Chamarajanagar: 20 ಕೋಟಿ ಹಣದಲ್ಲಿ ನಿರ್ಮಾಣವಾಯ್ತು 108 ಅಡಿ ಎತ್ತರದ ಮಲೆ ಮಹದೇಶ್ವರ ಪ್ರತಿಮೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬೆಟ್ಟದ ಎತ್ತರದ ಸ್ಥಳ ಎನಿಸಿದ ದೀಪದಗಿರಿ ಒಡ್ಡು ಎಂಬಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಲುಬಂಡೆಯ ರಚನೆ ಮೇಲೆ ಹುಲಿಯ ಮೇಲೆ ಕುಳಿತು ತ್ರಿಶೂಲ ಹಿಡಿದ ಮಹದೇಶ್ವರನ ಪ್ರತಿಮೆ ನಿರ್ಮಾಣಗೊಂಡಿದೆ.

  • Share this:

    ಚಾಮರಾಜನಗರ: ಬೆಟ್ಟದ ಮೇಲೆ ತಲೆ ಎತ್ತಿರುವ ಮಲೆ ಮಹದೇಶ್ವರ, (Male Mahdeshwara) ಬರೋಬ್ಬರಿ 108 ಅಡಿ ಎತ್ತರದ ಬೃಹತ್ ಪ್ರತಿಮೆ! (Male Mahdeshwara Statue) ಕೋಟ್ಯಂತರ ಭಕ್ತರ ಆರಾಧ್ಯ ದೈವ ಕೇಳಿದ ವರವ ಕೊಡುವ ಮಾದಪ್ಪನ ಬೆಟ್ಟ (MM Hills) ದಕ್ಷಿಣ ಭಾರತದ (South India) ಪ್ರಮುಖ ಯಾತ್ರಾ ಸ್ಥಳವೂ ಹೌದು.


    ಮಹದೇಶ್ವರ ಬೆಟ್ಟದಲ್ಲೀಗ ಭಕ್ತರನ್ನು ಆಕರ್ಷಿಸಲು ಮಹದೇಶ್ವರನ 108 ಅಡಿ ಪ್ರತಿಮೆ ನಿರ್ಮಿಸಲಾಗಿದೆ. ಬೆಟ್ಟದ ಎತ್ತರದ ಸ್ಥಳ ಎನಿಸಿದ ದೀಪದಗಿರಿ ಒಡ್ಡು ಎಂಬಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಲುಬಂಡೆಯ ರಚನೆ ಮೇಲೆ ಹುಲಿಯ ಮೇಲೆ ಕುಳಿತು ತ್ರಿಶೂಲ ಹಿಡಿದ ಮಹದೇಶ್ವರನ ಪ್ರತಿಮೆ ನಿರ್ಮಾಣಗೊಂಡಿದೆ.




    ಇದನ್ನೂ ಓದಿ: Success Story: ಬಾಳೆ ದಿಂಡಿನಿಂದಲೇ ಹಣ ಗಳಿಸಿ! ಇವ್ರನ್ನ ನೋಡಿ ಕಲೀರಿ!


    ಈ ಯೋಜನೆಯಲ್ಲಿ ಏನೆಲ್ಲ ಇದೆ?
    ಯೋಜನೆಯ ಪ್ರಕಾರ ಪ್ರತಿಮೆಯ ತಳಭಾಗದಲ್ಲಿ ಗುಹೆ ಮಾದರಿಯ ಎರಡು ಮಹಡಿ ನಿರ್ಮಾಣ, ಮಹದೇಶ್ವರರ ಚಾರಿತ್ರಿಕ ಹಿನ್ನೆಲೆ ಸಾರುವ ಕಲಾಕೃತಿಗಳನ್ನು ಒಳಗೊಂಡ ಮ್ಯೂಸಿಯಂ, ಪಾರ್ಕ್, ಭಕ್ತರ ವಿಶ್ರಾಂತಿಗೆ ಸ್ಥಳಾವಕಾಶ, ಶೌಚಾಲಯ ಸೇರಿದಂತೆ ಹಲವು ಕಾಮಗಾರಿಗಳು ಬಾಕಿಯಿವೆ. ಆದರೂ ತರಾತುರಿಯಲ್ಲಿ ಪ್ರತಿಮೆ ಉದ್ಘಾಟಿಸುತ್ತಿರುವುದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.


    ಇದನ್ನೂ ಓದಿ: Chamarajanagar: ನಿಗಿನಿಗಿ ಉರಿಯುವ ಕೆಂಡವೇ ಈ ದೇವರಿಗೆ ನೈವೇದ್ಯ!




    ಭಕ್ತರಿಗೆ ಒಂದೊಳ್ಳೆ ತಾಣ ಆಗೋದಂತೂ ಪಕ್ಕಾ!
    ಒಟ್ಟಾರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ತಲೆ ಎತ್ತಿರುವ 108 ಅಡಿ ಎತ್ತರದ ಮಹದೇಶ್ವರನ ಪ್ರತಿಮೆ ಭಕ್ತರ ಆಕರ್ಷಣೆ ಕೇಂದ್ರಬಿಂದು ಆಗುವುದಂತೂ ಪಕ್ಕಾ. ಮಲೆ ಮಹದೇಶ್ವರ ಭಕ್ತರು ಇನ್ಮೇಲೆ ಈ ಬೃಹತ್ ಪ್ರತಿಮೆಯ ದರ್ಶನವನ್ನೂ ಪಡೆಯಬಹುದಾಗಿದೆ.


    ವರದಿ: ಎಸ್ ಎಂ. ನಂದೀಶ್, ನ್ಯೂಸ್ 18 , ಚಾಮರಾಜನಗರ

    Published by:ಗುರುಗಣೇಶ ಡಬ್ಗುಳಿ
    First published: