• Home
  • »
  • News
  • »
  • chamarajanagar
  • »
  • Chamarajanagar: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ISO ಪ್ರಮಾಣ ಪತ್ರ

Chamarajanagar: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ISO ಪ್ರಮಾಣ ಪತ್ರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಗ್ರಾಹಕರೇ ಈ ಸುದ್ದಿ ಮಿಸ್ ಮಾಡ್ದೇ ಓದಿ!

  • Share this:

    ಚಾಮರಾಜನಗರ: ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದ ವಿದ್ಯುತ್ ಕಂಪನಿಗಳಲ್ಲಿ ಒಂದಾದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ISO ಪ್ರಮಾಣ ಪತ್ರ ಲಭಿಸಿದೆ. ದಕ್ಷ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಅಂತರಾಷ್ಟ್ರೀಯ ಮನ್ನಣೆ ಹೊಂದಿದ ISO ಪ್ರಮಾಣ ಪತ್ರ ಪಡೆದ ಕರ್ನಾಟಕದ ಸರ್ಕಾರಿ ಸ್ವಾಮ್ಯದ ಐದು ವಿದ್ಯುತ್ ವಿತರಣಾ ಕಂಪನಿಗಳ ಪೈಕಿ ಮೊದಲ ಕಂಪನಿ ಎಂಬ ಹಿರಿಮೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಪಾತ್ರವಾಗಿದೆ


    M/s NQA, United Kingdom ಮೂಲದ ಅಂತರಾಷ್ಟ್ರೀಯ ISO ಪ್ರಮಾಣೀಕರಣ ಸಂಸ್ಥೆಯು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಡೇಟಾ ಸೆಂಟರ್ ಮತ್ತು ಗುಣಮಟ್ಟದ ಗ್ರಾಹಕ ಕಂಪ್ಲೇಂಟ್ ನಿರ್ವಹಣೆಗಾಗಿ ISO 9001-2015 ಮತ್ತು ಡೇಟಾ ಸೆಂಟರ್‌ನ ಮಾಹಿತಿ ಭದ್ರತಾ ನಿರ್ವಹಣೆಗಾಗಿ ISO 27001-2013 ಪ್ರಮಾಣಪತ್ರವನ್ನು 2022ರ ಡಿಸೆಂಬರ್ 22 ರಿಂದ ಅನ್ವಯವಾಗುವಂತೆ ನೀಡಿದೆ.


    ಈ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು
    ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ವಿದ್ಯುಚ್ಛಕ್ತಿ ಸರಬರಾಜು ಮಾಡುತ್ತಿದೆ. ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಈ ಹಿಂದೆ ದೇಶದಲ್ಲಿಯೇ ಹೊಸ ಪರಿಕಲ್ಪನೆಯಾಗಿದ್ದ ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನವನ್ನು 2014 ರಲ್ಲೇ ಅಳವಡಿಸಿಕೊಂಡಿತ್ತು ಹಾಗು DTLMS (Distribution Transformer Life cycle Management Soft ware) ತಂತ್ರಾಂಶವನ್ನು 2016 ರಲ್ಲಿ ಅವರು ಯಶಸ್ವಿಯಾಗಿ ಅಳವಡಿಸಿಕೊಂಡ ಹೆಗ್ಗಳಿಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ್ದಾಗಿದೆ.


    ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ
    ISO ಪ್ರಮಾಣ ಪತ್ರ ಲಭಿಸಿರುವುದು ಖುಷಿ ತಂದಿದ್ದು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ನೀಡಲು ನಿಗಮ ಬದ್ಧವಾಗಿದೆ, Energy ವಿಭಾಗದಲ್ಲು ISO ಪ್ರಮಾಣಪತ್ರ ಪಡೆಯುವತ್ತ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ದಾಪುಗಾಲು ಇಟ್ಟಿದೆ ಎಂದು ನಿಗಮದ ವ್ಯವಸ್ಥಾಪಕ ಜಯವಿಭವಸ್ವಾಮಿ ತಿಳಿಸಿದ್ದಾರೆ




    QR ಕೋಡ್ ಆಧಾರಿತ ವಿದ್ಯುತ್ ಬಿಲ್
    ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಯಲ್ಲಿ ಬರುವ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗು ಹಾಸನ ಜಿಲ್ಲೆಗಳಲ್ಲಿ 2023 ರ ಜನವರಿ 1ರಿಂದಲೇ ಗ್ರಾಹಕರಿಗೆ QR ಕೋಡ್ ಆಧಾರಿತ ವಿದ್ಯುತ್ ಬಿಲ್ ಹಾಗೂ ಪಾವತಿ ವ್ಯವಸ್ಥೆಯನ್ನು ಸಹಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಪರಿಚಯಿಸಲಾಗಿದೆ.


    ವಿದ್ಯುತ್ ಬಿಲ್ ಪಾವತಿ ಇನ್ನಷ್ಟು ಸುಲಭ!
    ಗ್ರಾಹಕರು ವಿದ್ಯುತ್ ಬಿಲ್ ಪಾವತಿಯನ್ನು ಯಾವುದೇ UPI ಪಾವತಿ ಅಪ್ಲಿಕೇಶನ್ ಬಳಸಿಕೊಂಡು ವಿದ್ಯುತ್ ಬಿಲ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದಾಗಿದೆ.  ತಕ್ಷಣವೇ ತಮ್ಮ ಮೊಬೈಲ್ ‌ನಲ್ಲಿ ಎಲೆಕ್ಟ್ರಾನಿಕ್ ರಸೀದಿಗಳನ್ನು ಪಡೆಯಬಹುದಾಗಿದೆ.


    ಇದನ್ನೂ ಓದಿ: Chamarajanagar: ಮಗಳಿಲ್ಲ ಎಂದು ಸಾಕಿದ ಬೆಕ್ಕಿಗೇ ಸೀಮಂತ ಮಾಡಿದ ದಂಪತಿ!


    ಇದಲ್ಲದೆ ಅಧಿಕ ಮೊತ್ತ ಪಾವತಿ ಮಾಡುವ ಗ್ರಾಹಕರಿಗೆ ಅಥವಾ ಹೆಚ್ಚು ಸ್ಥಾವರಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ವರ್ಚುವಲ್ ಖಾತೆ ಸಂಖ್ಯೆ (VAN) ಬಳಸಿಕೊಂಡು RTGS/NEFT ಮೂಲಕ ಪಾವತಿ ಮಾಡುವ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ರಾಜ್ಯದ ಐದು ವಿದ್ಯುತ್ ಸರಬರಾಜು ನಿಗಮಗಳ ಪೈಕಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಇಂತಹ ಪಾವತಿ ವ್ಯವಸ್ಥೆಯನ್ನು ಪರಿಚಯಿಸುತ್ತಿರುವ ಮೊದಲ ನಿಗಮವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ.


    ಇದನ್ನೂ ಓದಿ: Chamarajanagar: ರೈತರನ್ನು ಬೆಚ್ಚಿಬೀಳಿಸ್ತಿದ್ದ ಆನೆ ಸೆರೆ, ಹೀಗಿತ್ತು ಕಾರ್ಯಾಚರಣೆ


    ಯಾವುದೇ ಸ್ಥಳದಿಂದ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸುಲಭ ಮತ್ತು ತೊಂದರೆ ಮುಕ್ತ ಬಿಲ್ ಪಾವತಿ ಮಾಡಬಹುದು. ಹಾಲಿ ಒಂದು ಬಿಲ್ ವಸೂಲಿಗೆ ಖಾಸಗಿ ಏಜೆನ್ಸಿಗಳಿಗೆ ಎಂಟು ರೂಪಾಯಿ ನೀಡಲಾಗುತ್ತಿದ್ದು ಇದು ಉಳಿತಾಯವಾಗಲಿದೆ. ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಕೆಲಸದ ಹೊರೆ ಕಡಿಮೆಯಾಗಲಿದೆ. ಮಾನವ ಸಂಪನ್ಮೂಲ ಬಳಕೆಯು ಕಡಿಮೆಯಾಗಲಿದೆ. ಬಿಲ್ ಪಾವತಿಯಲ್ಲಿ ಮಾನವ ಹಸ್ತಕ್ಷೇಪ ನಿರ್ಮೂಲನೆಯಾಗಲಿದೆ. ನಿಗಮದ ಕೌಂಟರ್‌ಗಳಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ


    ವರದಿ: ಎಸ್.ಎಂ.ನಂದೀಶ್,  ನ್ಯೂಸ್ 18 ಕನ್ನಡ ಚಾಮರಾಜನಗರ

    Published by:ಗುರುಗಣೇಶ ಡಬ್ಗುಳಿ
    First published: