್ಷಿಣ ಆಫ್ರಿಕಾ ಮೂಲದ ಬೆಳೆಯಿಂದ ಲಾಭ ಪಡೆದ ಚಾಮರಾಜನಗರ ರೈತರು!
ಇನ್ನೂ ಒಂದು ಪತ್ರ ಹೀಗಿದೆ ನೋಡಿ
ಈ ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಪತ್ರವನ್ನೂ ವ್ಯಕ್ತಿಯೊಬ್ಬ ಹುಂಡಿಗೆ ಹಾಕಿದ್ದಾರೆ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದುಕೊಂಡ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Chamarajanagar: ಮಗಳಿಲ್ಲ ಎಂದು ಸಾಕಿದ ಬೆಕ್ಕಿಗೇ ಸೀಮಂತ ಮಾಡಿದ ದಂಪತಿ!
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆಯಲ್ಲಿ ಒಟ್ಟು 7,61,641 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಆದ್ರೆ ಕಾಣಿಕೆ ಜೊತೆ ಸಿಕ್ಕ ಈ ಪತ್ರಗಳು ಭಾರೀ ಸಂಚಲನ ಸೃಷ್ಟಿಸ್ತಿವೆ.
ಮಾಹಿತಿ, ವಿಡಿಯೋ: ನಂದೀಶ್, ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ