• Home
  • »
  • News
  • »
  • chamarajanagar
  • »
  • Gorehabba: ತಿಪ್ಪೇಗುಂಡಿಯಲ್ಲೇ ದೇಗುಲ, ಮೈಮೇಲೆ ಸಗಣಿ ಎರಚೋ ಹಬ್ಬ!

Gorehabba: ತಿಪ್ಪೇಗುಂಡಿಯಲ್ಲೇ ದೇಗುಲ, ಮೈಮೇಲೆ ಸಗಣಿ ಎರಚೋ ಹಬ್ಬ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇಡೀ ಗುಮಟಾಪುರ ಕಾಯೋ ದೇವರು ಬೀರೇಶ್ವರ ಸ್ವಾಮಿ ಅಂತ. ಬೀರೇಶ್ವರ ಸ್ವಾಮೀನ ಸಂತೃಪ್ತಿಪಡಿಸೋಕೆ‌ ಅಂತಾನೆ ಗೊರೆಹಬ್ಬ ಆಚರಿಸಲಾಗುತ್ತೆ.

  • News18 Kannada
  • Last Updated :
  • Chamarajanagar, India
  • Share this:

    ಚಾಮರಾಜನಗರ: ಇವರೇನು ಇಷ್ಟೊಂದು ಜನರು ಹೀಗೆ ಒಬ್ರಿಗೊಬ್ಬರು ಹೊಡೆದಾಡ್ತಿದ್ದಾರೆ? ಅದೂ ಸಗಣಿಲಿ! ಚೂರೂ ಇರಿಸು ಮುರುಸು ಇಲ್ದೇ ನಗುನಗುತ್ತಾ ಒಬ್ರ ಮೈಮೇಲೊಬ್ರು ಸಗಣಿಯ ಉಂಡೆಗಳನ್ನ ಎಸೀತಿದ್ದಾರೆ. ಅಯ್ಯಪ್ಪಾ! ಇದೇನಪ್ಪಾ ಅಂದ್ರೆ ಇದೇ ಚಾಮರಾಜನಗರದ (Chamarajanagara) ಗೊರೆಹಬ್ಬದ ಸಂಭ್ರಮ. ಚಾಮರಾಜನಗರ ಬಳಿಯ ಗಡಿಗ್ರಾಮವಾದ ತಮಿಳುನಾಡಿನ ಗುಮಟಾಪುರದಲ್ಲೇ ಇಂಥದ್ದೊಂದು ವಿಚಿತ್ರ, ಅಷ್ಟೇ ವಿಶಿಷ್ಟ ಹಬ್ಬ (Gorehabba In Chamarajanaga) ನಡೀತು. ತಮಿಳುನಾಡಿನ ನೆಲದಲ್ಲಿ ಕನ್ನಡಿಗರು ತಮ್ಮ ಸಂಪ್ರದಾಯದಿಂದ ಗಮನಸೆಳೆದರು.


    ಬಲಿಪಾಡ್ಯಮಿ ಹಬ್ಬದ ಮಾರನೆಯ ದಿನ ನಡೆಯುವ ಗೊರೆಹಬ್ಬದಲ್ಲಿ ಊರವ್ರು ಜಾತಿ, ವಯಸ್ಸಿನ ಬೇಧವೇ ಇಲ್ದೇ ಒಬ್ರ ಮೇಲೊಬ್ರು ಸಗಣಿ ಎರಚಿದರು. ಅಲ್ಲದೇ ವ್ಯಕ್ತಿಯೋರ್ವನಿಗೆ ಚಾಡಿಕೋರ ಎಂದು ಕರೆದು ಕತ್ತೆ ಮೇಲೆ ಮರವಣಿಗೇನೂ ಮಾಡಲಾಯ್ತು.


    ಇತಿಹಾಸದಲ್ಲಿದೆ ವಿಶಿಷ್ಟ ಕಥೆ
    ಇಂಥದ್ದೊಂದು ವಿಭಿನ್ನ ಆಚರಣೆಯ ಹಿನ್ನೆಲೆ ಹುಡುಕ್ತಾಹೋದ್ರೆ ನೂರಾರು ವರ್ಷ ಹಿಂದಕ್ಕೆ ಹೋಗ್ಬಿಡ್ತೀವಿ!


    ಇಡೀ ಗುಮಟಾಪುರ ಕಾಯೋ ದೇವರು ಬೀರೇಶ್ವರ ಸ್ವಾಮಿ ಅಂತ. ಬೀರೇಶ್ವರ ಸ್ವಾಮೀನ ಸಂತೃಪ್ತಿಪಡಿಸೋಕೆ‌ ಅಂತಾನೆ ಗೊರೆಹಬ್ಬ ಆಚರಿಸಲಾಗುತ್ತೆ. ಇದೆ ಊರಿನ ಕಾಳೇಗೌಡ ಎಂಬುವರ ಮನೆಗೆ ಉತ್ತರ ಭಾಗದಿಂದ ಬಂದಿದ್ದ ವ್ಯಕ್ತಿಯೋರ್ವ ಮೃತಪಟ್ಟನಂತೆ. ಆಮೇಲೆ ಅವನ ಜೋಳಿಗೆ, ಬೆತ್ತ, ಎಲ್ಲವನ್ನು ತಿಪ್ಪೆಗುಂಡಿಗೆ ಬಿಸಾಕಿದರಂತೆ.


    ಇದನ್ನೂ ಓದಿ: Puneeth Rajkumar: ಮಿಲಿಟ್ರಿ ಮಹದೇವು ಮಾಡಿದ್ದ ಬೆಲ್ಲದ ಚಹಾ ಸವಿದಿದ್ದ ಅಪ್ಪು!


    ತಿಪ್ಪೆಗುಂಡಿಲಿ ಲಿಂಗ!
    ಕೆಲವು ದಿನಕ್ಕೆಲ್ಲ ಅದೇ ತಿಪ್ಪೆಗುಂಡಿ ಬಳಿ‌ ಲಿಂಗ ಕಾಣಿಸ್ತಂತೆ! ಎತ್ತಿನಗಾಡಿ ಚಕ್ರ ಲಿಂಗದ ಮೇಲೆ ಹರಿದಾಗ ರಕ್ತ ಚಿಮ್ಮಿತಂತೆ! ಊರ ಮುಖಂಡನಿಗೆ ತಿಪ್ಪೆಗುಂಡಿ ಬಳಿ ಇಂಥದ್ದೊಂದು ಹಬ್ಬ ಮಾಡುವಂತೆ ಕನಸಾಯಿತಂತೆ. ಊರವ್ರೆಲ್ಲ ಸೇರಿ ತಿಪ್ಪೇಗುಂಡಿಲಿ ದೇಗುಲ ಕಟ್ಟಿ ಗೊರೆಹಬ್ಬ ಆಚರಿಸೋಕೆ ಶುರುಮಾಡಿದ್ರು ಅನ್ನುತ್ತೆ ಸ್ಥಳಪುರಾಣ.


    ಇದನ್ನೂ ಓದಿ: Hunting Specialist Rana: ಕಾಡುಗಳ್ಳರಿಗೆ ಸಿಂಹಸ್ವಪ್ನ ಬಂಡಿಪುರದ ರಾಣಾ ಸಾಹಸಗಳಿವು!


    ಸಗಣಿ ಪರ್ವತದಲ್ಲಿ ಆಟ
    ಹಬ್ಬದ ದಿನ ಎಲ್ರ ಮನೆಯಿಂದ್ಲೂ ಸಗಣಿ ತಂದು ಇಲ್ಲಿ ಗುಡ್ಡೆ ಹಾಕಲಾಗುತ್ತೆ. ಸೃಷ್ಟಿಯಾಗೋ ಸಗಣಿ ಪರ್ವತದಲ್ಲಿ ಪರಸ್ಪರ ಒಬ್ರಿಗೊಬ್ರು ಮೈಮರೆತು ಸಗಣಿ ಎರಚಿಕೊಳ್ತಾ ಊರ ದೇವರು ಬೀರೇಶ್ವರನ ಸ್ಮರಣೆ ಮಾಡ್ತಾರೆ.


    ಮಾಹಿತಿ, ವಿಡಿಯೋ ಕೃಪೆ: ನಂದೀಶ್, ಚಾಮರಾಜನಗರ

    Published by:ಗುರುಗಣೇಶ ಡಬ್ಗುಳಿ
    First published: