Success Story: ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸ್ ಆದ ಮಿಸ್ ಇಂಡಿಯಾ ಫೈನಲಿಸ್ಟ್!

ಐಶ್ವರ್ಯಾ

ಐಶ್ವರ್ಯಾ

2016 ರಲ್ಲಿ, ಐಶ್ವರ್ಯಾ ಶಿಯೋರನ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದರು. 2015 ರಲ್ಲಿ ಮಿಸ್ ದೆಹಲಿ ಕಿರೀಟವನ್ನು ಗೆದ್ದಿದ್ದರು. 2014 ರಲ್ಲಿ ಅವರು ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.

 • Trending Desk
 • 2-MIN READ
 • Last Updated :
 • Delhi, India
 • Share this:

  ಯುಪಿಎಸ್‌ಸಿ ಪರೀಕ್ಷೆಯ (UPSC Exam) ಹೆಸರು ಕೇಳಿದರೆ ಸಾಕು ಅನೇಕರ ಬಾಯಲ್ಲಿ ಬರುವ ಮೊದಲ ಮಾತು ಎಂದರೆ ಅದು ‘ಯಪ್ಪಾ ಎಂತಹ ಕಠಿಣವಾದ ಪರೀಕ್ಷೆ, ಎರಡು ಮೂರು ಸಾರಿ ಚೆನ್ನಾಗಿ ಓದಿಕೊಂಡು ಪರೀಕ್ಷೆ ಬರೆದರೂ  (Exam) ಪಾಸ್ ಆಗುವುದು ತುಂಬಾನೇ ಕಷ್ಟದ ಮಾತು’ ಅಂತ ಹೇಳಬಹುದು. ಹಾಗಂತ ಈ ಪರೀಕ್ಷೆಯನ್ನು ಯಾರೂ ಪಾಸ್ ಮಾಡುವುದಕ್ಕೆ ಆಗುವುದಿಲ್ಲ ಅಂತ ಮಾತ್ರ ನೀವು ಅಂದುಕೊಳ್ಳಬೇಡಿ. ಏಕೆಂದರೆ ಅನೇಕರು ಇದನ್ನು ತಮ್ಮ ಮೊದಲ ಪ್ರಯತ್ನದಲ್ಲಿಯೇ ಪಾಸ್ (Success Story) ಮಾಡುತ್ತಾರೆ, ಆದರೆ ಅವರ ಪರೀಕ್ಷೆ ತಯಾರಿ ಎಲ್ಲರಿಗಿಂತಲೂ ವಿಭಿನ್ನವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  2019 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 93ನೇ ರ್‍ಯಾಂಕ್ ಬಂದಿದ್ರಂತೆ ಐಶ್ವರ್ಯಾ
  ನಿಮಗೆ 2019 ರ ನಾಗರಿಕ ಸೇವಾ ಫಲಿತಾಂಶ ನೆನಪಿದ್ದರೆ, ಮಾಜಿ ಮಿಸ್ ಇಂಡಿಯಾ ಫೈನಲಿಸ್ಟ್ ಐಶ್ವರ್ಯಾ ಶಿಯೋರನ್ ಸಹ ನೆನಪಿರುತ್ತಾರೆ. ಏಕೆಂದರೆ ಐಶ್ವರ್ಯಾ ಅವರು 2019 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 93ನೇ ರ್‍ಯಾಂಕ್ ಗಳಿಸಿದ್ದರು.


  ನಂಬಲಾಗದ ಪ್ರಯಾಣದ ಹೀಗಿತ್ತು!
  ಐಶ್ವರ್ಯಾ ಶಿಯೋರನ್ ಫೆಮಿನಾ ಮಿಸ್ ಇಂಡಿಯಾ 2016 ರ ಫೈನಲಿಸ್ಟ್ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಲೇಖನದಲ್ಲಿ ಐಶ್ವರ್ಯ ಶಿಯೋರನ್ ತಮ್ಮ ಮಿಸ್ ಇಂಡಿಯಾ ಕಾಂಟೆಸ್ಟ್​ನಿಂದ ಹೇಗೆ ಒಬ್ಬ ಐಎಫ್ಎಸ್ ಅಧಿಕಾರಿಯಾಗಿ ಬದಲಾದರು ಎಂಬ ಅವರ ನಂಬಲಾಗದ ಪ್ರಯಾಣದ ಬಗ್ಗೆ ನೀವು ಇನ್ನೊಂದಿಷ್ಟು ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.


  ಕೋಚಿಂಗ್ ಕ್ಲಾಸ್​ಗೂ ಹೋಗಿಲ್ವಂತೆ ಐಶ್ವರ್ಯಾ
  ಶಿಯೋರನ್ ತಮ್ಮ ಮೊದಲ ಪ್ರಯತ್ನದಲ್ಲಿ ಯಾವುದೇ ಕೋಚಿಂಗ್ ತರಗತಿಗೆ ಹಾಜರಾಗದೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಾಲ್ಯದಿಂದಲೂ ಐಶ್ವರ್ಯಾ ತುಂಬಾ ಅಧ್ಯಯನಶೀಲರಾಗಿದ್ದರು. ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಯಾವಾಗಲೂ ಉತ್ತಮ ಅಂಕಗಳನ್ನು ಗಳಿಸುತ್ತಿದ್ದರು.
  ಐಶ್ವರ್ಯಾ 12ನೇ ತರಗತಿಯಲ್ಲಿ 97.5% ಅಂಕಗಳನ್ನು ಗಳಿಸಿದ್ದರು. ಇಡೀ ಶಾಲೆಯಲ್ಲಿಯೇ ಅಗ್ರಸ್ಥಾನದಲ್ಲಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್​ನಿಂದ ಪದವಿ ಪಡೆದಿದ್ದರು.


  ಸರಳ ಆದರೂ ಕಠಿಣ ಪರಿಶ್ರಮ
  ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಅವರು ತುಂಬಾನೇ ಸರಳವಾದ ಆದರೆ ಕಠಿಣ ಪರಿಶ್ರಮದ ತಂತ್ರವನ್ನು ಬಳಸಿದರು. ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಗಾಗಿ ಐಶ್ವರ್ಯಾ ಎಂದಿಗೂ ಯಾವುದೇ ಕೋಚಿಂಗ್ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ದೆಹಲಿ ವಿಶ್ವವಿದ್ಯಾಲಯದ ಪದವೀಧರೆಯಾಗಿರುವ ಶಿಯೋರನ್ ಅವರು ಪರೀಕ್ಷೆಗಳಿಗೆ ತಯಾರಿ ನಡೆಸಲು 2018 ರಲ್ಲಿ ಸಾಮಾಜಿಕ ಮಾಧ್ಯಮ ಬಳಕೆಯನ್ನು ಸಂಪೂರ್ಣವಾಗಿ ತೊರೆದರಂತೆ.


  ಇದನ್ನೂ ಓದಿ: Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! GST ಕೌನ್ಸಿಲ್‌ನಿಂದ ಸಿಹಿ ಸುದ್ದಿ


  ತಮ್ಮ ಪರೀಕ್ಷೆಯ ತಯಾರಿಯ ಬಗ್ಗೆ ಏನ್ ಹೇಳ್ತಾರೆ ಐಶ್ವರ್ಯಾ?
  "ಸ್ವಯಂ ಅಧ್ಯಯನದ ಹೊರತಾಗಿ, ನಾನು ಮಾರ್ಗದರ್ಶಕ ಐಪಿಎಸ್ ಮಹೇಶ್ ಭಾಗವತ್ ಅವರನ್ನು ನಂಬಿದ್ದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಾನು ಹಾಕಿದ ಪ್ರತಿಯೊಂದು ಹಂತದಲ್ಲೂ ಅವರು ನನಗೆ ಸಹಾಯ ಮಾಡಿದ್ದಾರೆ. ನನಗೆ ಈ ಸಂದರ್ಶನದ ಬಗ್ಗೆ ತುಂಬಾನೇ ಚಿಂತೆಯಾಗಿತ್ತು. ಅದನ್ನು ಪಾಸ್ ಮಾಡಲು ಅವರು ನನಗೆ ತುಂಬಾನೇ ಸಹಾಯ ಮಾಡಿದರು. ಅವರು ನನಗೆ ಅಧ್ಯಯನ ಸಾಮಗ್ರಿಗಳು ಮತ್ತು ಅಣಕು ಪರೀಕ್ಷೆಗಳೊಂದಿಗೆ ಮಾರ್ಗದರ್ಶನ ನೀಡಿದರು" ಎಂದು ಶಿಯೋರನ್ ಹೇಳಿದರು.


  ಮಿಸ್ ಇಂಡಿಯಾ ಫೈನಲಿಸ್ಟ್ ಅಗಿದ್ರು ಐಶ್ವರ್ಯಾ
  ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವ ಮೊದಲು ಐಶ್ವರ್ಯಾ ಶಿಯೋರನ್ ರೂಪದರ್ಶಿಯಾಗಿದ್ದರು. ಅವರು 2018 ರಲ್ಲಿ ತಯಾರಿಯನ್ನು ಪ್ರಾರಂಭಿಸಿದರು. ಜೊತೆಗೆ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾದರು.


  ಇದನ್ನೂ ಓದಿ: UGC Announcement: ನಿಮ್ಮ ಭಾಷೆಯಲ್ಲೇ ಪರೀಕ್ಷೆ ಬರೆಯಿರಿ! ಯುಜಿಸಿ ಬಿಡುಗಡೆ ಮಾಡಿದ ಮಹತ್ವದ ಮಾಹಿತಿ ಇಲ್ಲಿದೆ ನೋಡಿ


  2016 ರಲ್ಲಿ, ಐಶ್ವರ್ಯಾ ಶಿಯೋರನ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದರು. 2015 ರಲ್ಲಿ ಮಿಸ್ ದೆಹಲಿ ಕಿರೀಟವನ್ನು ಗೆದ್ದಿದ್ದರು. 2014 ರಲ್ಲಿ ಅವರು ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು