ಪ್ರತಿ ವರ್ಷ ದೇಶಾದ್ಯಂತ ಈ ಕೇಂದ್ರ ಲೋಕಸೇವಾ ಆಯೋಗ (UPSC), ಶಾಸನಬದ್ಧ ಸರ್ಕಾರಿ ಸಂಸ್ಥೆಯು ವಿವಿಧ ಸರ್ಕಾರಿ ಇಲಾಖೆಗಳಿಗೆ ನಾಗರಿಕ ಅಧಿಕಾರಿಗಳನ್ನು (Central Govt Jobs) ಆಯ್ಕೆ ಮಾಡಲು ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ. ಐಎಫ್ಎಸ್ (ಭಾರತೀಯ ವಿದೇಶಾಂಗ ಸೇವೆ), ಐಎಎಸ್ (ಭಾರತೀಯ ಆಡಳಿತ ಸೇವೆ), ಐಆರ್‌ಎಎಸ್ (ಭಾರತೀಯ ಕಂದಾಯ ಸೇವೆ) ಮತ್ತು ಇನ್ನೂ ಎಷ್ಟೋ ಅಸಂಖ್ಯಾತ ಇತರ ಅಖಿಲ ಭಾರತ ಸೇವೆಗಳು ಅವುಗಳಲ್ಲಿ ಸೇರಿವೆ.
ಯುಪಿಎಸ್‌ಸಿ ವಿವಿಧ ಹುದ್ದೆಗಳಿಗೆ ಪರೀಕ್ಷೆಯ ದಿನಾಂಕಗಳಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹೆಚ್ಚು ಬೇಡಿಕೆಯ ನಾಗರಿಕ ಸೇವಾ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ತಿಳಿದಿರುವುದು ತುಂಬಾನೇ ಮುಖ್ಯವಾಗುತ್ತದೆ.
1) ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆ, 2023
ಈ ಪರೀಕ್ಷೆಯನ್ನು ಬರೆಯಲು ಅರ್ಜಿ ಸಲ್ಲಿಸಲು ಕೊನೆ ದಿನಾಂಕ 21 ಫೆಬ್ರುವರಿ 2023 ಆಗಿದ್ದು, ಪರೀಕ್ಷೆ ದಿನಾಂಕವನ್ನು 28 ಮೇ 2023 ರಂದು ನಡೆಸಲಾಗುವುದು.
2) ಭಾರತೀಯ ಅರಣ್ಯ ಸೇವೆ (ಪ್ರಿಲಿಮಿನರಿ) ಪರೀಕ್ಷೆ, 2023 ರಿಂದ ಸಿಎಸ್ (ಪಿ) ಪರೀಕ್ಷೆ 2023
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಸಹ 21 ಫೆಬ್ರುವರಿ 2023 ಆಗಿದ್ದು, ಪರೀಕ್ಷೆಯ ದಿನಾಂಕವನ್ನು 28 ಮೇ 2023 ರಂದು ನಿಗದಿಪಡಿಸಲಾಗಿದೆ.
3) ಐಇಎಸ್ ಮತ್ತು ಐಎಸ್ಎಸ್ ಪರೀಕ್ಷೆ, 2023
ಈ ಪರೀಕ್ಷೆಗಳನ್ನು ಬರೆಯಲು ಇಷ್ಟಪಡುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 19 ಏಪ್ರಿಲ್ 2023 ಆಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09 ಮೇ 2023 ಆಗಿದೆ. ಇನ್ನೂ ಈ ಪರೀಕ್ಷೆಯನ್ನು 23 ಜೂನ್ 2023 ರಂದು ನಡೆಸಲಾಗುವುದು.
4) ಕಂಬೈನ್ಡ್ ಜಿಯೋ ಸೈಂಟಿಸ್ಟ್ (ಮುಖ್ಯ) ಪರೀಕ್ಷೆ, 2023
ಈ ಪರೀಕ್ಷೆಯನ್ನು 24 ಜೂನ್ 2023 ರಂದು ನಡೆಸಲಾಗುವುದು ಎಂದು ತಿಳಿಸಲಾಗಿದೆ.
5) ಎಂಜಿನಿಯರಿಂಗ್ ಸೇವೆಗಳು (ಮುಖ್ಯ) ಪರೀಕ್ಷೆ, 2023
ಈ ಪರೀಕ್ಷೆಯನ್ನು 25 ಜೂನ್ 2023 ರಂದು ನಡೆಸಲಾಗುವುದು.
6) ಸಂಯೋಜಿತ (ಕಂಬೈನ್ಡ್) ವೈದ್ಯಕೀಯ ಸೇವೆಗಳ ಪರೀಕ್ಷೆ, 2023
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 19 ಏಪ್ರಿಲ್ 2023 ಆಗಿದ್ದು, ಕೊನೆಯ ದಿನಾಂಕ 09 ಮೇ 2023 ಆಗಿದೆ, ಪರೀಕ್ಷೆಯನ್ನು 16 ಜುಲೈ 2023 ರಂದು ನಡೆಸಲಾಗುವುದು.
7) ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಎಸಿ) ಪರೀಕ್ಷೆ, 2023
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 26 ಏಪ್ರಿಲ್ 2023 ಆಗಿದ್ದು, ಕೊನೆಯ ದಿನಾಂಕ 16 ಮೇ 2023 ಆಗಿದೆ. ಇನ್ನೂ ಪರೀಕ್ಷೆಯನ್ನು 06 ಆಗಸ್ಟ್ 2023 ರಂದು ನಡೆಸಲಾಗುವುದು.
8) ಎನ್.ಡಿ.ಎ ಮತ್ತು ಎನ್.ಎ ಪರೀಕ್ಷೆ (II), 2023
ಅರ್ಜಿ ಸಲ್ಲಿಸಲು ಆರಂಭ ದಿನಾಂಕ 17 ಮೇ 2023 ಆಗಿದ್ದು, ಕೊನೆಯ ದಿನಾಂಕ 06 ಜೂನ್ 2023 ಆಗಿದೆ. ಈ ಪರೀಕ್ಷೆಯನ್ನು 03 ಸೆಪ್ಟೆಂಬರ್ 2023 ರಂದು ನಡೆಸಲಾಗುವುದು.
9) ಸಿಡಿಎಸ್ ಪರೀಕ್ಷೆ (II), 2023
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 17 ಮೇ 2023 ಆಗಿದ್ದು, ಕೊನೆಯ ದಿನಾಂಕ 06 ಜೂನ್ 2023 ಆಗಿದೆ. ಪರೀಕ್ಷೆಯ ದಿನಾಂಕವನ್ನು 03 ಸೆಪ್ಟೆಂಬರ್ 2023 ರಂದು ನಿಗದಿಪಡಿಸಲಾಗಿದೆ.
10) ನಾಗರಿಕ ಸೇವೆಗಳು (ಮುಖ್ಯ) ಪರೀಕ್ಷೆ, 2023
ಈ ಪರೀಕ್ಷೆಯ ದಿನಾಂಕವನ್ನು 15 ಸೆಪ್ಟೆಂಬರ್ 2023 ರಂದು ನಿಗದಿಪಡಿಸಲಾಗಿದೆ.
11) ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆ, 2023
ಈ ಪರೀಕ್ಷೆಯನ್ನು 26 ನವೆಂಬರ್ 2023 ರಂದು ನಡೆಸಲಾಗುವುದು.
12) S.O./ಸ್ಟೆನೊ (GD-B/GD-I) LDCE
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭದ ದಿನಾಂಕವನ್ನು 13 ಸೆಪ್ಟೆಂಬರ್ 2023 ರಂದು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ಅಕ್ಟೋಬರ್ 2023 ಆಗಿದೆ. ಇನ್ನೂ ಈ ಪರೀಕ್ಷೆಯನ್ನು 09 ಡಿಸೆಂಬರ್ 2023 ರಂದು ನಡೆಸಲಾಗುವುದು.
ಈ ಎಲ್ಲಾ ಹುದ್ದೆಗಳ ಪರೀಕ್ಷೆಗಳನ್ನು ಯುಪಿಎಸ್‌ಸಿ ನಿರ್ವಹಿಸುತ್ತಿರುವುದರಿಂದ, ಅಭ್ಯರ್ಥಿಗಳು ಉತ್ತೀರ್ಣರಾಗುವುದು ಅಷ್ಟೊಂದು ಸುಲಭದ ವಿಷಯವಲ್ಲ, ಆದರೆ ಇದು ಅಸಾಧ್ಯವೂ ಅಲ್ಲ ಅಂತ ಹೇಳಬಹುದು. ತುಲನಾತ್ಮಕವಾಗಿ ಕಡಿಮೆ ಹುದ್ದೆಗಳಿಗೆ ತುಂಬಾನೇ ಸ್ಪರ್ಧೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ