ಸಾಮಾನ್ಯ ಜನರಿಗೆ ಜೀವನ ನಡೆಸಲು ಒಂದು ಉದ್ಯೋಗ (Job) ಬೇಕೇ ಬೇಕು. ವೃತ್ತಿಯಲ್ಲಿ (Career) ಅಭಿವೃದ್ಧಿ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ಹಲವಾರು ಜನರು ಆಗಾಗ ಕೆಲಸ ಬದಲಾಯಿಸುತ್ತಾರೆ. ಆದ್ರೆ ಇದಕ್ಕಾಗಿ ನೀಡಿದ ಅನೇಕ ಸಂದರ್ಶನಗಳು (Job Interview) ವಿಫಲವಾಗಿರುತ್ತವೆ. ಅನೇಕ ಬಾರಿ ನಿಮ್ಮನ್ನು ತಿರಸ್ಕರಿಸಲಾಗುತ್ತದೆ. ನಿಮ್ಮಲ್ಲಿ ಸಾಕಷ್ಟು ಅತ್ಯುತ್ತಮ ಕೌಶಲ್ಯಗಳಿದ್ದರೂ ಅಥವಾ ಆ ರೋಲ್‌ಗೆ ನೀವು ಸಮರ್ಥರಾಗಿದ್ದರೂ ನಿಮ್ಮನ್ನು ಆಯ್ಕೆ ಮಾಡುವುದಿಲ್ಲ. ಏಕೆ ಹೀಗಾಯ್ತು ಅನ್ನೋದಕ್ಕೆ ಉತ್ತರ ಮಾತ್ರ ಸಿಕ್ಕಿರೋದಿಲ್ಲ.
ಸಾಮಾನ್ಯವಾಗಿ ಸಂದರ್ಶನದ ಸಮಯದಲ್ಲಿ ನಿಮ್ಮ ಸಾಮರ್ಥ್ಯದ ಜೊತೆಗೆ ನಿಮ್ಮ ದೇಹಭಾಷೆ, ನೀವು ನೀಡುವ ಮಾಹಿತಿ, ಮಾತನಾಡುವ ರೀತಿಯನ್ನು ಗಮನಿಸುತ್ತಾರೆ. ಹಾಗಿದ್ರೆ ಸಾಮಾನ್ಯವಾಗಿ ಉದ್ಯೋಗಾಕಾಂಕ್ಷಿಗಳು ಮಾಡುವ ತಪ್ಪುಗಳ್ಯಾವವು ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
1. ನೀವು ಹತಾಶರಾದಂತೆ ಕಾಣುವುದನ್ನು ತಪ್ಪಿಸಿ: ಸಂದರ್ಶನಕ್ಕೆ ಹೋಗುವಾಗ ನೀವು ಹತಾಶರಾದಂತೆ ಕಾಣಿಸಿಕೊಳ್ಳುವುದನ್ನು ತಪ್ಪಿಸಿ. ನೀವು ಕಂಪನಿಯಿಂದ ವಜಾಗೊಂಡಿರಬಹುದು, ನಿಮಗೆ ಹಣದ ಅಗತ್ಯವಿರಬಹುದು ಅಥವಾ ನಿಮಗೆ ಕೆಲಸ ಬೇಕೇ ಬೇಕು ಎಂಬಂಥ ಪರಿಸ್ಥಿತಿ ಇರಬಹುದು.
ಆದರೆ ನೀವು ಅದನ್ನು ತೋರಿಸಿಕೊಳ್ಳಬಾರದು. ನಿಮ್ಮ ಮುಖಚರ್ಯೆಯಿಂದ ಸಂದರ್ಶಕರು ಹತಾಶೆಯನ್ನು ಕಂಡುಹಿಡಿಯಬಹುದು. ನಿಮಗೆ ಆ ಕೆಲಸ ಸಿಗದೇ ಹೋದರೆ ನೀವು ವಿಫಲರಾಗಿದ್ದೀರಿ ಎಂದರ್ಥವಲ್ಲ ಎಂಬುದನ್ನು ನಿಮಗೆ ನೀವೇ ಮನದಟ್ಟು ಮಾಡಿಕೊಳ್ಳಿ.
2. ಸ್ವಯಂ-ಅನುಮಾನ ಬೇಡ: ನಿಮ್ಮ ಸಾಮರ್ಥ್ಯಗಳ ಬಗ್ಗೆ ನೀವೇ ಅನುಮಾನ ಹೊಂದಿದ್ದರೆ ಅದು ನಿಮ್ಮ ದೇಹಭಾಷೆಯಲ್ಲಿ ಕಾಣಿಸುತ್ತದೆ. ಸ್ಪಷ್ಟತೆ ಇಲ್ಲದ ಧ್ವನಿ, ಮಾತನಾಡುವ ಧಾಟಿ, ನಿಮ್ಮ ಭುಜಗಳು, ನಿಮ್ಮ ಕಣ್ಣು ಹೀಗೆ ನೀವು ಆತಂಕದ ಬಾಡಿ ಲಾಂಗ್ವೇಜ್ ಹೊಂದಿರಬಹುದು.
ಆದ್ರೆ ಸಂದರ್ಶನದಲ್ಲಿ ಆತ್ಮವಿಶ್ವಾಸ ಹಾಗೂ ಸ್ಪಷ್ಟತೆ ಬಹಳ ಮುಖ್ಯ. ಇದಕ್ಕಾಗಿ ಮಾತನಾಡಲು ಕನಿಷ್ಠ ಮೂರು ಕೌಶಲ್ಯಗಳು ಮತ್ತು ಮೂರು ಸಾಧನೆಗಳನ್ನು ಸಿದ್ಧಪಡಿಸುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಸಾಮರ್ಥ್ಯ, ಅನುಭವ ಹಾಗೂ ಪರಿಣತಿಯ ಬಗ್ಗೆ ಅವರಿಗೆ ಮನವರಿಕೆ ಮಾಡುವುದನ್ನು ಅಭ್ಯಾಸ ಮಾಡಿ.
ಇದನ್ನೂ ಓದಿ: Interview Tips-21: ಎಷ್ಟು ಸ್ಯಾಲರಿ ನಿರೀಕ್ಷಿಸುತ್ತೀರಿ? ಪ್ರಶ್ನೆಗೆ ಉತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
3. ಸಾಕಷ್ಟು ವಿವರಗಳನ್ನು ನೀಡಿ: ಅತ್ಯುತ್ತಮ ಅಭ್ಯರ್ಥಿಗಳು ಸರಿಯಾದ ವಿವರಗಳನ್ನು ನೀಡುತ್ತಾರೆ. ಅವರ ಅತ್ಯಂತ ಪ್ರಭಾವಶಾಲಿ ಸಾಧನೆಗಳನ್ನು ಹಂಚಿಕೊಳ್ಳುತ್ತಾರೆ. ಉದ್ಯೋಗದಾತರಿಗೆ ಸರಿಯಾಗಿ ಅರ್ಥ ಮಾಡಿಸುತ್ತಾರೆ.
ನಿಮ್ಮ ರೆಸ್ಯೂಮ್ ನಲ್ಲಿ ಹೇಳಲಾಗಿರುವ ಸಾಧನೆಯ ಅಂಶಗಳನ್ನು ಸರಿಯಾಗಿ ಮನದಟ್ಟಾಗುವಂತೆ ಅರ್ಥ ಮಾಡಿಸಿ. ಒಂದು ವಾಕ್ಯದಲ್ಲಿ ಉತ್ತರಿಸುವ ಬದಲು ಅದನ್ನು ಹಂತ ಹಂತವಾಗಿ ಹೇಗೆ ಸಾಧಿಸಿದೆ ಎನ್ನುವ ಬಗ್ಗೆ ವಿವರವಾಗಿ ಹೇಳಿ. ಇದರಿಂದ ಸಂದರ್ಶಕರಿಗೆ ನಿಮ್ಮ ಸಾಮರ್ಥ್ಯದ ಅರಿವಾಗುತ್ತದೆ.
4. ನಿಮ್ಮ ದೌರ್ಬಲ್ಯಗಳನ್ನು ಮರೆಮಾಡಲು ಪ್ರಯತ್ನಿಸುವುದು: ನಿಮ್ಮ ದೌರ್ಬಲ್ಯಗಳ ಬಗ್ಗೆ ಮಾತನಾಡುವುದನ್ನು ತಪ್ಪಿಸಲು ನೀವು ಯತ್ನಿಸಬಹುದು. ಆದರೆ ನೀವು ಕೆಲಸ ಮಾಡಲು ಬಯಸುತ್ತೀರಿ ಎಂಬ ಬಗ್ಗೆ ನೀವು ಪಾರದರ್ಶಕವಾಗಿರಬೇಕು. ಇದು ನೀವು ಬೆಳವಣಿಗೆಯ ಮನಸ್ಥಿತಿಯನ್ನು ಹೊಂದಿದ್ದೀರಿ ಎಂದು ತೋರಿಸುತ್ತದೆ.
ನೀವು ಆದರ್ಶ ಅಭ್ಯರ್ಥಿ ಹೇಗಿರುತ್ತಾರೆ ಎಂದು ಸಂದರ್ಶಕರನ್ನು ಕೇಳಿ. ನೀವು ಅವರಿಗಿಂತ ಯಾವುದೇ ರೀತಿಯಲ್ಲಿ ಭಿನ್ನವಾಗಿದ್ದರೆ, ಆ ಅಂತರವನ್ನು ನೀವು ಹೇಗೆ ತುಂಬುತ್ತೀರಿ ಎಂಬುದನ್ನು ವಿವರಿಸಿ.
5. ಫಲಿತಾಂಶ ನಿಮ್ಮ ಕೈಯ್ಯಲ್ಲಿಲ್ಲ: ನೆನಪಿಡಿ ಫಲಿತಾಂಶವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ತೆರೆಮರೆಯಲ್ಲಿ ಏನಾದರೂ ಸಂಭವಿಸಿರಬಹುದು ಅಥವಾ ಅವರು ನೇಮಕಾತಿ ಪ್ರಕ್ರಿಯೆಯನ್ನು ಕೈಬಿಟ್ಟಿರಬಹುದು. ಇನ್ನೂ ಕೆಲವೊಮ್ಮೆ ಬಜೆಟ್ ಮ್ಯಾಚ್ ಆಗದೇ ಇರಬಹುದು. ಹೀಗೆ ಯಾವುದಾದರೂ ಅಂಶಗಳು ಹೊಂದಾಣಿಕೆಯಾಗದೇ ಇರಬಹುದು. ಆದ್ದರಿಂದ ಕಾರಣ ಏನೇ ಇರಬಹುದು.
ಅದನ್ನು ಸರಿಪಡಿಸುವುದು ನಿಮ್ಮ ಸಮಸ್ಯೆಯಲ್ಲ. ಹಾಗಾಗಿ ನೀವು ಮುಂದುವರಿಯಬೇಕು. ಹಾಗೆಯೇ ಬೇರೆ ಅವಕಾಶಗಳಿಗಾಗಿ ಕಾದು, ಅವಕಾಶಗಳು ಬಂದಾಗ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ