• Home
  • »
  • News
  • »
  • chamarajanagar
  • »
  • Champa Shashti: ಹಾಲಿನ ಬದಲು ಹುತ್ತಕ್ಕೆ ಕೋಳಿ ರಕ್ತ ಎರೆದು ಚಂಪಾಷಷ್ಠಿ ಆಚರಣೆ

Champa Shashti: ಹಾಲಿನ ಬದಲು ಹುತ್ತಕ್ಕೆ ಕೋಳಿ ರಕ್ತ ಎರೆದು ಚಂಪಾಷಷ್ಠಿ ಆಚರಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೀಗೆ ನಾಗಪೂಜೆ ಮಾಡಿದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ಕಾಣಿಸಿಕೊಳ್ಳುವುದಿಲ್ಲ ಎಂಬ ನಂಬಿಕೆಯನ್ನು ಚಾಮರಾಜನಗರದ ಕೃಷಿ ಸಮುದಾಯ ಹೊಂದಿದೆ.

  • News18 Kannada
  • Last Updated :
  • Chamarajanagar, India
  • Share this:

    ಚಾಮರಾಜನಗರ: ನಾಡಿನ ವಿವಿಧ ನಾಗದೇವರ (Nag Temples)  ಸನ್ನಿಧಾನದಲ್ಲಿ ಚಂಪಾಷಷ್ಠಿ ವಿಶೇಷ ಆಚರಣೆಗಳೊಂದಿಗೆ ನಡೆದಿದೆ. ಆದರೆ ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಚಂಪಾಷಷ್ಠಿ ಆಚರಣೆ ಮಾಡಲಾಗಿದೆ. ಚಾಮರಾಜನಗರ ಪಟ್ಟಣವೂ ಸೇರಿದಂತೆ ಮಲ್ಲಯ್ಯನಪುರ, ಶಿವಪುರ, ಉತ್ತುವಳ್ಳಿ, ಕೊಳ್ಳೆಗಾಲ ಭಾಗಗಳಲ್ಲಿ ಈ ಆಚರಣೆಯನ್ನು ಹೆಚ್ಚಾಗಿ ನಡೆಸಲಾಗುತ್ತದೆ. ಚಂಪಾಷಷ್ಠಿ ಹಬ್ಬ (Champa Shashti Festival) ಆಚರಣೆಯ ವೇಳೆ ಹುತ್ತಕ್ಕೆ ಹಾಲು ಎರೆಯುವ ಸಂಪ್ರದಾಯ ಹಲವೆಡೆ ರೂಢಿಯಲ್ಲಿದೆ. ಆದರೆ ಚಾಮರಾಜನಗರ ಜಿಲ್ಲೆಯ (Chamarajanagar)  ಹಲವು ಭಾಗಗಳಲ್ಲಿ ಹುತ್ತಕ್ಕೆ ಹಾಲನ್ನು ಎರೆಯುವುದಿಲ್ಲ. ಹಾಲಿನ ಬದಲು ಕೋಳಿ ರಕ್ತ (Chicken Blood)  ಎರೆಯುವ ಸಂಪ್ರದಾಯವನ್ನು ಚಾಮರಾಜನಗರದಲ್ಲಿ ಅನುಸರಿಸಲಾಗುತ್ತದೆ.


    ಅಲ್ಲದೇ, ನಾಗಾರಾಧನೆಗೆ ಕೋಳಿ ಬಲಿ ಕೊಡುವ ಸಂಪ್ರದಾಯವೂ ಸಹ ಈ ಭಾಗಗಳಲ್ಲಿ ಅವ್ಯಾಹತವಾಗಿ ರೂಢಿಯಲ್ಲಿದೆ.


    ವಿಭಿನ್ನ ಆಚರಣೆ
    ಚಂಪಾ ಷಷ್ಠಿಯಂದು ನಾಗಾರಾಧನೆಯ ಆಚರಣೆಯಾಗಿ ಹುತ್ತಕ್ಕೆ ಕೋಳಿರಕ್ತ ಎರೆದು ಕೋಳಿ ತಲೆ, ಕೋಳಿ ಮೊಟ್ಟೆ ಮತ್ತು ಬಾಳೆಹಣ್ಣು ಹಾಕಿ ನಾಗಪೂಜೆ ಮಾಡುವ ಸಂಪ್ರದಾಯವನ್ನು ಆಚರಿಸಲಾಗಿದೆ.


    ಹೀಗೆ ಮಾಡಿದ್ರೆ ಹಾವುಗಳು ಕಾಣಿಸಿಕೊಳ್ಳಲ್ವಂತೆ
    ಹೀಗೆ ನಾಗಪೂಜೆ ಮಾಡಿದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ಕಾಣಿಸಿಕೊಳ್ಳುವುದಿಲ್ಲ ಎಂಬ ನಂಬಿಕೆಯನ್ನು ಚಾಮರಾಜನಗರದ ಕೃಷಿ ಸಮುದಾಯ ಹೊಂದಿರುವುದೇ ಈ ಆಚರಣೆಯ ಹಿನ್ನೆಲೆಯಾಗಿದೆ.


    ಮಾಹಿತಿ: ನಂದೀಶ್, ಚಾಮರಾಜನಗರ, ನ್ಯೂಸ್ 18 ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: