• Home
  • »
  • News
  • »
  • chamarajanagar
  • »
  • Elephants: ಕರ್ನಾಟಕದಿಂದ ಮಧ್ಯ ಪ್ರದೇಶಕ್ಕೆ ಪಯಣಿಸಲಿವೆ 4 ಆನೆಗಳು!

Elephants: ಕರ್ನಾಟಕದಿಂದ ಮಧ್ಯ ಪ್ರದೇಶಕ್ಕೆ ಪಯಣಿಸಲಿವೆ 4 ಆನೆಗಳು!

ಆನೆಗಳು

ಆನೆಗಳು

ಸದ್ಯ ರಾಮಪುರ ಶಿಬಿರದಲ್ಲಿ 20 ಸಾಕಾನೆಗಳ ಪೈಕಿ 4 ಆನೆಗಳನ್ನು ಮಧ್ಯ ಪ್ರದೇಶಕ್ಕೆ ಹಸ್ತಾಂತರ ಮಾಡಲಾಗಿದೆ.

  • News18 Kannada
  • Last Updated :
  • Chamarajanagar, India
  • Share this:

    ಚಾಮರಾಜನಗರ: ಕರ್ನಾಟಕದಿಂದ ಮಧ್ಯ ಪ್ರದೇಶಕ್ಕೆ ನಾಲ್ಕು ಸಾಕಾನೆಗಳ ಹಸ್ತಾಂತರ ಮಾಡಲಾಗಿದೆ. ಬಂಡೀಪುರದ (Bandipur) ರಾಮಪುರ ಶಿಬಿರದ ಸಾಕಾನೆಗಳು ಮಧ್ಯ ಪ್ರದೇಶ ತಲುಪಲಿವೆ. ಕೃಷ್ಣ, ಗಜ, ಮಹರ್ಷಿ ಹಾಗು ಪೂಜಾ ಎಂಬ ಸಾಕಾನೆಗಳನ್ನು ಬಂಡಿಪುರದಿಂದ ಮಧ್ಯ ಪ್ರದೇಶಕ್ಕೆ (Madhya Pradesh) ಹಸ್ತಾಂತರಿಸಲಾಗಿದೆ.  ಮದ್ಯ ಪ್ರದೇಶದ ಭೂಪಾಲ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ಕೋಬ್ರಾಗಡೆ ಅವರಿಗೆ ಈ ನಾಲ್ಕು ಆನೆಗಳನ್ನು ಹಸ್ತಾಂತರಿಸಲಾಗಿದೆ. ಈ ನಾಲ್ಕು ಸಾಕಾನೆಗಳು ಅರಣ್ಯ ಕಾರ್ಯಾಚರಣೆಯಲ್ಲಿ ಪಳಗಿದ್ದವು.


    ಸದ್ಯ ರಾಮಪುರ ಶಿಬಿರದಲ್ಲಿ 20 ಸಾಕಾನೆಗಳ ಪೈಕಿ 4 ಆನೆಗಳನ್ನು ಮಧ್ಯ ಪ್ರದೇಶಕ್ಕೆ ಹಸ್ತಾಂತರ ಮಾಡಲಾಗಿದೆ.


    ಮಲೆನಾಡಿನಲ್ಲಿ ಚಳ್ಳೆಹಣ್ಣು ತಿನ್ನಿಸಿದ ಮೂಡಿಗೆರೆ ಭೈರ!
    ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆ ಭೀತಿ ಇನ್ನೂ  ನಿಂತಿಲ್ಲ. ಡ್ರೋನ್ ಕ್ಯಾಮಾರಕ್ಕೂ ಚಳ್ಳೆಹಣ್ಣು ತಿನ್ನಿಸಿದ ಮೂಡಿಗೆರೆ ಭೈರನ ಹುಡುಕಾಟಕ್ಕಾಗಿ ಮೈಕ್​ನಲ್ಲಿ ಘೋಷಣೆ ಮಾಡಲಾಗುತ್ತಿದೆ. 


    ಇದನ್ನೂ ಓದಿ: Special Talent: ಕಲಬುರಗಿಯ ಈ ಪೋರನಿಗೆ ಇಂಗ್ಲೀಷ್​ ಸುಲಿದ ಬಾಳೆಹಣ್ಣಿನಷ್ಟೇ ಸಲೀಸು!


    ಚಿಕ್ಕಮಗಳೂರು ತಾಲೂಕಿನ ಆಲ್ದೂರು ಭಾಗದಲ್ಲಿ 3 ಕಾಡಾನೆಗಳು ರೌಂಡ್ಸ್ ಹಾಕುತ್ತಿವೆ. ಕಾಫಿ ತೋಟದಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು, ಸ್ಥಳಿಯರಲ್ಲಿ ಆತಂಕ ಹುಟ್ಟುಹಾಕಿವೆ.


    ಎಚ್ಚರಿಕೆಯಿಂದ ಇರಲು ಸೂಚನೆ
    ಜನ ಎಚ್ಚರಿಕೆಯಿಂದಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮೈಕ್​ನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಕಾರ್ಯಾಚರಣೆ ನಡೆಸಿದರೂ ಸಿಗದ ಕಾಡಾನೆಗಳು ಆತಂಕ ಹೆಚ್ಚಿಸಿವೆ. 


    ಇದನ್ನೂ ಓದಿ: Kannada: ಕನ್ನಡ ತಾಯಿಯ ತೇರು ಹೊರಟಿತು, ಆಹಾ! ವೈಭವ ನೋಡಿ


    ನಾಲ್ಕನೇ ದಿನವೂ ಮುಂದುವರೆದ ಕಾರ್ಯಾಚರಣೆ
    ಡ್ರೋನ್ ಬಳಸಿ ಮೂಡಿಗೆರೆ ಬೈರ ಹಾಗೂ ಮತ್ತೊಂದು ಒಂಟಿ ಸಲಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.  ನಾಲ್ಕನೇ ದಿನವೂ ಕಾರ್ಯಾಚರಣೆ ಮುಂದುವರೆದಿದೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ‌ ಕುಂದೂರು, ತಳವಾರ ಸುತ್ತಮುತ್ತ ಕಾರ್ಯಾಚರಣೆ ನಡೆಸಲಾಗುತ್ತಿದೆ. 

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು