• Home
  • »
  • News
  • »
  • chamarajanagar
  • »
  • Himavad Gopalswami Betta: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಪುನರಾರಂಭ

Himavad Gopalswami Betta: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಪುನರಾರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

KSRTC Bus To Gopalswami Hills: ಬೆಟ್ಟದ ತಪ್ಪಲಿನಿಂದ ಕೆಎಸ್​‌ಆರ್​ಟಿಸಿ ಬಸ್ ಸೇವೆ ಪುನರಾರಂಭಗೊಂಡಿದೆ.

  • News18 Kannada
  • Last Updated :
  • Chamarajanagar, India
  • Share this:

    ಚಾಮರಾಜನಗರ: ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ  (Himavad Gopalswami Betta) ಬಸ್ ಸಂಚಾರ ಪುನರಾರಂಭಗೊಂಡಿದೆ. ಕಳೆದೆರಡು ವಾರದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದು ಮತ್ತೆ ಪುನರಾರಂಭಗೊಂಡಿದೆ. ನಿರಂತರ ಮಳೆಗೆ ರಸ್ತೆ ಕೊಚ್ಚಿಹೋಗಿತ್ತು. ಇದರಿಂದ ಬಸ್ ಸಂಚಾರ ಬಂದ್ ಆಗಿತ್ತು. ಇದೀಗ ಬಸ್ ಸಂಚಾರ ಮತ್ತೆ ಆರಂಭಗೊಂಡಿದ್ದು ಬೆಟ್ಟದ ತಪ್ಪಲಿನಿಂದ ಕೆಎಸ್​‌ಆರ್​ಟಿಸಿ ಬಸ್ ಸೇವೆ (KSRTC Bus To Gopalswami Hills) ಪುನರಾರಂಭಗೊಂಡಿದೆ.


    ಮಹದೇಶ್ವರಬೆಟ್ಟದಲ್ಲಿ ಡಿಜಿಟಲ್ ಹುಂಡಿ ಸೇವೆ ಆರಂಭ
    ಇನ್ನು ಮುಂದೆ ಮಹದೇಶ್ವರನ ಭಕ್ತರು ದೇವರಿಗೆ ಕಾಣಿಕೆ ಅರ್ಪಿಸಲು ತಮ್ಮ ಜೊತೆ ನಗದ ಹಣವನ್ನು ಒಯ್ಯಬೇಕಾಗಿಲ್ಲ, ಕಾಣಿಕೆಯನ್ನು ಹುಂಡಿಗೆ ಹಾಕಬೇಕೆಂದೇನು ಇಲ್ಲ . ಇದೀಗ ಡಿಜಿಟಲ್ ಪೇಮೆಂಟ್ (Digital Payment) ಮೂಲಕ ಕಾಣಿಕೆಯನ್ನು ಅರ್ಪಿಸಲು ಭಕ್ತರಿಗೆ (Devotees) ಅವಕಾಶ ಒದಗಿಸಲಾಗಿದೆ. ದೇವಾಲಯದ ಆವರಣದಲ್ಲಿ ಕ್ಯೂ ‌ಆರ್ ಕೋಡ್ ಉಳ್ಳ ಫಲಕ ಇಡಲಾಗಿದ್ದು ಭಕ್ತರು ಗೂಗಲ್ ಪೇ (Google Pay), ಫೋನ್ ಪೇ, ಬೀಮ್, ಪೇಟಿಎಂ ಮೂಲಕ ಕಾಣಿಕೆ ಸಲ್ಲಿಸಬಹುದಾಗಿದೆ.


    ಕ್ಯೂಆರ್ ಕೋಡ್ ಬಳಸಿ ಕಾಣಿಕೆ ಅರ್ಪಿಸಿ
    ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಹಾಗು ಎಸ್‌ಬಿಐ ಸಹಯೋಗದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಇ- ಹುಂಡಿ ಸ್ಥಾಪಿಸಲಾಗಿದ್ದು ಭಕ್ತರು ಕ್ಯೂಆರ್ ಕೋಡ್ ಬಳಕೆ ಮಾಡಿ ದೇವರಿಗೆ ಕಾಣಿಕೆ ಅರ್ಪಿಸಬಹುದಾಗಿದೆ. ಇ-ಹುಂಡಿಗೆ ಸಂಪೂರ್ಣ ಭದ್ರತೆ ವಹಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಂದ ಇ-ಹುಂಡಿಗಾಗಿ ಬೇಡಿಕೆ ಇತ್ತು.


    ಇದನ್ನೂ ಓದಿ: Hunting Specialist Rana: ಕಾಡುಗಳ್ಳರಿಗೆ ಸಿಂಹಸ್ವಪ್ನ ಬಂಡಿಪುರದ ರಾಣಾ ಸಾಹಸಗಳಿವು!


    ವರ್ಷಕ್ಕೆ ಮೂರು ಬಾರಿ ನಡೆಯವ ಜಾತ್ರೆ ಹಾಗು ಪ್ರತಿ ಅಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಮಹದೇಶ್ವರನ ಸನ್ನಿಧಿಗೆ ಬರುತ್ತಾರೆ. ದೇವಾಲಯ ಒಳಾಂಗಣದಲ್ಲಿ ಹುಂಡಿಗಳನ್ನು ಇಡಲಾಗಿದ್ದು ಭಕ್ತರು ಹುಂಡಿಗಳಲ್ಲೇ ಹಾಕಿ ತಮ್ಮ ಕಾಣಿಕೆ ಸಲ್ಲಿಸಬೇಕಿತ್ತು. ನೂಕು ನುಗ್ಗಲಿನ ಕಾರಣ ಕಾಣಿಕೆ ಸಲ್ಲಿಸಲು ಸಹ ಹಲವು ರೀತಿಯ ಅಡಚಣೆಗಳು ಎದುರಾಗುತ್ತಿದ್ದವು ಈ ಹಿನ್ನಲೆಯಲ್ಲಿ ಇದೀಗ ಇ-ಹುಂಡಿ ಸ್ಥಾಪನೆ ಮಾಡಲಾಗಿದೆ.


    6 ಕಡೆ ಕ್ಯೂಆರ್ ಕೋಡ್ ಫಲಕ
    ಭಕ್ತರ ಸರತಿ ಸಾಲು ಸೇರಿದಂತೆ ಆರು ಕಡೆ ಕ್ಯೂಆರ್ ಕೋಡ್ ಫಲಕ ಅಳವಡಿಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿ ಕಾಣಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲೂ ಇ- ಹುಂಡಿ ಜಾರಿ ಮಾಡಲಾಗುತ್ತಿದ್ದು ಇದರ ಅಂಗವಾಗಿ ಮಹದೇಶ್ವರನ ಸನ್ನಿಧಿಯಲ್ಲು ಇ-ಹುಂಡಿ ಅಳವಡಿಸಲಾಗಿದೆ


    ಇದನ್ನೂ ಓದಿ: Baby Elephant: ಕಾಡಿನಿಂದ ನಾಡಿಗೆ ಬಂದು ಮಕ್ಕಳ ಜೊತೆ ಆಟವಾಡಿದ ಮರಿ ಆನೆ! ಎಷ್ಟು ಮುದ್ದಾಗಿದೆ ನೋಡಿ


    ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಇಂದು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯು ಆಗಿರುವ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಚಾಲನೆ ನೀಡಿದರು. "ಮಹದೇಶ್ವರ ಬೆಟ್ಟ ಅರಣ್ಯಪ್ರದೇಶ ವಾಗಿರುವುದರಿಂದ ಸ್ವಲ್ಪ ನೆಟ್‌ವರ್ಕ್ ಸಮಸ್ಯೆ ಇದೆ, ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 23 ರಂದು ಸರ್ವೀಸ್ ಪ್ರೊವೈಡರ್‌ಗಳ ಸಭೆ ಕರೆದಿದ್ದು ಸಿಗ್ನಲ್ ಬೂಸ್ಟ್ ಮಾಡಲು ಅಗತ್ಯ ಕ್ರಮ ವಹಿಸುವುದಾಗಿ" ಅವರು ನ್ಯೂಸ್18 ಗೆ ತಿಳಿಸಿದರು


     

    Published by:ಗುರುಗಣೇಶ ಡಬ್ಗುಳಿ
    First published: