• Home
  • »
  • News
  • »
  • chamarajanagar
  • »
  • Viral Marriage: ಈ ಮದುವೆಗೆ ಎತ್ತುಗಳೇ ವಿಶೇಷ ಅತಿಥಿಗಳು!

Viral Marriage: ಈ ಮದುವೆಗೆ ಎತ್ತುಗಳೇ ವಿಶೇಷ ಅತಿಥಿಗಳು!

ಮದುವೆ ಫೋಟೋ ನೋಡಿ

ಮದುವೆ ಫೋಟೋ ನೋಡಿ

ಎತ್ತುಗಳು ಎರಡು ಲಕ್ಷ ರೂ. ಮೌಲ್ಯದ್ದಾಗಿದ್ದು ಅದರಿಂದಲೇ ಕೃಷಿ ಚಟುವಟಿಕೆ ನಡೆಸುತ್ತೇವೆ. ಮದುವೆ ಸಮಾರಂಭಕ್ಕೆ ಎತ್ತುಗಳನ್ನು ಕರೆತರೋಣವೆಂದು ಪುತ್ರ ಮಹೇಶ್ ಆಸೆ ಪಟ್ಟಿದ್ದರಿಂದ ಛತ್ರಕ್ಕೆ ಕರೆತಂದೆವು ಎಂದು ವರನ ತಂದೆ ಬಸವರಾಜಪ್ಪ‌ ತಿಳಿಸಿದ್ದಾರೆ.

  • Share this:

    ಚಾಮರಾಜನಗರ: ಮದುವೆ ಅಂದ್ರೆ ವರನ ಐಷಾರಾಮಿ ಕಾರು, ಬೈಕ್ ತಂದು ನಿಲ್ಲಿಸುವುದು ಸಾಮಾನ್ಯ. ‌ಆದರೆ, ಇಲ್ಲೋರ್ವ ಯುವ ರೈತ ತನ್ನ ನೆಚ್ಚಿನ ಜೋಡೆತ್ತುಗಳಿಗೆ ವಿಶೇಷ ವೇದಿಕೆ ನಿರ್ಮಿಸಿ ತನ್ನ ಮದುವೆಯನ್ನು ವಿಶಿಷ್ಡವಾಗಿ ನೆರವೇರಿಸಿಕೊಂಡಿದ್ದಾರೆ. ಹೌದು, ಚಾಮರಾಜನಗರ ತಾಲೂಕಿನ (Chamarajanagar) ಪಣ್ಯದಹುಂಡಿ‌ ಗ್ರಾಮದಲ್ಲಿ ವಿಶೇಷ ಮದುವೆಯೊಂದು ನಡೆದಿದ್ದು ಕೃಷಿ ಚಟುವಟಿಕೆಗೆ (Agriculture)  ನೆರವಾಗುವ ತಮ್ಮ ಎತ್ತುಗಳನ್ನು ಮದುವೆ ಛತ್ರಕ್ಕೆ ಕರೆತಂದು ಅದಕ್ಕಾಗಿಯೇ ವೇದಿಕೆ ನಿರ್ಮಿಸಿ ಗೋಪ್ರೀತಿ (Cow Love) ತೋರುವ ಮೂಲಕ ಮದುವೆ (Viral Marriage) ಸಂಭ್ರಮವನ್ನು ಹೆಚ್ಚಿಸಿದ್ದಾರೆ.


    ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರೊಟ್ಟಿಗೆ ತೊರವಳ್ಳಿ ಗ್ರಾಮದ ಯೋಗಿತಾ ಸಪ್ತಪದಿ ತುಳಿದಿದ್ದಾರೆ.




    ಜೋಡೆತ್ತುಗಳಿಂದ ಆಶೀರ್ವಾದ
    ಮದುವೆ ಸಮಾರಂಭಕ್ಕೆ ತಾವು ಸಾಕಿದ ಎತ್ತುಗಳನ್ನು ಕರೆತಂದು ಅವುಗಳು ಕೂಡ ವಿವಾಹಕ್ಕೆ ಸಾಕ್ಷೀಕರಿಸಬೇಕೆಂಬ ವರನ ಆಸೆಯನ್ನು ಇಲ್ಲ ಎನ್ನದ ಕುಟುಂಬಸ್ಥರು ಎತ್ತುಗಳನ್ನು ಸಿಂಗರಿಸಿ, ಅದಕ್ಕಾಗಿ ವೇದಿಕೆಯನ್ನು ನಿರ್ಮಿಸಿ ವಧು-ವರರಿಗೆ ಜೋಡೆತ್ತುಗಳಿಂದ ಆಶೀರ್ವಾದವನ್ನು ಕೊಡಿಸಿ ವಿಶೇಷವಾಗಿ ಮದುವೆ ನಡೆಸಿದ್ದಾರೆ.




    ಎರಡು ಲಕ್ಷ ಮೌಲ್ಯದ ಎತ್ತುಗಳು
    ಎತ್ತುಗಳು ಎರಡು ಲಕ್ಷ ರೂ. ಮೌಲ್ಯದ್ದಾಗಿದ್ದು ಅದರಿಂದಲೇ ಕೃಷಿ ಚಟುವಟಿಕೆ ನಡೆಸುತ್ತೇವೆ. ಮದುವೆ ಸಮಾರಂಭಕ್ಕೆ ಎತ್ತುಗಳನ್ನು ಕರೆತರೋಣವೆಂದು ಪುತ್ರ ಮಹೇಶ್ ಆಸೆ ಪಟ್ಟಿದ್ದರಿಂದ ಛತ್ರಕ್ಕೆ ಕರೆತಂದೆವು ಎಂದು ವರನ ತಂದೆ ಬಸವರಾಜಪ್ಪ‌ ತಿಳಿಸಿದ್ದಾರೆ.


    ಇದನ್ನೂ ಓದಿ: Hubballi News: ವಿಶ್ವದಾಖಲೆ ಬರೆಯೋಕೆ ರೆಡಿಯಾದ ಹುಬ್ಬಳ್ಳಿ!


    ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ‌ ಯುವಕನೋರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಾನು ಸಾಕಿದ ಎತ್ತುಗಳ ಮೇಲೆ ಅಪಾರ ಪ್ರೀತಿ ಇಟ್ಟಿರುವುದು ಶ್ಲಾಘನೀಯ, ವ್ಯವಸಾಯದಿಂದ ವಿಮುಖರಾಗುವವರು ಇವರನ್ನು ನೋಡಿ ಕಲಿಯಬೇಕೆಂದು ಸ್ಥಳೀಯರಾದ ಲಿಂಗರಾಜು ಹರ್ಷ ವ್ಯಕ್ತಪಡಿಸಿದ್ದಾರೆ.




    ಇದನ್ನೂ ಓದಿ: Solo Cycle Trip: ಟ್ರಿಣ್ ಟ್ರಿಣ್, ದಾರಿಬಿಡಿ! ಇದು ಏಕಾಂಗಿ ಯುವತಿಯ ಸೈಕಲ್ ಯಾತ್ರೆ


    ಮದುವೆ ಎಂದರೆ ನೆನಪಿನಲ್ಲಿ ಉಳಿಯುವ ಜೀವನದ ಘಳಿಗೆಯಾಗಿದ್ದು ಅದನ್ನು ಮತ್ತಷ್ಟು ಸ್ಮರಣೀಯ‌‌ ಮಾಡಿಕೊಂಡಿರುವ ಯುವ ರೈತ ಮಹೇಶ್ ಅವರ ಗೋಪ್ರೀತಿ ಮಾದರಿಯಾಗಿದೆ.


    ಮಾಹಿತಿ, ವರದಿ: ನಂದೀಶ್, ಚಾಮರಾಜನಗರ

    Published by:ಗುರುಗಣೇಶ ಡಬ್ಗುಳಿ
    First published: