• Home
  • »
  • News
  • »
  • chamarajanagar
  • »
  • Chamarajanagar: ಕೊತಕೊತ ಕುದಿಯುವ ಎಣ್ಣೆ, ಬರಿಗೈಲಿ ಕಜ್ಜಾಯ ತೆಗೆದ ಅರ್ಚಕ!

Chamarajanagar: ಕೊತಕೊತ ಕುದಿಯುವ ಎಣ್ಣೆ, ಬರಿಗೈಲಿ ಕಜ್ಜಾಯ ತೆಗೆದ ಅರ್ಚಕ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿರುವ ಸಿದ್ದಪ್ಪಾಜಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ರು. ಸುಮಾರು 2 ಗಂಟೆ ಕಾಲ ಕಾದ ಎಣ್ಣೆಗೆ ಭಕ್ತರು ಹಾಕಿದ ಕಜ್ಜಾಯವನ್ನು ಅರ್ಚಕರು ಬರಿಗೈಲಿ ತೆಗೆಯುವ ಕ್ಷಣಕ್ಕೆ ಸಾಕ್ಷಿಯಾದ್ರು.

  • News18 Kannada
  • Last Updated :
  • Chamarajanagar, India
  • Share this:

    ಚಾಮರಾಜನಗರ: ಆ ಭಕ್ತಿ.. ಆ ಪರವಶತೆಯ ಎದುರು ಕೊತಕೊತ ಕುದಿಯುವ ಎಣ್ಣೆಯೂ ತಣ್ಣನೆಯ ನೀರು! ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವೂ ಗುಲಾಬಿಯ ಎಸಳು! ಉಘೇ ಉಘೇ ಎಂಬ ದೇವಭಕ್ತರ ಘೋಷಣೆಯ ಮಧ್ಯೆಯೇ ನಡೆದೇಹೋಯ್ತು ಮೂಗಿನ ಮೇಲೆ ಬೆರಳಿಡುವಂತಾ ಅಚ್ಚರಿ! ಚಾಮರಾಜನಗರ ಜಿಲ್ಲೆಯ (Chamarajanagar) ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಸಿದ್ದಪ್ಪಾಜಿ ಜಾತ್ರೆಯಲ್ಲೇ (Siddappaji Fair) ಅಚ್ಚರಿ ಸಂಭವಿಸಿತು. ದೇಗುಲದ ಅರ್ಚಕ ಸಿದ್ದರಾಜು ಅವರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆದರು.


    ಇದನ್ನೂ ಓದಿ: Success Story: ಕಾಲಿಲ್ಲದಿದ್ರೂ ಕೃಷಿ ಮಾಡ್ತಾರೆ! ಸಮಸ್ಯೆಗಳಿಗೆ ಸವಾಲ್ ಹಾಕಿರೋ ಸ್ವಾಭಿಮಾನಿ


    ಪ್ರತಿವರ್ಷ ಕಡೇ ಕಾರ್ತಿಕ ಸೋಮವಾರ ನಡೆಯುವ ಈ ಜಾತ್ರೆಯಲ್ಲಿ ಕುದಿಯುವ ಎಣ್ಣೆಯಿಂದ ಕಜ್ಜಾಯ ತೆಗೆದದ್ದು ಭಕ್ತರ ಮೈನವಿರೇಸಿತು.


    ಇದನ್ನೂ ಓದಿ: Inspiration: ಇವರಿಗೆ ಕಾಲೇ ಕೈ! ಕಾಲಿಂದಲೇ ಬೈಕ್ ರಿಪೇರಿ ಮಾಡುವ ಕಲಬುರಗಿಯ ಮೆಕಾನಿಕ್


    ನಡೆದಾಡುವ ದೇವರು ಎಂದೇ ಪ್ರಸಿದ್ಧ ಸಿದ್ದಪ್ಪಾಜಿ
    ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿರುವ ಸಿದ್ದಪ್ಪಾಜಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ರು. ಸುಮಾರು 2 ಗಂಟೆ ಕಾಲ ಕಾದ ಎಣ್ಣೆಗೆ ಭಕ್ತರು ಹಾಕಿದ ಕಜ್ಜಾಯವನ್ನು ಅರ್ಚಕರು ಬರಿಗೈಲಿ ತೆಗೆಯುವ ಕ್ಷಣಕ್ಕೆ ಸಾಕ್ಷಿಯಾದ್ರು.


    ಮಾಹಿತಿ, ವಿಡಿಯೋ: ನಂದೀಶ್ ಚಾಮರಾಜನಗರ, ನ್ಯೂಸ್ 18 ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: